Cinema

ನಟಿ ರಮೋಲ ದಿನಕ್ಕೆ ಖರ್ಚು ಮಾಡುವ ಮೊತ್ತ ಕೇಳಿ ಫ್ಯಾನ್ಸ್ ದಂಗು..!

ಸೀರಿಯಲ್ ನಟಿ ರಮೋಲ, ‘ಕನ್ನಡತಿ’ ಮತ್ತು ‘ಸೀತಾರಾಮ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವವರು. ಇತ್ತೀಚೆಗೆ, ತಾನು ದಿನಕ್ಕೆ ಖರ್ಚು ಮಾಡುವ ಹಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇದನ್ನು ಕೇಳಿದ ಫ್ಯಾನ್ಸ್ ಆಶ್ಚರ್ಯಗೊಂಡಿದ್ದಾರೆ.

‘ಭರ್ಜರಿ ಬ್ಯಾಚುಲರ್ಸ್ 2’ ಶೋನಲ್ಲಿ ಭಾಗವಹಿಸಿರುವ ರಮೋಲ, ಮೆಂಟರ್ ಆಗಿದ್ದಾರೆ. ಕಾರ್ಯಕ್ರಮದ ನಿರೂಪಕ ನಿರಂಜನ್, ನಟಿ ಅಮೃತಾಗೆ ಅವರ ದಿನಚರಿ ಖರ್ಚಿನ ಬಗ್ಗೆ ಪ್ರಶ್ನೆ ಕೇಳಿದಾಗ, ರೂ. 3,000 ಖರ್ಚು ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ. ಅದೇ ಪ್ರಶ್ನೆಯನ್ನು ‘ಬಿಗ್ ಬಾಸ್’ ಖ್ಯಾತಿಯ ಪವಿ ಪೂವಪ್ಪಗೆ ಕೇಳಿದಾಗ, ರೂ. 1,500ಕ್ಕಿಂತ ಹೆಚ್ಚು ಖರ್ಚಾಗುತ್ತದೆ ಎಂದು ಹೇಳಿದ್ದಾರೆ.

ಇದಾದ ನಂತರ, ರಮೋಲಗೆ ಈ ಪ್ರಶ್ನೆ ಕೇಳಿದಾಗ, “ನಾನು ದಿನಕ್ಕೆ ₹10,000 ಖರ್ಚು ಮಾಡುತ್ತೇನೆ” ಎಂದು ತಿಳಿಸಿದ್ದಾರೆ. ಅವರ ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, “ನಿಮ್ಮ ಗಂಡ ಪುಣ್ಯವಂತ ಬಿಡಿ!” ಎಂದು ನೆಟ್ಟಿಗರು ಹಾಸ್ಯಪ್ರದವಾಗಿ ಪ್ರತಿಕ್ರಿಯಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

1 month ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

1 month ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

3 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

3 months ago

ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ.!!

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…

3 months ago

ಪ್ರೇಯಸಿ ಫೋನ್‌ ಎತ್ತಿಲ್ಲ: ಕೋಪದಲ್ಲಿ ಯುವಕ ಇಡೀ ಹಳ್ಳಿಯ ಕರೆಂಟ್ ಕಟ್!

ಪ್ರೇಯಸಿ ಫೋನ್‌ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…

3 months ago