ಕರ್ತವ್ಯ ಲೋಪದಡಿ ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ಕೆ.ಎನ್.ರವಿಕೀರ್ತಿ ಅವರನ್ನು ಅಮಾನತುಪಡಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ) ಮೀನಾಕ್ಷಿ ನೇಗಿ ಆದೇಶಿಸಿದ್ದಾರೆ.
ವಲಯ ವ್ಯಾಪ್ತಿಯಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ರವಿಕೀರ್ತಿ ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ನೀಡದೆ, ನ್ಯಾಯಾಲಯದಲ್ಲಿಯೂ ಯಾವುದೇ ಕ್ರಮವಹಿಸದೆ ಕರ್ತವ್ಯ ಲೋಪ ಎಸಗಿ ಒತ್ತುವರಿದಾರರಿಗೆ ಸಹಾಯ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಯು (ಸಿಎಫ್) ಮೀನಾ ನೇಗಿ ಅವರಿಗೆ ವರದಿ ನೀಡಿದ್ದರು.
ಕೋಲಾರ ಪ್ರಾದೇಶಿಕ ವಿಭಾಗದ ಶ್ರೀನಿವಾಸಪುರ ವಲಯದ ವ್ಯಾಪ್ತಿಯಲ್ಲಿ 4,060 ಎಕರೆ ಅರಣ್ಯ ಪ್ರದೇಶವನ್ನು 1910 ಜುಲೈ 26ರ ಪ್ರಕಾರ ರಾಜ್ಯ ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ. ಕರ್ನಾಟಕ ಅರಣ್ಯ ಪ್ರದೇಶ ಕಾಯ್ದೆ 1963ರ ಸೆಕ್ಷನ್ 23ರ ಪ್ರಕಾರ ಅರಣ್ಯ ಪ್ರದೇಶವು ಮೀಸಲು ಅರಣ್ಯ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಒತ್ತುವರಿಯಾಗಿದ್ದ ಅರಣ್ಯ ಜಮೀನನ್ನು 2023ನೇ ಸಾಲಿನಲ್ಲಿ ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆ ವಿರುದ್ಧ ಅಂದಾಜು 12 ರಿಟ್ ಅರ್ಜಿಗಳು ಹೈಕೋರ್ಟ್‌ನಲ್ಲಿ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿವೆ ಎಂದು ವರದಿಯಲ್ಲಿ ತಿಳಿಸಿದ್ದರು.
ರಿಟ್ ಅರ್ಜಿ (20247/2023) ಸಂಬಂಧಿಸಿದಂತೆ ಒತ್ತುವರಿದಾರ ಕೆ.ಎಂ.ನಾಗರಾಜು ಅವರ ಸುಮಾರು 6 ಎಕರೆ ಜಮೀನನ್ನು ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿರುತ್ತದೆ. ಆ ಜಾಗದಲ್ಲಿ ಕೆಎಫ್‌ಡಿಎ ಯೋಜನೆಯಡಿ ನೆಡುತೋಪು ಬೆಳೆಸಿದ್ದು, 1ನೇ ವರ್ಷದ ನಿರ್ವಹಣೆಯಲ್ಲಿ ಇರುತ್ತವೆ. ಇದಲ್ಲದೆ; ತೆರವುಗೊಳಿಸಿದ ಪ್ರದೇಶದ ಗಡಿಯನ್ನು ಒತ್ತುವರಿಯನ್ನು ಸಂರಕ್ಷಿಸುವ ಸಲುವಾಗಿ ಜಾನುವಾರು ನಿರೋಧ ಕಂದಕ ನಿರ್ಮಿಸಲಾಗಿದೆ. ಅದಕ್ಕೆ ₹ 3.25 ಕೋಟಿ ಖರ್ಚಾಗಿದೆ ಎಂದಿದ್ದಾರೆ.
ಆದರೆ, ಒತ್ತುವರಿದಾರ ನಾಗರಾಜು ಹಾಗೂ ಇನ್ನಿತರರು ರಿಟ್ ಅರ್ಜಿ ಸಂಬಂಧದ ಜಮೀನು ತಮ್ಮ ಪರ ಮಧ್ಯಂತರ ಆದೇಶ ಇದೆ ಎಂದು ಹೇಳಿ ಏಪ್ರಿಲ್ 5ರಂದು ಆರೇಳು ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ಅರಣ್ಯ ಪ್ರದೇಶಕ್ಕೆ ಅನಧಿಕೃತವಾಗಿ ಪ್ರವೇಶ ಮಾಡಿ ಸುಮಾರು 100 ಎಕರೆಯಷ್ಟು ನೆಡುತೋಪು ನಿರ್ಮಾಣ ಮಾಡಿರುವುದನ್ನು ಹಾಳು ಮಾಡಿದ್ದಾರೆ. ಈ ವಿಚಾರವನ್ನು ಕೋಲಾರ ಡಿಸಿಎಫ್ ದೂರವಾಣಿ ಮೂಲಕ ತಿಳಿಸಿರುವುದಾಗಿ ವರದಿಯಲ್ಲಿ ಸಿಎಫ್ ಉಲ್ಲೇಖಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ರವಿಕೀರ್ತಿ ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ; ಅಧಿಕಾರಿ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಾಕ್ಷ್ಯಾಧಾರಗಳಿದ್ದು, ಅಧಿಕಾರಿ ವಿರುದ್ಧ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಸ್ತು ಪ್ರಾಧಿಕಾರಕ್ಕೆ ಮನವರಿಕೆಯಾಗಿದೆ. ಕನಾಟಕ ಅರಣ್ಯ ಸಂಹಿತೆ 1976ರಡಿ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿರುವುದು ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮಗಳು 2021 ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಆಡಳಿತಾತ್ಮ ಹಿತದೃಷ್ಟಿಯಿಂದ, ಶಿಸ್ತು ಪರಿಪಾಲನೆಗಾಗಿ ಗಂಭೀರವಾಗಿ ಪರಿಗಣಿಸಲಾಗಿದೆ, ಅದ್ದರಿಂದ ಇಲಾಖೆಯ ವಿಚಾರಣೆ ಮತ್ತು ತನಿಖೆಯನ್ನು ಬಾಕಿ ಇರಿಸಿ ಅಮಾನತ್ತಿನಲ್ಲಿಡಲಾಗಿದೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…
ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…
ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…
ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…
ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…
ಗೌರಿಬಿದನೂರು: ನಗರದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ, ತಹಸೀಲ್ದಾರ್ ಅರವಿಂದ್…