ಬೆಳ್ತಂಗಡಿ, ಆ.7 – ಧರ್ಮಸ್ಥಳ ಶವ ಹೂತು ಪ್ರಕರಣದಲ್ಲಿ ಇಂದು (ಬುಧವಾರ) ಯಾವುದೇ ಶೋಧ ಕಾರ್ಯ ನಡೆದಿಲ್ಲ. ವಿಶೇಷ ತನಿಖಾ ತಂಡ (ಎಸ್‌ಐಟಿ)ದ ನೇತೃತ್ವದಲ್ಲಿ ದಿನದಳು ಶೋಧ ಕಾರ್ಯ ನಡೆಯುತ್ತಿದ್ದ ಪಾಯಿಂಟ್ ನಂ.13 ರಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡದೆ ಹಿಂದಕ್ಕೆ ಹೂಂಡಿದ್ದಾರೆ.

ಇಂದು ಬೆಳಿಗ್ಗೆಯಿಂದಲೇ ಸ್ಥಳ ಪರಿಶೀಲನೆ ಕಾರ್ಯ ನಡೆಸಲಾಗುತ್ತೆ ಎಂಬ ನಿರೀಕ್ಷೆ ಇದ್ದರೂ, ಎಸ್‌ಐಟಿ ಕಚೇರಿಯಿಂದ ಅರಣ್ಯ, ಕಂದಾಯ ಇಲಾಖೆ ಹಾಗೂ ಸೋಕೋ ತಂಡದ ಅಧಿಕಾರಿಗಳು ಶೋಧ ಸ್ಥಳಕ್ಕೆ ತೆರಳದೆ ದೈನಂದಿನ ಕಾರ್ಯ ನಿರ್ವಹಣೆಗೆ ಮರುಳುಹೋಗಿದ್ದಾರೆ. ಇದರೊಂದಿಗೇ ಶೋಧ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಂತಾಗಿದೆ.

ಇತ್ತ, ಎಸ್‌ಐಟಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯುತ್ತಿದ್ದು, ತನಿಖೆಯ ಗಮನ ಈಗ ಸಾಕ್ಷ್ಯ ಪರಿಕರಗಳ ಪರಿಶೀಲನೆಯತ್ತ ಹರಿಯುತ್ತಿದೆ. ಕಳೆದ ಎಂಟು ದಿನಗಳಿಂದ ನಡೆದ ಶೋಧ ಕಾರ್ಯಗಳಲ್ಲಿ ಸಿಕ್ಕಿದ್ದ ವಿಡಿಯೋ, ಫೋಟೋ ಹಾಗೂ ಅಸ್ತಿಪಂಜರದ ಪತ್ತೆಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ. ಈ ಸಂಬಂಧ ತಜ್ಞರ ಅಭಿಪ್ರಾಯ ಪಡೆಯುವ ಪ್ರಕ್ರಿಯೆಯೂ ಆರಂಭವಾಗಿದೆ.

ಮಧ್ಯಾಹ್ನದ ಹೊತ್ತಿನಲ್ಲಿ ಅಡಿಶನಲ್ ಕಮಿಷನರ್ ಸ್ಟೆಲ್ಲಾ ವರ್ಗೀಸ್ ಅವರು ತಹಶೀಲ್ದಾರ್ ಕಚೇರಿಯಿಂದ ನೇರವಾಗಿ ಎಸ್‌ಐಟಿ ಕಚೇರಿಗೆ ತೆರಳದೆ, ಮೂರು ಗಂಟೆಗಳ ಕಾಲ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲ ಕಡತಗಳ ವಿಲೇವಾರಿ ಹಾಗೂ ಇತರ ಮಹತ್ವದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಗಳ ನಿರೀಕ್ಷೆಯಿದ್ದು, ಮುಂದಿನ ದಿನಗಳಲ್ಲಿ ತಜ್ಞರ ಅಭಿಪ್ರಾಯದ ಆಧಾರದ ಮೇಲೆ ತನಿಖೆಗೆ ಹೊಸ ದಿಕ್ಕು ಸಿಗುವ ಸಾಧ್ಯತೆಯಿದೆ.

Related News

error: Content is protected !!