ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಭಯಾನಕ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ತನಿಖೆಗೆ ಹೊಸ ತಿರುವು ಸಿಕ್ಕಿದ್ದು, ಈ ಹಿಂದೆ ಸಿಐಡಿ ತಿರಸ್ಕರಿಸಿದ ಪದ್ಮಲತಾ ಪ್ರಕರಣ ಮತ್ತೆ ಚರ್ಚೆಯ ಕೇಂದ್ರವಾಗಿದೆ.
ಇತ್ತೀಚೆಗೆ, ಧರ್ಮಸ್ಥಳದ ಸುತ್ತಮುತ್ತ ಹಲವಾರು ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಒಂದು ವ್ಯಕ್ತಿ ಈ ಎಲ್ಲ ಪ್ರಕರಣಗಳ ಬಗ್ಗೆ ನಿಖರ ಮಾಹಿತಿಯೊಂದಿಗೆ ಎಫ್ಐಆರ್ ದಾಖಲಿಸಿದ್ದಾನೆ. ತನಿಖಾಧಿಕಾರಿಗಳ ಮುಂದೆ ತಾನೇ ಕೆಲ ಹೆಣಗಳನ್ನು ಹೂತುಬಿಟ್ಟಿರುವುದಾಗಿ ಹೇಳಿದ ಆತ, ಅಸ್ತಿಪಂಜರಗಳ ಸ್ಥಳಗಳನ್ನು ತೋರಿಸಲು ಸಿದ್ಧ ಎಂದು ಈ ಹೇಳಿಕೆಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿ ವಿಶೇಷ ತನಿಖಾ ತಂಡ (SIT) ರಚಿಸಿದೆ.
ಈ ಹೊಸ ಬೆಳವಣಿಗೆಯ ನಡುವೆ 39 ವರ್ಷಗಳ ಹಿಂದಿನ ಪದ್ಮಲತಾ ಪ್ರಕರಣ ಮತ್ತೆ ದೃಷ್ಟಿಗೆ ಬಂದಿದೆ. 1986ರ ಡಿಸೆಂಬರ್ 22ರಂದು ಬೋಳಿಯಾರು ಗ್ರಾಮದಲ್ಲಿ ನಾಪತ್ತೆಯಾಗಿದ್ದ ಪದ್ಮಲತಾ, ಕಮ್ಯೂನಿಸ್ಟ್ ಪಕ್ಷದ ಪ್ರಮುಖ ಮುಖಂಡರ ಮಗಳಾಗಿದ್ದರು. ಕೆಲ ದಿನಗಳ ನಂತರ, ಅವಳ ಅಸ್ತಿಪಂಜರ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು, ಈ ಕುರಿತು ಸಾಕಷ್ಟು ಅನುಮಾನಗಳು ಮೂಡಿದ್ದವು. ಆದರೆ, ಕಾಲಕ್ರಮೇಣ ತನಿಖೆ ನಿಧಾನವಾಗಿ ಮುಸುಕಿಬಿದ್ದು,
ಈಗ ಎಸ್ಐಟಿ ತಂಡ ಹೊಸ ಉತ್ಸಾಹದಿಂದ ತನಿಖೆ ಆರಂಭಿಸಿರುವ ಹಿನ್ನಲೆಯಲ್ಲಿ ಪದ್ಮಲತಾ ಕುಟುಂಬ ಈ ದೀರ್ಘಕಾಲದ ನ್ಯಾಯದ ನಿರೀಕ್ಷೆಗೆ ಪರಿಹಾರ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದೆ. ಈ ಪ್ರಕರಣದ ನಿಜ ಮತ್ತು ಸತ್ಯಾಂಶ ಹೊರಬಂದು, ದೋಷಿಗಳು ಕಾನೂನಿನ ಮುಂದೆ ನಿಲ್ಲುತ್ತಾರೆ ಎಂಬ ವಿಶ್ವಾಸ ಸ್ಥಳೀಯರಲ್ಲಿ ಉಂಟಾಗಿದೆ.
