Latest

ನೋಯ್ಡಾದಲ್ಲಿ ನಕಲಿ ಪನ್ನೀರ್ ಪತ್ತೆ: ಆರೋಗ್ಯಕ್ಕೆ ಭಾರೀ ಅಪಾಯ, ಎಚ್ಚರಿಕೆ ನೀಡಿದ ಇಲಾಖೆ

ನೋಯ್ಡಾ: ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನರಲ್ಲಿ ಹೆಚ್ಚಾದ ಎಚ್ಚರಿಕೆಯ ನಡುವೆಯೇ, ಮಾರುಕಟ್ಟೆಯಲ್ಲಿ ದೊರೆಯುವ “ಆರೋಗ್ಯಕರ” ಆಹಾರಗಳ ಬೆನ್ನಲ್ಲಿಯೇ ಆತಂಕಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಜನ ಸಾಮಾನ್ಯರು ಆರೋಗ್ಯವಂತಿಕೆಗಾಗಿ ತಿನ್ನುವ ಹಲವಾರು ಆಹಾರ ಪದಾರ್ಥಗಳು ನಿಜವಾಗಿ ದೇಹಕ್ಕೆ ಅಪಾಯಕಾರಿಯಾಗಿವೆ ಎಂಬುದು ಈಗ ಬಹಿರಂಗವಾಗಿದೆ.

ಇತ್ತೀಚೆಗೆ ನೋಯ್ಡಾದಲ್ಲಿ ನಡೆದ ದಾಳಿಯಲ್ಲಿ ನಕಲಿ ಪನ್ನೀರ್‌ ತಯಾರಿಸುತ್ತಿದ್ದ ಮಾಫಿಯಾ ಪತ್ತೆಯಾಗಿದ್ದು, ಸುಮಾರು 14 ಕ್ವಿಂಟಾಲ್ ನಕಲಿ ಪನ್ನೀರ್‌ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಈ ಕಾರ್ಯಾಚರಣೆಯು ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನಕಲಿ ಪನ್ನೀರ್‌ – ಹೆಲ್ದಿ ಅಂತಲೇ ಭಯ!

ಪನ್ನೀರ್‌ ಎಂಬುದು ಸಾಮಾನ್ಯವಾಗಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂನಂತಹ ಪೌಷ್ಠಿಕಾಂಶಗಳಿಂದ ತುಂಬಿರುತ್ತದೆ. ಆದ್ದರಿಂದಲೇ ಹಲವರು ದಿನನಿತ್ಯವೂ ಪನ್ನೀರ್ ಸೇವಿಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ನಕಲಿ ಪನ್ನೀರ್‌ಗಳು ವ್ಯಾಪಕವಾಗಿ ಲಭ್ಯವಿರುವುದರಿಂದ ಈಗ ಇದರ ಸೇವನೆ ಭಯದ ಸಂಗತಿಯಾಗಿದೆ.

ಹೆಚ್ಚು ಲಾಭದ ಆಸೆಯಲ್ಲಿ ಇಂತಹ ನಕಲಿ ಪನ್ನೀರ್ ತಯಾರಕರ ಬಳಕೆ ಆಗುತ್ತಿರುವ ಕಚ್ಚಾ ವಸ್ತುಗಳು ಸಾಮಾನ್ಯ ಆರೋಗ್ಯ ಮಾಪದಂಡಗಳಿಗೆ ತಕ್ಕದ್ದಲ್ಲ. ಕಳಪೆ ಗುಣಮಟ್ಟದ ಪಾಮೋಲಿನ್ ಆಯಿಲ್‌, ಪೋಸ್ಟರ್ ವೈಟ್ನರ್, ಬ್ಲೂ ಬಾಕ್ಸ್ ಕೆಮಿಕಲ್ಸ್, ಮತ್ತು ರೆಡ್ ಬುಲ್ ಬೀನ್ಸ್ ಗೆ ಸಪ್ರೋಟಾ ಸೇರಿಸಿ ಕುದಿಸುವ ವಿಧಾನ ಮುಂತಾದ ಅಪಾಯಕಾರಿ ಪದಾರ್ಥಗಳನ್ನು ಬಳಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಹೃದಯದ ಮೇಲೆ ಹಾನಿ

ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಈ ನಕಲಿ ಪನ್ನೀರ್‌ ದೀರ್ಘಕಾಲ ಸೇವನೆಯು ಹೃದಯದ ಮೇಲೆ ಹಾನಿಕಾರಕ ಪರಿಣಾಮ ಬೀರುವ ಸಾಧ್ಯತೆಯಿದೆ. ಪಾಮೋಲಿನ್ ಆಯಿಲ್‌ನ ಅತಿಯಾದ ಬಳಕೆ ಕೊರೊನರಿ ಆರೆಟರಿ ಸಮಸ್ಯೆಗಳಿಗೆ ಕಾರಣವಾಗಬಹುದೆಂಬ ಎಚ್ಚರಿಕೆಯಿದೆ.

6 ತಿಂಗಳ ಹಿಂದೆ ಆರಂಭವಾದ ಚಟುವಟಿಕೆ

ಅದರಲ್ಲೂ, ಈ ನಕಲಿ ಪನ್ನೀರ್‌ನ್ನು ಅಸಲಿ ಪನ್ನೀರ್‌ ಎಂಬ ನಾಮದಲ್ಲಿ ಎನ್‌ಸಿಆರ್‌ ಪ್ರದೇಶದ ಅಂಗಡಿಗಳಿಗೆ ₹180 ರಿಂದ ₹220 ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಬಂಧನದಲ್ಲಿರುವ ಆರೋಪಿಗಳು ತಮ್ಮ ನಕಲಿ ತಂತ್ರಗಳನ್ನು ಪೊಲೀಸರಿಗೆ ಬಿಚ್ಚಿಟ್ಟಿದ್ದಾರೆ. ಸಾರ್ವಜನಿಕರು ನಂಬಿಕೆಯಿಂದ ಖರೀದಿ ಮಾಡುತ್ತಿದ್ದ ಈ ಪನ್ನೀರ್ ನಿಜಕ್ಕೂ ಆರೋಗ್ಯದ ಮೇಲೆ ಬಾಂಬ್‌ ಎಂಬಂತಾಗಿತ್ತು.

nazeer ahamad

Recent Posts

ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಮತ್ತೊಂದು ಆರೋಪ: 2018 ರಿಂದ 2023 ರವರೆಗೆ ಮುಖ್ಯ ಶಿಕ್ಷಕಿಯ ಮೇಲೆ ಲೈಂಗಿಕ ದೌರ್ಜನ್ಯ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್…

12 hours ago

ರಾಜ್ಯದಲ್ಲಿ ಪಾರ್ಲೆ-ಜಿ ಉತ್ಪಾದನೆ ಸ್ಥಗಿತ, ಬಿಸ್ಕೆಟ್ ಅಭಾವದ ಆತಂಕ

Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್‌ಗಳ…

14 hours ago

ನವಲಗುಂದದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಮುಖ್ಯಶಿಕ್ಷಕ ಬಂಧನ

ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…

1 day ago

ಮೇಲಾಧಿಕಾರಿ ಕಿರುಕುಳ ಆರೋಪ: ಪಾವಗಡದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಆತ್ಮಹತ್ಯೆ

ತುಮಕೂರು ಜಿಲ್ಲೆಯ Pavagada ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು…

1 day ago

14ರ ಬಾಲಕನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿ? ವೈರಲ್ ವಿಡಿಯೋಗೆ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. X ನಲ್ಲಿ ವೈರಲ್ ಆಗಿರುವ ಈ ವಿಡಿಯೋ…

1 day ago

ಕೊನೆಗೂ 21 ದಿನಗಳ ಬಳಿಕ ಅಣುಸ್ಥಾವರದ ಮೇಲೆ ಅಮೆರಿಕ ದಾಳಿ! ಇರಾನ್ ಅಣು ಕೇಂದ್ರ ವಿಕಿರಣ ಸೋರಿಕೆ ಭೀತಿ ಹೆಚ್ಚಳ?

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ United States ಮತ್ತು Israel ಪಡೆಗಳು Iranನ ಅತ್ಯಂತ ಪ್ರಮುಖ ಪರಮಾಣು ಕೇಂದ್ರವಾದ Natanz…

1 day ago