ದಾವಣಗೆರೆ: ವಾಹನ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಪೋಷಕರಿಗೆ ಪಾಠ ಕಲಿಸುವ ಉದ್ದೇಶದಿಂದ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಅಪ್ರಾಪ್ತ ಮಗನಿಗೆ ಬೈಕ್ ಒಪ್ಪಿಸಿದ್ದ ತಂದೆಗೆ ಸಂಚಾರಿ ಪೊಲೀಸರು 25 ಸಾವಿರ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

ಉತ್ತಮ್‌ಚಂದ್ ಬಡಾವಣೆಯ ನಿವಾಸಿಯಾದ ವ್ಯಕ್ತಿಯೊಬ್ಬರು ತಮ್ಮ ವಯಸ್ಸು ತಲುಪಿಲ್ಲದ ಮಗನಿಗೆ ಬೈಕ್ ನೀಡಿದ್ದರು. ಬಾಲಕ ಎಆರ್‌ಜೆ ಕಾಲೇಜು ಬಳಿ ಬೈಕ್ ಚಾಲನೆ ಮಾಡುತ್ತಿದ್ದಾಗ ಸಂಚಾರಿ ಪೊಲೀಸ್ ಪೆಟ್ರೋಲ್‌ ಪರಿಶೀಲನೆ ವೇಳೆ ತಗುಲಿದ. ವಿಚಾರಣೆ ನಡೆಸಿದ ಪೊಲೀಸರು ಬೈಕ್ ಮಾಲೀಕರನ್ನು ಕರೆಸಿ ಮಾಹಿತಿ ಪಡೆದುಕೊಂಡರು.

ಮಗನಿಗೆ ಪರವಾನಗಿ ಇಲ್ಲದೆ ಬೈಕ್ ನೀಡಿರುವ ತಂದೆಯ ತಪ್ಪಿಗೆ, ಸಂಚಾರಿ ಇಲಾಖೆ 25 ಸಾವಿರ ರೂಪಾಯಿ ದಂಡ ವಿಧಿಸಿ ಕಠಿಣ ಎಚ್ಚರಿಕೆ ನೀಡಿದೆ. ಇದೇ ರೀತಿಯ ತಪ್ಪು ಮತ್ತೆ ಮರುಕಳಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಪೊಲೀಸರು ವಾರ್ನಿಂಗ್ ನೀಡಿದ್ದಾರೆ.

error: Content is protected !!