Latest

ಹೆದ್ದಾರಿಯಲ್ಲೇ ಶಾಮಿಯಾನ ಹಾಕಿ ಧರಣಿ; ಬೆಂಗಳೂರು-ಮೈಸೂರು ರಸ್ತೆ ಬಂದ್​

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ 15ಕ್ಕೂ ಹೆಚ್ಚು ಹಳ್ಳಿಗಳ ಜನರು ಹೆದ್ದಾರಿ ಬಂದ್ ಮಾಡಿದ್ದು ಕಾರಣವಾಗಿದೆ. ಹನಕೆರೆ ಸಮೀಪ ಅಂಡರ್‌ಪಾಸ್ ನಿರ್ಮಾಣದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೊಂದರೆ ಆಗಲಿದೆ ಎಂದಿದ್ದಾರೆ. ಇದಕ್ಕೆಲದಕ್ಕೂ ಕಾರಣ ಗ್ರಾಮದಿಂದ ಸುಮಾರು 200 ಮೀಟರ್ ದೂರದಲ್ಲಿ ಅಂಡರ್‌ಪಾಸ್ ನಿರ್ಮಾಣವಾಗುತ್ತಿರುವುದು. ಗ್ರಾಮದ ಹೊರವಲಯದಲ್ಲಿ ಅಂಡರ್‌ಪಾಸ್ ಇರುವುದರಿಂದ ಸರಗಳ್ಳತನ, ದರೋಡೆ ಪ್ರಕರಣಗಳು ನಡೆಯುವ ಬಗ್ಗೆ ಆತಂಕಗೊಂಡಿರುವ ಗ್ರಾಮಸ್ಥರು ಸಂಜೆ ಹಾಗೂ ರಾತ್ರಿ ವೇಳೆ ಓಡಾಡಲು ಭಯಪಡುತ್ತಿದ್ದಾರೆ.
ಭರವಸೆ ಕೊಟ್ಟು ಕಾಮಗಾರಿ ಮಾಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು. ಪ್ರತಿಭಟನೆ ಮಾಡುತ್ತಿದ್ದಾರೆ. ಗ್ರಾಮಸ್ಥರು, ವಿದ್ಯಾರ್ಥಿನಿಯರು, ಮಹಿಳೆಯರಿಗೆ ಓಡಾಡಲು ಸಮಸ್ಯೆ ಆಗುತ್ತಿದ್ದು ಈ ಸಮಸ್ಯೆಗೆ ಪರಿಹಾರವಾಗಿ ಮೇಲ್ಸೇತುವೆ ಕಾಮಗಾರಿ ಪ್ರಾರಂಭ ಮಾಡು ವರೆಗೂ ಬಂದ್ ಹಿಂಪಡೆಯಲ್ಲವೆಂದು ಪಟ್ಟು ಹಿಡಿದು ಧರಣಿ ಕೂತಿದ್ದಾರೆ. ಸದ್ಯ ಜನರು ಹೆದ್ದಾರಿಯಲ್ಲಿಯೇ ಶಾಮಿಯಾನ ಹಾಕಿ ಧರಣಿ‌ ಕುಳಿತಿದ್ದು ಗ್ರಾಮಸ್ಥರಿಗೆ ರೈತ ಸಂಘವೂ ಸಾಥ್ ನೀಡಿದೆ. ಇದರಿಂದಾಗಿ ಕಿಲೋಮೀಟರ್​ಗಟ್ಟಲೇ ಸಾಲುಗಟ್ಟಿ ವಾಹನಗಳು ನಿಂತಿವೆ. ಪ್ರತಿಭಟನಾಕಾರರಿಂದಾಗಿ ಬೇಸತ್ತ ಪ್ರಯಾಣಿಕರು ಅವರೊಂದಿಗೆ ವಾಗ್ವಾದ ಮಾಡಿದ್ದಾರೆ. ಪ್ರತಿಭಟನಾಕಾರರ ಜತೆ ಮಹಿಳೆಯೊಬ್ಬರು ವಾಗ್ವಾದಕ್ಕೆ ಇಳಿದಿದ್ದು ರಸ್ತೆಯಲ್ಲಿ ಹೋಗಲು ಬಿಡುವಂತೆ ಪಟ್ಟು ಹಿಡಿದರು. ಈ ಸಂದರ್ಭ ಆಕೆಯ ಮನವೊಲಿಸಲು ಪ್ರತಿಭಾಟನಾಕಾರರು ‘ದಯವಿಟ್ಟು ಅರ್ಥ ಮಾಡಿಕೊಳ್ಳಿ, ಜನರ ಅನುಕೂಲಕ್ಕಾಗಿ ಈ ಪ್ರತಿಭಟನೆ’ ಎಂದಿದ್ದಾರೆ.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್, ‘ಅಂಡರ್ ಪಾಸ್ ನಿರ್ಮಾಣಕ್ಕೆ ಕಳೆದ ಡಿಸೆಂಬರ್‌ನಲ್ಲೇ ಮನವಿ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ತಕ್ಷಣ ಕೆಲಸ ಆರಂಭಿಸಲಾಗುವುದು’ ಎಂದಿದ್ದು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿರುವ ಪತ್ರವನ್ನು ಎಂಜಿನಿಯರ್ ತೋರಿಸಿದ್ದಾರೆ. ಎಂಜಿನಿಯರ್ ತಂದಿದ್ದ ಪತ್ರವನ್ನು ಹರಿದ ಪ್ರತಿಭಟನಾಕಾರರು ‘ಹಲವು ತಿಂಗಳಿನಿಂದಲೂ ಇದೇ ಕಾರಣ‌ ಕೊಡುತ್ತಾ ಬಂದಿದ್ದೀರಿ. ಈಗಲೂ ಹಳೆ ಲೆಟರ್ ಹಿಡಿದು ಬಂದಿದ್ದೀರಿ, ಈ ಪತ್ರಕ್ಕೆ ಯಾವುದೇ ಮಹತ್ವ ಇಲ್ಲ. ತತಕ್ಷಣ ಅಂಡರ್ ಪಾಸ್ ನಿರ್ಮಾಣ ಆರಂಭಿಸಿ. ನಿಮಗೆ ಯಾವುದೇ ಕಿರೀಟ ಹಾಕಿಲ್ಲ, ನೀವು ಜನಸೇವಕರು. ಅಹಂಕಾರ ಬಿಟ್ಟು ಕೆಲಸ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಎಂಜಿನಿಯರ್​ಗೆ ತಾಕೀತು ಮಾಡಿದ್ದಾರೆ.

ಭ್ರಷ್ಟರ ಬೇಟೆ

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago