ಯಲ್ಲಾಪುರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕಳಚೆ ಭೂಕುಸಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಈ ವೇಳೆ ಹಲವರು ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿದರು. ಇದಕ್ಕೆ ವಿರುದ್ಧವಾಗಿ ಇನ್ನೂ ಕೆಲವರು ಪುನರ್ವಸತಿ ಬದಲು ಪರಿಹಾರ ಕೊಡಿ ಎಂದು ಆಗ್ರಹಿಸಿದರು.
ಈ ಬಗ್ಗೆ ನಿರ್ಣಯ ಕೈಗೊಳ್ಳಲು ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಗ್ರಾಮಸಭೆ ನಡೆಸುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮೌಖಿಕ ಆದೇಶ ನೀಡಿದರು. ಸಂತ್ರಸ್ತರಿಗೆ ಪುನರ್ವಸತಿ ಅಥವಾ ಪರಿಹಾರವಾ ಎಂಬ ವಿಷಯದಲ್ಲಿನ ಗೊಂದಲವನ್ನು ಆ ಗ್ರಾಮಸಭೆಯಲ್ಲಿ ಬಗೆಹರಿಸಿಕೊಳ್ಳುವಂತೆ ಅವರು ಸೂಚಿಸಿದರು.
ಯಲ್ಲಾಪುರಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮೊದಲು ನೇರವಾಗಿ ಕಳಚೆಗೆ ತೆರಳಿದರು. ಅಲ್ಲಿನ ಕಮಲಾಕರ ಗಾಂವಕರ್ ಅವರ ಮನೆ ಹಾಗೂ ಸುತ್ತಲಿನ ಪರಿಸರ ವೀಕ್ಷಿಸಿದರು. ತೋಟಕ್ಕೆ ತೆರಳಿ ಅಲ್ಲಿ ಆದದಹಾನಿಯ ಬಗ್ಗೆ ಅಂದಾಜಿಸಿದರು. ರಸ್ತೆ ಬದಿಯ ಇನ್ನೆರಡು ತೋಟಗಳನ್ನು ವೀಕ್ಷಿಸಿ ಹಾನಿ ತಡೆಗೆ ಕೈಗೊಳ್ಳಬಹುದಾದ ಮಾರ್ಗಗಳ ಬಗ್ಗೆ ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನವರ್ ಹಾಗೂ ಕಂದಾಯ ನಿರೀಕ್ಷಕಿ ಜ್ಯೋತಿ ನಾಯ್ಕ ಅವರೊಂದಿಗೆ ಚರ್ಚಿಸಿದರು. ತಳಕೆ ಬೈಲ್ ಭೂಕುಸಿತ ಸ್ಥಳ ವೀಕ್ಷಣೆ ಮಾಡಿದ ಅವರು ನಂತರ ಬೀಗ ಬೀಗಾರ-ಬಾಗಿನಕಟ್ಟಾ ರಸ್ತೆ ಸಂಪರ್ಕ ಕಡಿತವಾಗಿರುವುದನ್ನು ಗಮನಿಸಿದರು
ಅಲ್ಲಿದ್ದ ಜನ ತಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟರು. ಇಡೀ ಊರನ್ನು ಸ್ಥಳಾಂತರಿಸಲು ಕಾನೂನಿನಲ್ಲಿ ಅವಕಾಶವಿದ್ದು, ಕೆಲ ಕುಟುಂಬಗಳಿಗೆ ಮಾತ್ರ ಬೇರೆಡೆ ವಸತಿ ಕಲ್ಪಿಸುವುದು ಕಷ್ಟ ವಸತಿಗೆ ಬೇರೆ ಜಾಗ ನೀಡಿ, ಪರಿಹಾರ ಕೊಡುವುದರ ಜೊತೆ ಇಲ್ಲಿನ ತೋಟವನ್ನು ಹಾಗೇ ಬಿಡಿ ಎಂಬ ಬೇಡಿಕೆ ಈಡೇರಿಕೆಗೆ ಅವಕಾಶವಿಲ್ಲ ಎಂದು ಅಲ್ಲಿದ್ದವರಿಗೆ ತಿಳಿಹೇಳಿದರು.
ಗ್ರಾಮಸ್ಥರು ಒಗ್ಗಟ್ಟಿನಿಂದ ನಿರ್ಣಯ ಕೈಗೊಂಡರೆ ಮಾತ್ರ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿ ಪುನರ್ವಸತಿ ಸಾಧ್ಯ ಎನ್ನುವದರ ಬಗ್ಗೆ ವಿವರಿಸಿದರು. ಗ್ರಾಮಸ್ಥರ ಮನವೊಲೈಸಿ ಸರಿಯಾದ ನಿರ್ಣಯ ಕೈಗೊಳ್ಳಲು ಸಹಾಯ ಮಾಡುವಂತೆ ಅಧೀನ ಅಧಿಕಾರಿಗಳಿಗೆ ತಿಳಿಸಿದರು. ನಂತರ ತಹಶೀಲ್ದಾರ್ ಕಚೇರಿಯ ರೆಕಾರ್ಡ್ ರೂಂಗೆ ತೆರಳಿ ದಾಖಲೆಗಳನ್ನು ಗಮನಿಸಿದರು. ಗ್ರಾಮ ಆಡಳಿತಾಧಿಕಾರಿಗಳಿಗೆ ಅಗತ್ಯವಿರುವ ಕಪಾಟುಗಳನ್ನು ಹಸ್ತಾಂತರಿಸಿದರು. ಗ್ರಾಮ ಆಡಳಿತಾಧಿಕಾರಿ ದೀಪಿಕಾ ಹೊಸನಿ, ಪಿಡಿಓ ಗಂಗಾಧರ ಭಟ್ಟ, ತಾ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ್ ಜೊತೆಗಿದ್ದರು.
ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…
ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…
ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…
ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…
ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…
ಗೌರಿಬಿದನೂರು: ನಗರದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ, ತಹಸೀಲ್ದಾರ್ ಅರವಿಂದ್…