ಲಖನೌ, ಜುಲೈ 24 – ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಎಂಟು ತಿಂಗಳ ಮಗುವನ್ನು ತಲೆಕೆಳಗೆ ಹಿಡಿದು ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪತ್ನಿಯವರಿಂದ ವರದಕ್ಷಿಣೆ ಪಡೆದುಕೊಳ್ಳುವ ಉದ್ದೇಶದಿಂದ ಈ ಕ್ರೂರತೆ ನಡೆದಿದ್ದು, ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ಸಂಬಂಧ ಗೊತ್ತಾಗಿರುವ ಮಾಹಿತಿ ಪ್ರಕಾರ, ಸಂಜು ಎಂಬಾತ ತನ್ನ ಪತ್ನಿ ಸುಮನ್ ಅವರಿಂದ ಹಣ ಮತ್ತು ಕಾರು ತರಿಸಿಕೊಡುವಂತೆ ನಿರಂತರವಾಗಿ ಮನವಿಮಾಡುತ್ತಿದ್ದ. ಪತ್ನಿ ಈ ಬೇಡಿಕೆಗೆ ಒಪ್ಪದೇ ಹೋಗಿರುವುದರಿಂದ ಕೋಪಗೊಂಡ ಸಂಜು, ತಮ್ಮ ಎಂಟು ತಿಂಗಳ ಮಗುವನ್ನು ತಲೆಕೆಳಗೆ ಹಿಡಿದು ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಈ ಹೃದಯವಿದ್ರಾವಕ ಘಟನೆಯನ್ನು ಉದ್ದೇಶಪೂರ್ವಕವಾಗಿ ಶೂಟ್ ಮಾಡಿ  ಹರಿಬಿಟ್ಟಿದ್ದಾನೆ.

ಈ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಕೂಡ ಕೂಡಲೇ ಕ್ರಮ ಕೈಗೊಂಡಿದ್ದಾರೆ. ರಾಂಪುರದ ಮಿಲಕ್ ಖಾನಮ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ನಿಶಾ ಖತಾನಾ ಅವರ ಮಾಹಿತಿ ಪ್ರಕಾರ, “ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಸಮಾಲೋಚನಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.”

ಮಗುವಿಗೆ ಗಂಭೀರ ಗಾಯಗಳಾಗಿದ್ದು, ಸೊಂಟದ ಭಾಗದಲ್ಲಿ ಮೂಳೆ ಕೀಲುಗಳು ಛಿದ್ರಗೊಂಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಮಗುವಿಗೆ ತಕ್ಷಣ ಚಿಕಿತ್ಸೆ ಅಗತ್ಯವಿದ್ದು, ಆರ್ಥಿಕವಾಗಿ ಕಷ್ಟದಲ್ಲಿರುವ ತಾಯಿಗೆ ಸಹಾಯ ಕೈ ಚಾಚಬೇಕಿದೆ.

ಪತ್ನಿ ಸುಮನ್ ಮಿಡಿತ ತುಂಬಿದ ಧ್ವನಿಯಲ್ಲಿ ಹೇಳಿದರೂ, “ನಮ್ಮ ಮದುವೆ 2023ರಲ್ಲಿ ಆಯಿತು. ಆಗಿನಿಂದಲೇ ಗಂಡ ಮತ್ತು ಆತನ ಕುಟುಂಬ ಹಣ, ಕಾರುಗಾಗಿ ಹಲ್ಲೆ ನಡೆಸುತ್ತಿದ್ದರು. ನನ್ನ ಮಾತು ಕೇಳಿಕೊಳ್ಳುವವರೆ ಇಲ್ಲ. ಈಗ ಮಗು ಅಸ್ವಸ್ಥವಾಗಿದೆ. ನ್ಯಾಯಕ್ಕಾಗಿ ಎಲ್ಲ ದ್ವಾರ ತಟ್ಟುತ್ತಿದ್ದೇನೆ. ಗಂಡನ ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ನನ್ನ ಒತ್ತಾಯ.”

Related News

error: Content is protected !!