ಬಳ್ಳಾರಿ, ಫೆಬ್ರವರಿ 1: ಬೇಸಿಗೆ ಪ್ರಾರಂಭಕ್ಕೂ ಮುನ್ನವೇ ಬಳ್ಳಾರಿ ಜಿಲ್ಲೆಯಲ್ಲಿ ತೀವ್ರ ಬಿಸಿಲಿನ ಪ್ರಭಾವ ಹೆಚ್ಚಾಗುತ್ತಿದ್ದು, ಇದರಿಂದಾಗಿ ಅಗ್ನಿ ಅವಘಡಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ.
ಇತ್ತೀಚಿಗೆ ಕೂಡ್ಲಿಗಿ ತಾಲೂಕಿನ ಅಮಲಾಪುರ ಗ್ರಾಮದಲ್ಲಿ ಭೀಕರ ಬೆಂಕಿ ಅಪಘಾತ ಸಂಭವಿಸಿದ್ದು, ಅದರಲ್ಲಿ 40 ಕುರಿಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿ ಕುರಿ ಹಟ್ಟಿಗೆ ವ್ಯಾಪಿಸಿ, ಕೆಲವೇ ನಿಮಿಷಗಳಲ್ಲಿ ಎಲ್ಲವೂ ಭಸ್ಮವಾಗಿದೆ.
ಎಲ್ಲಾ ಕುರಿಗಳು ಬೆಂಕಿಗೆ ಆಹುತಿಯಾಗಿವೆ
ಘಟನೆಯಲ್ಲಿ ಹಾನಿಗೊಳಗಾದ ಕುರಿ ಹಟ್ಟಿ ಸಂಪೂರ್ಣವಾಗಿ ಮರದ ಕಡ್ಡಿಗಳಿಂದ ಹಾಗೂ ಒಣಗಿದ ಹುಲ್ಲಿನಿಂದ ನಿರ್ಮಿಸಲಾಗಿತ್ತು. ಅದೇ ಕಾರಣಕ್ಕೆ ಬೆಂಕಿ ತಕ್ಷಣವೇ ಹಬ್ಬಿ, ಕುರಿಗಳನ್ನು ರಕ್ಷಿಸುವ ಮುನ್ನವೇ ಅವು ಸಜೀವ ದಹನವಾದವು.
ಈ ಕುರಿ ಹಟ್ಟಿ ಹಾಗೂ ಪಕ್ಕದಲ್ಲಿದ್ದ ಧಾನ್ಯ ಒಕ್ಕಣೆ ಮಾಡುವ ಗೋದಾಮು ಅಗಸರ ಶೇಖರಪ್ಪ ಎಂಬುವವರಿಗೆ ಸೇರಿದ್ದು, ಬೆಂಕಿ ಪ್ರಭಾವದಿಂದ ದಾನ್ಯ ಸಂಗ್ರಹಣಾ ಘಟಕದ ಒಂದು ಭಾಗವೂ ಸುಟ್ಟುಹೋಗಿದೆ. ಈ ಅವಘಡದಲ್ಲಿ ಒಟ್ಟು 4 ಲಕ್ಷಕ್ಕೂ ಅಧಿಕ ಮೌಲ್ಯದ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಯಾರೂ ಇರದ ವೇಳೆ ಬೆಂಕಿ ಹತ್ತಿಕೊಂಡು ಅವಘಡ
ಘಟನೆಯಾಗುವ ಸಮಯದಲ್ಲಿ ಹಟ್ಟಿಯ ಬಳಿ ಯಾರೂ ಇಲ್ಲದ ಕಾರಣ ಬೆಂಕಿ ಹೇಗೆ ತಗಲಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಬಿಸಿಲಿನ ತೀವ್ರತೆಗೆ ಒಣ ವಸ್ತುಗಳು ಸುಲಭವಾಗಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯರು ಬೆಂಕಿ ತೀವ್ರತೆ ಗಮನಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರೂ, ಕುರಿಗಳನ್ನು ಉಳಿಸಲು ಸಾಧ್ಯವಾಗಲಿಲ್ಲ.
ರೈತನಿಗೆ ಲಕ್ಷಾಂತರ ರೂ. ನಷ್ಟ
ಈ ಘಟನೆ ಕುರಿಗಾಹಿ ರೈತನಿಗೆ ದೊಡ್ಡ ಆರ್ಥಿಕ ಹಿನ್ನಡೆ ಉಂಟುಮಾಡಿದೆ. ಕಳೆದುಕೊಂಡ ಕುರಿಗಳ ಒಟ್ಟು ಮೌಲ್ಯ 4 ಲಕ್ಷ ರೂ. ಆಗಿದ್ದು, ರೈತ ಕಂಗಾಲಾಗಿದ್ದಾನೆ. ಸ್ಥಳೀಯರು ಹಾಗೂ ಆಡಳಿತಗಾರರು ಈ ಬಗ್ಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ನಿರ್ಲಕ್ಷ್ಯ ತಪ್ಪಿಸಲು ಎಚ್ಚರಿಕೆ ಕಡ್ಡಾಯ
ಬಳ್ಳಾರಿ ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭಕ್ಕೂ ಮುನ್ನವೇ ಬೆಂಕಿ ಅವಘಡಗಳು ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ. ರೈತರು ಮತ್ತು ಕುಟುಂಭಸ್ಥರು ತಮ್ಮ ಮೇವು ಶೆಡ್‌ಗಳು ಮತ್ತು ಗೋದಾಮುಗಳ ಸುತ್ತ ಬಿಗು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅಗತ್ಯ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಈ ಘಟನೆ ಇನ್ನಷ್ಟು ಜನರಿಗೆ ಎಚ್ಚರಿಕೆ ಘಂಟೆಯಾಗಲಿ ಎಂಬ ನಂಬಿಕೆಯೊಂದಿಗೆ, ಗ್ರಾಮಸ್ಥರು ಮತ್ತು ಆಡಳಿತ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಜೋರಾಗಿ ಜಾರಿಗೆ ತರುವ ನಿರೀಕ್ಷೆಯಿದೆ.
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…
ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…