Latest

ಬೆಳಗಿನ ದಾಳಿಯಿಂದ ಧಾರವಾಡದ ರೌಡಿಶೀಟರ್‌ಗಳಿಗೆ ಶಾಕ್: ಪರೇಡ್‌ ಮೂಲಕ ಪೊಲೀಸರಿಂದ ಖಡಕ್ ಎಚ್ಚರಿಕೆ!

ಧಾರವಾಡ: ನಗರದ ರೌಡಿಶೀಟರ್‌ಗಳಿಗೆ ಸೋಮವಾರದ ಬೆಳಿಗ್ಗೆ ಬೀಗದ ಬಾಗಿಲು ತೆರೆಯುವಷ್ಟರಲ್ಲೇ ಪೊಲೀಸ್‌ ಸಿಬ್ಬಂದಿಗಳು ಅವರ ಮನೆ ಮುಂದೆ ನಿಂತಿದ್ದರು ದೃಶ್ಯ ಕಂಡು ಕೆಲವರು ಬೆಚ್ಚಿಬಿದ್ದರು. ಈ ಹಿಂದೆಂದೂ ಅನುಭವಿಸದ ಅನುಭವವನ್ನು ಈ ಬಾರಿ ಧಾರವಾಡದ 1158 ರೌಡಿಶೀಟರ್‌ಗಳು ಅನುಭವಿಸಿದರು!

ಧಾರವಾಡ ನಗರ ಪೊಲೀಸ್ ಇಲಾಖೆ ಈಚೆಗೆ ಕಾನೂನು ಸುವ್ಯವಸ್ಥೆ ಖಾತರಿಗಾಗಿ ನಿರ್ದಿಷ್ಟ ಪ್ಲಾನ್ ರೂಪಿಸಿಕೊಂಡು, ನಗರದ ವಿದ್ಯಾಗಿರಿ, ಉಪನಗರ ಹಾಗೂ ಶಹರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಎಲ್ಲ ರೌಡಿಶೀಟರ್‌ಗಳ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತು. ಈ ಸಮಯದಲ್ಲಿ 80 ಮೊಬೈಲ್ ಫೋನ್‌ಗಳು, 14 ಮೋಟಾರ್ ಸೈಕಲ್‌ಗಳು ಹಾಗೂ 2 ಮಾಕಾಸ್ತ್ರಗಳು ವಶಕ್ಕೆ ಪಡೆಯಲಾಯಿತು.

ಪುನಃ ಮತುಕೊಂಡ ರೌಡಿಶೀಟರ್‌ಗಳಿಗೆ ಮತ್ತೊಮ್ಮೆ ಕಾನೂನುಬದ್ಧ ಎಚ್ಚರಿಕೆಯನ್ನು ನೀಡಲು ಪೊಲೀಸರು ಅವರನ್ನು ಕರೆಸಿಸಿಕೊಂಡು ಪರೇಡ್‌ ನಡೆಸಿದರು. ಈ ವೇಳೆ ಮಾತನಾಡಿದ ಧಾರವಾಡ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ದನಗೌಡರ್ ಅವರು, ಇನ್ನು ಮುಂದೆ ಯಾರೇನು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದರೆ, ತಪ್ಪು ಮಾಡಿಕೊಂಡರೆ ಕ್ಷಮೆಯಿಲ್ಲ. ಪರಿಣಾಮ ತುಂಬಾ ಕಠಿಣವಾಗಲಿದೆ,” ಎಂದು ಖಡಕ್ ಸಂದೇಶ ನೀಡಿದರು.

ಈ ವಿಶೇಷ ಪರೇಡ್‌ನಲ್ಲಿ ಒಟ್ಟು 737 ರೌಡಿಶೀಟರ್‌ಗಳು, 20 ಡ್ರಗ್ ಪೆಡ್ಲರ್‌ಗಳು ಹಾಗೂ 227 ಡ್ರಗ್ಸ್ ಬಳಕೆದಾರರು ಪಾಲ್ಗೊಂಡಿದ್ದರು. ಇಂತಹ ಚಟುವಟಿಕೆಗಳಲ್ಲಿರುವ ಎಂಓಬಿ (ಹಾಗೇ ಮತ್ತೆ ಮತ್ತೆ ಗಲಾಟೆಗಳಿಗೆ ಒಳಪಡುವ ವ್ಯಕ್ತಿಗಳು) 72 ಜನರನ್ನೂ ಪರೇಡ್‌ಗೆ ಒಳಪಡಿಸಲಾಗಿದೆ.

“ಕಾನೂನು ಬಾಹಿರ ಚಟುವಟಿಕೆಗಳಿಗೆ ನಗರದಲ್ಲಿ ಸ್ಥಳವಿಲ್ಲ. ಯಾರೇನು ವಿದ್ರೋಹ ಮಾಡುವ ಯತ್ನ ಮಾಡಿದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಈ ಕಾರ್ಯಾಚರಣೆಯಲ್ಲಿ ಧಾರವಾಡ ಶಹರ ಠಾಣೆಯ ಇನ್ಸ್ಪೆಕ್ಟರ್ ಎನ್.ಸಿ. ಕಾಡದೇವರ ಮಠ, ಉಪನಗರ ಠಾಣೆಯ ಇನ್ಸ್ಪೆಕ್ಟರ್ ದಯಾನಂದ್, ವಿದ್ಯಾಗಿರಿ ಠಾಣೆಯ ಇನ್ಸ್ಪೆಕ್ಟರ್ ಸಂಗಮೇಶ್ ದಿಡ್ಡಿಗನಾಳ ಮತ್ತು ಹಲವಾರು ಪೊಲೀಸ್ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದ್ದರು.

ವರದಿ: ಮಹೇಶ್ ನಿಕ್ಕಮ್ಮನವರ್

nazeer ahamad

Recent Posts

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

2 minutes ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

4 minutes ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

34 minutes ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

56 minutes ago

ಗೌರಿಬಿದನೂರಿನಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಅಕ್ರಮ ಬಳಕೆ ವಿರುದ್ಧ ದಾಳಿ – 36 ಸಿಲಿಂಡರ್‌ಗಳು ಜಪ್ತಿ

ಗೌರಿಬಿದನೂರು: ನಗರದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ, ತಹಸೀಲ್ದಾರ್ ಅರವಿಂದ್…

1 hour ago

ರೀಲ್ಸ್ ಹುಚ್ಚಾಟದ ದುರಂತ: ಹುಬ್ಬಳ್ಳಿಯಲ್ಲಿ ಬಾಲಕ ಸಾವು – ಇಬ್ಬರ ಬಂಧನ

ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡುವ ಹುಚ್ಚಾಟದಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ 15 ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು…

5 hours ago