ಜೈಪುರ್ (ರಾಜಸ್ಥಾನ್): ರಾಜ್ಯದ ಪೊಲೀಸ್ ವ್ಯವಸ್ಥೆಯನ್ನೇ ಆಘಾತಕ್ಕೀಡು ಮಾಡಿರುವ ಘಟನೆ ಜೈಪುರದಲ್ಲಿ ಬೆಳಕಿಗೆ ಬಂದಿದೆ. ಸುಮಾರು ಎರಡು ವರ್ಷಗಳಿಂದ ನಕಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಪೊಲೀಸ್ ಅಕಾಡೆಮಿಯಲ್ಲೇ ತರಬೇತಿಗೆ ಹಾಜರಾಗುತ್ತಿದ್ದ ಯುವತಿಯನ್ನು ಈಗ ಪೊಲೀಸರೇ ಬಂಧಿಸಿದ್ದಾರೆ. ವಾಸ್ತವವಾಗಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣವಾಗದೆ, ನಕಲಿ ಗುರುತು ಪತ್ರಗಳ ಆಧಾರದಲ್ಲಿ ಪೊಲೀಸ್ ವೇಷಧಾರಣೆ ಮಾಡಿಕೊಂಡು ಅಧಿಕೃತ ತರಬೇತಿಗಳಲ್ಲೇ ಪಾಲ್ಗೊಂಡಿದ್ದ ಅವಳು, ಹಿರಿಯ ಅಧಿಕಾರಿಗಳ ಜತೆ ಫೋಟೋ ತೆಗೆಸಿಕೊಂಡಿದ್ದ ದೃಶ್ಯಗಳು ಇದೀಗ ವೈರಲ್ ಆಗುತ್ತಿವೆ.

ಈ ಬಂಡವಾಳ ಮಹಿಳೆಯ ಹೆಸರು ಮೋನಾ ಬುಗಾಲಿಯಾ ಅka ಮೋಲಿ ದೇವಿ. ನಗೌರ್ ಜಿಲ್ಲೆಯ ನಿಂಬಾ ಕೇ ದಾಸ್ ಗ್ರಾಮದ ಟ್ರಕ್ ಚಾಲಕನ ಮಗಳು. 2021ರಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದಿದ್ದರೂ ಆಯ್ಕೆಯಾಗಲಿಲ್ಲ. ಆದರೆ ಅದರಿಂದ ಕೈಚೆಲ್ಲದೆ, ನಕಲಿ ದಾಖಲೆಗಳ ಮೂಲಕ ತರಬೇತಿ ಕೇಂದ್ರ ಪ್ರವೇಶಿಸಿ, ನಿಜವಾದ ಅಧಿಕಾರಿಯಂತೆ ವರ್ತಿಸುತ್ತಿದ್ದಳು.

ಸಾಮಾಜಿಕ ಜಾಲತಾಣಗಳಲ್ಲಿ ‘ಪೊಲೀಸ್ ಅಧಿಕಾರಿ’ಯ ವೇಷ

ಪರೀಕ್ಷೆಯಲ್ಲಿ ಅಯೋಗ್ಯವಾಗಿದ್ದರೂ, ಮೋಲಿ ‘ಕ್ರೀಡಾ ಮೀಸಲಾತಿ’ಯ ಅಡಿಯಲ್ಲಿ ನೇಮಕಗೊಂಡಿರುವುದಾಗಿ ನೆಪ ಹೇಳಿ, ನಿಜವಾದ ಎಸ್‌ಐಗಳ ವಾಟ್ಸಪ್ ಗುಂಪಿಗೆ ಸೇರಿ ಮಾಹಿತಿ ಸಂಗ್ರಹಿಸಿದ್ದಳು. ಇದರ ನೆರವಿನಿಂದ ಅಕಾಡೆಮಿಯ ಪರೇಡ್ ಮೈದಾನದಲ್ಲಿ ಹಾಜರಾಗಿ ತರಬೇತಿಯೊಳಗೆ ಸೇರ್ಪಡೆಯಾಗಿದ್ದಳು. ಪೋಸ್ಟ್‌ಗಳಲ್ಲಿ ತನ್ನನ್ನು ಪೊಲೀಸ್ ಅಧಿಕಾರಿಯೆಂದು ಬಿಂಬಿಸಿ, ಸಮಾಜದಲ್ಲಿ ಪ್ರಭಾವ ಬೀರುವಂತೆಯೂ ಮಾಡಿಕೊಂಡಿದ್ದಳು.

ಅಕಾಡೆಮಿಯ ಭದ್ರತಾ ವ್ಯವಸ್ಥೆಗೆ ತೀವ್ರ ಪ್ರಶ್ನೆ

ಈಕೆಯ ವೇಷಭೂಷಣವನ್ನು ಇತ್ತೀಚೆಗೆ ಜೈಪುರದಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ವೇಳೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ತನಿಖೆ ಮುಂದುವರಿಸಿದ ಪೊಲೀಸರೇ ಶಾಕ್‌ಗೆ ಒಳಗಾಗಿದ್ದಾರೆ. ಸಿಕ್ಕರ್ ಜಿಲ್ಲೆಯಲ್ಲಿ ಬಂಧಿತಳಾದ ನಂತರ, 2023ರಿಂದಲೇ ತಾನು ಪೊಲೀಸ್ ಸಮವಸ್ತ್ರದಲ್ಲಿ ಅಕಾಡೆಮಿಯಲ್ಲಿ ಇದ್ದದ್ದು ಗೊತ್ತಾಗಿದೆ.

ಪೊಲೀಸರು ನಡೆಸಿದ ಸರ್ಜಿ ವೇಳೆ, ಆಕೆಯ ಕೊಠಡಿಯಲ್ಲಿ ಮೂರು ರೀತಿಯ ಸಮವಸ್ತ್ರ, 7 ಲಕ್ಷ ರೂಪಾಯಿ ನಗದು, ನಕಲಿ ಗುರುತುಪತ್ರಗಳು, ಪರೀಕ್ಷಾ ಮಾದರಿ ಪ್ರಶ್ನೆ ಪತ್ರಿಕೆಗಳು ಪತ್ತೆಯಾಗಿವೆ.

ಮೂಲ ಉದ್ದೇಶ: ಹಣ ಹಾಗೂ ಕುಟುಂಬದ ಜವಾಬ್ದಾರಿ

ವಿಚಾರಣೆ ವೇಳೆ ಮೋಲಿ, ಈ ವಂಚನೆಗೆ ತನ್ನ ಕುಟುಂಬದ ಆರ್ಥಿಕ ಹಿನ್ನಲೆ ಕಾರಣ ಎಂದು ಹೇಳಿದ್ದಾಳೆ. ನಾಲ್ವರು ಸೋದರಿಯರ ಜವಾಬ್ದಾರಿ, ಹಾಗೂ ಪೋಷಕರನ್ನು ಮೆಚ್ಚಿಸಲು ತಾನೀ ದಾರಿ ಆರಿಸಿದ್ದೆನೆಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾಳೆ. ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡು, ಕೆಲವೊಮ್ಮೆ ಹಣ ವಸೂಲಿ ಮಾಡಿದ ಆರೋಪವೂ ಮೋಲಿಗೆ ಎದುರಾಗಿದ್ದು, ತನಿಖೆ ಮುಂದುವರಿಯುತ್ತಿದೆ.

Related News

error: Content is protected !!