ಉದ್ಯೋಗದ ನಿಮಿತ್ತ ಹೋಟೆಲ್‌ನಲ್ಲಿ ವಾಸಿಸುತ್ತಿದ್ದ ಫೀಲ್ಡ್ ಎಂಜಿನಿಯರ್ ಮೋಹಿತ್ ಕುಮಾರ್ ಆತ್ಮಹತ್ಯೆಗೆ ಶರಣಾಗಿರುವ ದುಃಖದ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೋಹಿತ್ ತಮ್ಮ ಪತ್ನಿ ಹಾಗೂ ಆಕೆಯ ಕುಟುಂಬದಿಂದ ಮಾನಸಿಕ ಹಿಂಸೆ ಅನುಭವಿಸುತ್ತಿರುವುದನ್ನು ವಿವರಿಸಿದ ಎಮೋಷನಲ್ ವಿಡಿಯೋ ಸಂದೇಶವೊಂದನ್ನು ರೆಕಾರ್ಡ್ ಮಾಡಿದ್ದಾರೆ.
ವೀಡಿಯೋದಲ್ಲಿ ಭಾವುಕರಾಗಿ ಮಾತನಾಡಿರುವ ಮೋಹಿತ್, “ಈ ವಿಡಿಯೋ ನಿಮಗೆ ಸಿಗುವ ಹೊತ್ತಿಗೆ ನಾನು ಈ ಲೋಕದಲ್ಲಿರಲ್ಲ. ಪುರುಷರಿಗೂ ಪ್ರತ್ಯೇಕವಾಗಿ ಕಾನೂನು ಇದ್ದಿದ್ದರೆ, ಬಹುಶಃ ನಾನು ಈ ತೀರ್ಮಾನ ತೆಗೆದುಕೊಳ್ಳುತ್ತಿರಲಿಲ್ಲ,” ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಆಸ್ತಿಗೆ ಒತ್ತಡ, ಸುಳ್ಳು ಆರೋಪದ ಬೆದರಿಕೆ
ಮೋಹಿತ್ ತಮ್ಮ ಪತ್ನಿ ಪ್ರಿಯಾ ಯಾದವ್ ಹಾಗೂ ಆಕೆಯ ತಾಯಿ–ಮಾಮರಿಂದ ಆಸ್ತಿಯನ್ನು ಅವರ ಹೆಸರಿಗೆ ವರ್ಗಾಯಿಸಲು ಒತ್ತಡ ಬಂದಿದ್ದು, ಹಾಗಿಲ್ಲದಿದ್ದರೆ ದೂರು ನೀಡುವ ಬೆದರಿಕೆ ಬಂದಿತ್ತನ್ನೂ ಹೇಳಿದ್ದಾರೆ. “ನನ್ನ ಹೆಂಡತಿ ಮತ್ತು ಅವಳ ತಾಯಿ ನನ್ನ ಮನಸ್ಸನ್ನು ಕುಗ್ಗಿಸುತ್ತಿದ್ದರು. ಅವರು ಎಲ್ಲಾ ಆಭರಣಗಳು ಹಾಗೂ ಸೀರೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಮನೆ ಮತ್ತು ಆಸ್ತಿಯನ್ನು ಅವರ ಹೆಸರಿಗೆ ಮಾಡದಿದ್ದರೆ, ನನ್ನ ಮೇಲೆ ಹಾಗೂ ನನ್ನ ಕುಟುಂಬದ ಮೇಲೆ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸುವುದಾಗಿ ಬೆದರಿಸುತ್ತಿದ್ದರು,” ಎಂದು ಮೋಹಿತ್ ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಪತ್ನಿಯ ವೈವಹಿಕ ಜೀವನದ ಬದಲಾವಣೆ
ಮೂಲತಃ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಿಂದಾದ ಮೋಹಿತ್, ಬಹು ವರ್ಷಗಳ ಪ್ರೇಮ ಸಂಬಂಧದ ಬಳಿಕ ಪ್ರಿಯಾ ಯಾದವ್ ಅವರನ್ನು ಮದುವೆಯಾಗಿದ್ದರು. ಪ್ರಿಯಾ ಬಿಹಾರದ ಸಮಷ್ಟಿಪುರದಲ್ಲಿ ಶಿಕ್ಷಕಿಯಾಗಿ ಕೆಲಸ ಆರಂಭಿಸಿದ ನಂತರ ಅವರ ವರ್ತನೆ ಬದಲಾಗಿದೆ ಎಂದು ಮೋಹಿತ್ ಕುಟುಂಬದವರು ಆರೋಪಿಸಿದ್ದಾರೆ. ಪ್ರಿಯಾ ತನ್ನ ತಾಯಿ ಮತ್ತು ಸಹೋದರನ ಪ್ರಭಾವದಿಂದ ಮೋಹಿತ್‌ನ್ನು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಳು ಎಂದು ತಿಳಿಸಲಾಗಿದೆ.
ಗರ್ಭಪಾತಕ್ಕೂ ಒತ್ತಡ?
ಮೋಹಿತ್ ತಮ್ಮ ವಿಡಿಯೋದಲ್ಲಿ ಮತ್ತೊಂದು ಗಂಭೀರ ಆರೋಪ ಮಾಡಿದ್ದು, “ನನ್ನ ಹೆಂಡತಿಯ ತಾಯಿ ನನ್ನ ಹೆಂಡತಿಯ ಗರ್ಭಪಾತಕ್ಕೆ ಒತ್ತಡ ಹೇರಿದಳು,” ಎಂಬುದಾಗಿದೆ.
ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಪುರುಷರಿಗೂ ತಕ್ಕ ನ್ಯಾಯ ವ್ಯವಸ್ಥೆ ಇರುವ ಅಗತ್ಯತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮೂಡಿಸಿದೆ. ಪೊಲೀಸರು ಈ ಪ್ರಕರಣದ ಸಂಬಂಧ ತನಿಖೆ ಆರಂಭಿಸಿದ್ದಾರೆ.
ಬಾಗಲಕೋಟೆ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ವಸಂತ ವಾಲಪ್ಪ ನಾಯಕ ಅವರ ಬೆಂಗಳೂರು ಸೇರಿದಂತೆ ಬಾಗಲಕೋಟೆಯಲ್ಲಿರುವ ಮನೆಯ…
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…