ಮುಂಡಗೋಡ ಇಂದು ಮುಂಡಗೋಡಿನಲ್ಲಿ ಖಾಸಗಿ ಬಜಾಜ್ ಕಂಪನಿಯ ಶಾಖೆಯು ಉದ್ಘಾಟನೆಯಾಗಿದ್ದು ಈ ಯಾಕೆ ಇನ್ನು ಮುಂಡಗೋಡದ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಡಾ. ರಮೇಶ್ ಅಂಬಿಗೇರ್ ಉದ್ಘಾಟಿಸಿದ್ದಾರೆ.
ಇದೇನ್ರೀ ಅವರು ಉದ್ಘಾಟನೆ ಮಾಡಿದರೆ ಏನಾಯ್ತು ಅವರು ಮನುಷ್ಯರೇ ಅಲ್ವಾ ಅನ್ನೋ ಪ್ರಶ್ನೆ ಯಾರಿಗಾದರೂ ಕಾಡುತ್ತೆ.. ಮಾಡ್ಬಾರ್ದು ಯಾಕಂದ್ರೆ ಅವರೊಬ್ಬ ಸರ್ಕಾರಿ ಅಧಿಕಾರಿ ಹಾಗಾಗಿ. ಅತ್ತ ಸರ್ಕಾರ ಈ ಖಾಸಗಿ ಫೈನಾನ್ಸ್ ಕಂಪನಿಗಳಿಗೆ ಮೂಗುದಾರ ಹಾಕಲು ತಯಾರಾಗಿದ್ದರೆ ಇತ್ತ ಈ ಅಧಿಕಾರಿ ಅದೇ ಖಾಸಗಿ ಫೈನಾನ್ಸ್ ಕಂಪನಿಯ ಶಾಖೆಯನ್ನು ಉದ್ಘಾಟನೆ ಮಾಡಿದ್ದಾರೆ ಹಾಗಾದರೆ ಈ ಸರ್ಕಾರಿ ಅಧಿಕಾರಿಗೆ ತನ್ನ ಕರ್ತವ್ಯವೇನು ಎನ್ನುವ ಕನಿಷ್ಠ ಜ್ಞಾನ ಇಲ್ಲವಾ ಎಂದು ಸಾರ್ವಜನಿಕರು, ಶಿಕ್ಷಣ ಪ್ರೇಮಿಗಳು ಮಾತನಾಡುತ್ತಿದ್ದಾರೆ.
ಈ ಹಿಂದೆ ದಲಿತ ಶಿಕ್ಷಕರ ಮೇಲೆ ಕೈ ಮಾಡಿದ್ದು ಇದೆ ಅಧಿಕಾರಿ :-ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿಯಾಗಿರುವ ಡಾ. ಅಂಬಿಗೇರ್ ಅವರು ಹುನಗುಂದ ಪ್ರೌಢಶಾಲೆಯಲ್ಲಿ ಒರ್ವ ದಲಿತ ಶಿಕ್ಷಕನ ಮೇಲೆ ಹಲ್ಲೆ ಮಾಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಇರುತ್ತದೆ. ಹಾಗಾಗಿ ಇವರ ತಂಟೆಗೆ ಯಾರು ಹೋಗಲ್ವೇನೊ ಅನಿಸುತ್ತೆ.
ಶಿಕ್ಷಣಾಧಿಕಾರಿ ಹೇಳೋದೇನು..? ಈ ಬಗ್ಗೆ ಮುಂಡಗೋಡದ ಶಿಕ್ಷಣಾಧಿಕಾರಿಗೆ ಕೇಳಿದಾಗ ವಿಷಯ ಗಮನಕ್ಕೆ ಬಂದಿದ್ದು ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
CWSN ಮಕ್ಕಳ ಅನುದಾನ ದುರ್ಬಳಕೆ: ಇಂದು ಖಾಸಗಿ ಫೈನಾನ್ಸ್ ಕಂಪನಿಯ ಶಾಖೆಯನ್ನು ಉದ್ಘಾಟಿಸಿದ ಈ ಡಾ. ಅಂಬಿಗೇರ್ ಅವರು ಸರಕಾರಿ ಪ್ರೌಢಶಾಲೆ ಕಾತೂರಿನಲ್ಲಿ ಪ್ರಭಾರ ಮುಖ್ಯಾಧ್ಯಾಪಕರಾಗಿದ್ದಾಗ ವಿಶೇಷ ಚೇತನ ಮಕ್ಕಳಿಗೆ ಬರುವ ಅನುದಾನವನ್ನು ಬೇಕಾಬಿಟ್ಟಿ ಬಳಕೆ ಮಾಡಿದ್ದಾರೆ ಸರ್ಕಾರದಿಂದ ಮಕ್ಕಳಿಗೆ ಬರುವ ಅನುದಾನವನ್ನು ಹೇಗೆ ಬಳಕೆ ಮಾಡಬೇಕು ಎಂದು ಗೊತ್ತಿಲ್ಲದ ಈ ಶಿಕ್ಷಕ ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿಯಾಗಿದ್ದು ವಿಪರ್ಯಾಸ.
ಪರಿಶಿಷ್ಟ ಪಂಗಡದ ಸುಳ್ಳು ಪ್ರಮಾಣ ಪತ್ರ ಪಡೆದ ಆರೋಪ: ಈ ಸರ್ಕಾರಿ ಅಧಿಕಾರಿ ಡಾಕ್ಟರ್ ಅಂಬಿಗೇರ ಸಾಹೇಬರು ಸರಕಾರದಿಂದ ಎಸ್ಸಿ ಎಸ್ಟಿ ಸಮುದಾಯದವರಿಗೆ ನೀಡುವ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರವನ್ನು ಸುಳ್ಳು ದಾಖಲೆಗಳನ್ನು ನೀಡಿ ಪಡೆದಿದ್ದಾರೆ ಎನ್ನುವ ಆರೋಪವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುವ ಈ ಪ್ರಮಾಣ ಪತ್ರವನ್ನು ಮುಂಡಗೋಡದ ತಹಸಿಲ್ದಾರ್ ಕಚೇರಿಯ ಸಿಬ್ಬಂದಿಗಳು ದಾಖಲೆಗಳನ್ನು ಪರಿಶೀಲಿಸದೆ ಹೇಗೆ ನೀಡಿದರು ಎಂಬುದು ತಿಳಿಯದಾಗಿದೆ. ಇನ್ನಾದರೂ ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ವ್ಯಕ್ತಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆಯೇ ಅಥವಾ ಇಲ್ಲವೋ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕಿದೆ.
ವರದಿ: ಮಂಜುನಾಥ್ ಎಫ್ ಎಚ್
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…