ಉತ್ತರ ಕನ್ನಡ:-ಅಂಕೋಲಾದ ರಾಮನಗುಳಿ ಬಳಿ ಅನಾಥವಾಗಿದ್ದ ಕಾರಿನಲ್ಲಿ ಕೋಟಿ ರೂ ಹಣ ಸಿಕ್ಕಿದ ಪ್ರಕರಣದ ಆರೋಪಿಗಳಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.
ಜನವರಿ 28ರಂದು ಹುಬ್ಬಳ್ಳಿ ಅಂಕೋಲಾ ಹೆದ್ದಾರಿ ಅಂಚಿನ ರಾಮನಗುಳಿ ಬಳಿ ಐಷಾರಾಮಿ ಕಾರೊಂದು ಅನಾಥವಾಗಿ ಬಿದ್ದಿತ್ತು. ಕಾರಿನ ಗ್ಲಾಸುಗಳು ಒಡೆದಿದ್ದರಿಂದ ಅನೇಕರು ಕಾರು ಅಪಘಾತವಾಗಿದೆ ಎಂದು ಭಾವಿಸಿದ್ದರು. ಪೊಲೀಸರು ಬಂದು ಪರಿಶೀಲಿಸಿದ್ದರು. ಆಗ, ಕಾರಿನ ಒಳಗೆ 1.14 ಲಕ್ಷ ರೂ ಹಣ ಪತ್ತೆಯಾಗಿದ್ದು, ಆ ಹಣದ ಜೊತೆ ಕಾರನ್ನು ಪೊಲೀಸ್‌ ಸಿಬ್ಬಂದಿ ವಶಕ್ಕೆ ಪಡೆದಿದ್ದರು.
ಪ್ರಕರಣದ ವಿಚಾರಣೆ ನಡೆಸಿದಾಗ ಮಂಗಳೂರು ಮೂಲದ ತಲ್ಲತ್ತ ಮತ್ತು ನವಫಾಲ ಆರೋಪಿತರು ಸಿಕ್ಕಿ ಬಿದ್ದಿದ್ದರು. ಮುಂಬೈಯಲ್ಲಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದರು. ತನಿಖೆ ನಡೆಸಿದಾಗ ಕೋಟಿ ಹಣವಿರುವ ಕಾರನ್ನು ಕಳ್ಳರು ದರೋಡೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಆರೋಪಿತರನ್ನು ಗುರುವಾರ ಅಂಕೋಲಾ ಕಡೆ ಕರೆದೊಯ್ಯುತ್ತಿರುವಾಗ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದರು. ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿ ದಾಳಿ ಮಾಡಿದರು.
ಈ ಗುಂಡಿನ ಜಟಾಪಟಿಯಲ್ಲಿ ಮುಂಡಗೋಡದ ಪಿಎಸ್ಐ ಪರಶುರಾಮ್ ಮಿರ್ಜಗಿ ಅಂಕೋಲಾ ಪಿಎಸ್‌ಆಯ್ ಉದ್ದಪ್ಪ ಭೈರಪ್ಪನವರ, ಸಿಬ್ಬಂದಿಗಳಾದ ಯಲ್ಲಾಪುರದ ಬಸವರಾಜ ಹಗರಿ ಹಾಗು ಮುಂಡಗೋಡ ಠಾಣೆಯ ಕೋಟೇಶ ನಾಗರವಳ್ಳಿ ಕಾರ್ಯಾಚರಣೆಯಲ್ಲಿ ಗಾಯಗೊಂಡು ಅಂಕೋಲಾ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅಸ್ಪತ್ರೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ.

Related News

error: Content is protected !!