Categories: JobsLatest

ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿ: ಉನ್ನತ ಶಿಕ್ಷಣಕ್ಕೆ ಹೊಸ ಚೈತನ್ಯ

ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಖಾಲಿ ಇರುವ ಸುಮಾರು 4000 ಬೋಧಕ ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ 1000 ಹುದ್ದೆಗಳನ್ನು ಭರ್ತಿ ಮಾಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಯುಜಿಸಿ 12ಬಿ ಮಾನ್ಯತೆ ಪಡೆಯಲು ವಿಶ್ವವಿದ್ಯಾಲಯಗಳಲ್ಲಿ ಕಾಯಂ ಬೋಧಕರಿರಬೇಕು. ಈ ಮಾನ್ಯತೆ ಸಿಕ್ಕರೆ ಕೇಂದ್ರದಿಂದ ಆರ್ಥಿಕ ನೆರವು ದೊರೆಯುತ್ತದೆ. ಆದರೆ ಹಲವು ವರ್ಷಗಳಿಂದ ನೇಮಕಾತಿ ಇಲ್ಲದ ಕಾರಣ, ಅತಿಥಿ ಉಪನ್ಯಾಸಕರ ಮೇಲೆ ಅವಲಂಬನೆ ಹೆಚ್ಚಾಗಿತ್ತು ಮತ್ತು ಸಂಶೋಧನಾ ಚಟುವಟಿಕೆಗಳಿಗೂ ಅಡಚಣೆ ಉಂಟಾಗಿತ್ತು.

ಈ ಹಿನ್ನೆಲೆ ಸರ್ಕಾರ ನೇರ ನೇಮಕಾತಿಗೆ ಮುಂದಾಗಿದ್ದು, ಪಾರದರ್ಶಕತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಉಳಿದ 3000 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಯೋಜನೆ ಇದೆ.

ಈ ಕ್ರಮದಿಂದ ವಿಶ್ವವಿದ್ಯಾಲಯಗಳ ಗುಣಮಟ್ಟ ಹೆಚ್ಚುವುದರ ಜೊತೆಗೆ NET, K-SET, Ph.D ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯೋಗದ ಅವಕಾಶಗಳು ಹೆಚ್ಚಲಿವೆ.

ಭ್ರಷ್ಟರ ಬೇಟೆ

Recent Posts

ಪ್ರೀತಿಯ ಹೆಸರಿನಲ್ಲಿ ಮೋಸ: ಖಾಸಗಿ ವಿಡಿಯೋ ಹಂಚಿಕೆ..!

ಪ್ರೀತಿ ಮಾಡುವುದಾಗಿ ನಂಬಿಸಿ ಯುವತಿಯ ಖಾಸಗಿ ವಿಡಿಯೋವನ್ನು ದಾಖಲಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಆರೋಪದ ಮೇಲೆ ಸುಶಾಂತ್ ಪೂಜಾರಿ ಹಾಗೂ…

3 hours ago

ಗಂಡನ ಸ್ನೇಹಿತನೊಂದಿಗೆ ಶಬನಂ ಅಕ್ರಮ ಸಂಬಂಧ; ಪತ್ನಿ–ಸ್ನೇಹಿತನನ್ನು ಗುಂಡಿಕ್ಕಿ ಕೊಂದ ಪತಿ

ಉತ್ತರ ಪ್ರದೇಶದ ಘಾಜಿಯಾಬಾದ್‌ನ ಟ್ರೋನಿಕಾ ಸಿಟಿಯಲ್ಲಿ ದಾರುಣ ಘಟನೆ ನಡೆದಿದ್ದು, ಪತ್ನಿ ಹಾಗೂ ಆಪ್ತ ಸ್ನೇಹಿತನ ನಡುವೆ ಅಕ್ರಮ ಸಂಬಂಧವಿದೆ…

4 hours ago

10ನೇ ತರಗತಿಯು ಓದದವ 20 ವರ್ಷಗಳಿಂದ ದಂತ ವೈದ್ಯ

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಹಲ್ಲು ಕೀಳಿಸಲು ಹೋದ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಘಟನೆ ಇನ್ನೂ ಮಂಕಾಗುವ ಮುನ್ನವೇ, ಹೈದರಾಬಾದ್‌ನಲ್ಲಿ ನಕಲಿ…

4 hours ago

ಬೆಳಗಾವಿಯಲ್ಲಿ ಇಂಧನ ಕೊರತೆ ಇಲ್ಲ: ವದಂತಿಗಳಿಗೆ ಕಿವಿಗೊಡಬೇಡಿ – ಜಿಲ್ಲಾಧಿಕಾರಿ

ಬೆಳಗಾವಿ ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್ ಹಾಗೂ ಪೆಟ್ರೋಲ್-ಡೀಸೆಲ್ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಪಷ್ಟಪಡಿಸಿದ್ದಾರೆ. ಬಂಕ್‌ಗಳಲ್ಲಿ ಸ್ಟಾಕ್…

15 hours ago

ಅಂಕೋಲಾದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಮೇಲೆ ಕೊಲೆ ಯತ್ನ

ಅಂಕೋಲಾ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರ ಮೇಲೆ ಇಂದು…

22 hours ago

ಅಕ್ರಮ ಸಾಗಾಟದಿಂದ ಪಾರಾದ 7 ಶ್ವಾನಗಳು 17 ಕಿ.ಮೀ. ನಡೆದು ಮನೆ ಸೇರಿ ಮನಸೂರೆಗೈದ ಕಥೆ

ಈಶಾನ್ಯ ಚೀನಾದಲ್ಲಿ ಹೃದಯಸ್ಪರ್ಶಿ ಘಟನೆ ಒಂದಾಗಿದೆ. ಅಕ್ರಮವಾಗಿ ಸಾಗಿಸಲಾಗುತ್ತಿದ್ದ 7 ಶ್ವಾನಗಳು ವಾಹನದಿಂದ ತಪ್ಪಿಸಿಕೊಂಡು, ಸುಮಾರು 17 ಕಿಲೋಮೀಟರ್‌ ದೂರವನ್ನು…

23 hours ago