ಧರ್ಮಸ್ಥಳದಲ್ಲಿ ಬಹಿರಂಗವಾದ ಶವ ಹೂತು ಪ್ರಕರಣದ ತನಿಖೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಯ ವೇಗವರ್ಧನೆಗಾಗಿ ವಿಶೇಷ ತನಿಖಾ ತಂಡಕ್ಕೆ (SIT) ಮತ್ತೆ 9 ಮಂದಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ಡಿಜಿ ಹಾಗೂ ಐಜಿಪಿ ಡಾ. ಎಂ.ಎ. ಸಲೀಂ ಅವರು ಹೊಸ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಪ್ರಕರಣದ ತನಿಖೆಗೆ ಸಂಬಂಧಿಸಿ ಮೂವರು ಉನ್ನತ ಪೊಲೀಸ್ ಅಧಿಕಾರಿಗಳ ನೇಮಕದಿಂದ ಆರಂಭವಾಗಿ, ಇದೀಗ ತನಿಖೆಯ ಅಗತ್ಯತೆ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚು ಪೊಲೀಸರನ್ನು ಕಾರ್ಯನಿರ್ವಹಣೆಗೆ ನಿಯೋಜಿಸಲಾಗಿತ್ತು. ಇದೀಗ ಈ ಪಟ್ಟಿಗೆ ಇನ್ನೂ 9 ಮಂದಿ ಅಧಿಕಾರಿಗಳು ಸೇರ್ಪಡೆಯಾಗಿದ್ದಾರೆ.

ನಿಯೋಜಿಸಲಾದ ನೌಕರರ ವಿವರ ಹೀಗಿದೆ:

ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್‌ಐ ಲಾರೆನ್ಸ್ ಸೆನ್

ಉಪ್ಪಿನಂಗಡಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಪುನೀತ್

ಉಪ್ಪಿನಂಗಡಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮನೋಹರ

ವಿಟ್ಲ ಠಾಣೆಯ ಪೋಲೀಸ್ ಕಾನ್‌ಸ್ಟೆಬಲ್ ಮನೋಜ್

ಪುಂಜಾಲಕಟ್ಟೆ ಠಾಣೆಯ ಪೋಲೀಸ್ ಕಾನ್‌ಸ್ಟೆಬಲ್ ಸಂದೀಪ್

ಉಡುಪಿ ಸಿಎಸ್‌ಪಿ ಠಾಣೆಯ ಪೋಲೀಸ್ ಕಾನ್‌ಸ್ಟೆಬಲ್ ಲೋಕೇಶ್

ಹೊನ್ನಾವರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಸತೀಶ್ ನಾಯ್ಕ

ಮಂಗಳೂರು ಎಫ್‌ಎಮ್‌ಎಸ್ ದಳದ ಹೆಡ್ ಕಾನ್‌ಸ್ಟೆಬಲ್ ಜಯರಾಮೇಗೌಡ

ಮಂಗಳೂರು ಎಫ್‌ಎಮ್‌ಎಸ್ ದಳದ ಹೆಡ್ ಕಾನ್‌ಸ್ಟೆಬಲ್ ಬಾಲಕೃಷ್ಣ ಗೌಡ

ಇವರು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಎಸ್‌ಐಟಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ.

ಪ್ರಕರಣದ ನಿಜಾಂಶವನ್ನು ಪತ್ತೆ ಹಚ್ಚಲು ಬೃಹತ್ ಮಟ್ಟದಲ್ಲಿ ಪರಿಶೋಧನೆ ನಡೆಯುತ್ತಿದ್ದು, ಇದಕ್ಕಾಗಿ ಪೊಲೀಸರು ಇದೀಗ ಧರ್ಮಸ್ಥಳದಲ್ಲಿ ಹಲವು ಸ್ಥಳಗಳಲ್ಲಿ ಉತ್ಖನನ ಕಾರ್ಯರೂಪದಲ್ಲಿ ತೊಡಗಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ಶಾಖೆಗಳಿಂದ ಅಧಿಕಾರಿಗಳನ್ನು ಸೆಳೆದು ತರುವ ಮೂಲಕ ತನಿಖೆಗೆ ಚುರುಕುಗೊಳಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!