
ಬೆಂಗಳೂರು (ಆ.19): ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ವ್ಯಕ್ತಿ ವೃದ್ಧ ಮಹಿಳೆಯೊಂದಿಗೆ ಮಾನವೀಯತೆಯ ಮೀರಿದ ರೀತಿಯಲ್ಲಿ ವರ್ತಿಸುತ್ತಿರುವ ಒಂದು ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. ಈ ದೃಶ್ಯವನ್ನು ನೋಡಿದ ಜನರಲ್ಲಿ ಆಕ್ರೋಶ ಮೂಡಿಸಿದ್ದು, ಕೆಲವರು ಇದು ಕರ್ನಾಟಕದಲ್ಲಿ ನಡೆದ ಘಟನೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಒಬ್ಬ ವೃದ್ಧೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗುವ ದೃಶ್ಯ ಕಾಣಸಿಗುತ್ತದೆ. ಅಲ್ಲದೇ ಆಕೆಯ ಮೇಲೆ ಮಣ್ಣು ಎರಚುತ್ತಾ ಅವಮಾನಕಾರಿ ವರ್ತನೆ ಮಾಡುತ್ತಿರುವುದನ್ನೂ ಸ್ಪಷ್ಟವಾಗಿ ಕಾಣಬಹುದು. ಇದನ್ನು ಆಧಾರವಾಗಿಸಿಕೊಂಡು ಕೆಲ ಫೇಸ್ಬುಕ್ ಬಳಕೆದಾರರು, “ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ 65 ವರ್ಷದ ವ್ಯಕ್ತಿ ತನ್ನ 42 ವರ್ಷದ ಸಹೋದರಿಯನ್ನು ಮದುವೆಯಾಗಿ, ನಂತರ ಮೊದಲ ಹೆಂಡತಿಯನ್ನು ಹೀಗೆ ಹಿಂಸಿಸುತ್ತಿದ್ದಾನೆ” ಎಂದು ಸುಳ್ಳು ಕಥನಗಳನ್ನು ಜೋಡಿಸಿ ಹಂಚಿಕೊಂಡಿದ್ದಾರೆ.
ಗೂಗಲ್ ಲೆನ್ಸ್ ಮೂಲಕ ವಿಡಿಯೋದ ಪ್ರಮುಖ ಚೌಕಟ್ಟುಗಳನ್ನು ಪರಿಶೀಲಿಸಿದಾಗ, ಅದು ಬಾಂಗ್ಲಾದೇಶದ ಡೈಲಿ ಜುಗಾಂಟರ್ ಯೂಟ್ಯೂಬ್ ಚಾನೆಲ್‌ನಲ್ಲಿ ಪತ್ತೆಯಾಯಿತು. ಈ ಚಾನೆಲ್ ಆಗಸ್ಟ್ 10, 2025 ರಂದು ಅದನ್ನು ಪ್ರಕಟಿಸಿದ್ದು, ಘಟನೆಯು ಬಾಂಗ್ಲಾದೇಶದ ಶೆರ್ಪುರ ಪ್ರದೇಶದಲ್ಲಿ ನಡೆದಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.
ಅಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಕರ್ನಾಟಕಕ್ಕೆ ಸಂಬಂಧಪಟ್ಟದ್ದೇ ಅಲ್ಲ. ಸುಳ್ಳು ಪ್ರಚಾರಕ್ಕೆ ಒಳಗಾಗದಂತೆ ನಾಗರಿಕರು ಎಚ್ಚರಿಕೆಯಿಂದ aಇರಬೇಕಾಗಿದೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392