ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿರುವುದಾಗಿ ಕೇಳಿ ಬರುತ್ತಿರುವ ಸಂವೇದನಾಶೀಲ ಪ್ರಕರಣ ಸಂಬಂಧ, ಐದನೇ ದಿನವೂ ಅಸ್ಥಿ ಉತ್ಖನನ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ ನಡುವೆ ಉತ್ಖನನದ ವೇಳೆ ದೂರು ನೀಡಿರುವ ವ್ಯಕ್ತಿಯ ಹಠಾತ್ ನಡೆ ಹೊಸ ಸಂಶಯ ಮತ್ತು ಕುತೂಹಲಕ್ಕೆ ಕಾರಣವಾಗಿದ್ದಾನೆ.
ಸಿಎಂ ನೇತೃತ್ವದ ವಿಶೇಷ ತನಿಖಾ ತಂಡ (SIT) ಈಗಾಗಲೇ 10 ಪಾಯಿಂಟ್‌ಗಳಲ್ಲಿ ಅಸ್ಥಿ ಶೋಧ ನಡೆಸಿದ್ದು, ಇಂದಿನಿಂದ 11ನೇ, 12ನೇ ಹಾಗೂ 13ನೇ ಪಾಯಿಂಟ್‌ಗಳಲ್ಲಿ ಶೋಧ ಆರಂಭಿಸಲು ತಯಾರಿ ನಡೆದಿದೆ. ವಿಶೇಷವಾಗಿ 12 ಮತ್ತು 13ನೇ ಪಾಯಿಂಟ್‌ಗಳಲ್ಲಿ ಅತಿದೊಡ್ಡ ಪ್ರಮಾಣದಲ್ಲಿ ಶವ ಹೂತಿದ್ದೇನೆ ಎಂದು ದೂರುದಾರ ಹಿಂದಿನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದ ಹಿನ್ನೆಲೆಯಲ್ಲಿ, ಈ ಸ್ಥಳಗಳ ಪರಿಶೀಲನೆ ಹೆಚ್ಚು ಮಹತ್ವದಾಗಿ ಪರಿಗಣಿಸಲಾಗಿದೆ.
ಆದರೆ ಉತ್ಖನನದ ಸಮಯದಲ್ಲಿ ದೂರುದಾರನೊಬ್ಬನ ಅನುಮಾನಾಸ್ಪದ ನಡೆ ಎಲ್ಲರ ಗಮನ ಸೆಳೆದಿದೆ. ಅಧಿಕಾರಿಗಳು 11ನೇ ಪಾಯಿಂಟ್‌ಗೆ ಕರೆದೊಯ್ಯುವ ಬದಲು, ನೇತ್ರಾವತಿ ನದಿಯ ಸಮೀಪದ ಒಂದು ಅನಾಮಿಕ ಗುಡ್ಡದ ಕಡೆಗೆ ದೂರುದಾರನನ್ನು ಕರೆದೊಯ್ದಿರುವುದು ಹೊಸ ಶಂಕೆಗಳಿಗೆ ದಾರಿತೊರೆದಿದೆ.
ಇದುವರೆಗೆ ನಡೆದ 10 ಪಾಯಿಂಟ್‌ಗಳ ಉತ್ಖನನದಲ್ಲಿ ಕೇವಲ ಆರನೇ ಪಾಯಿಂಟ್‌ನಲ್ಲಿಯೇ ಅಸ್ಥಿಗಳು ಪತ್ತೆಯಾಗಿವೆ. ಇಲ್ಲಿಯೇ ತಲೆಬುರುಡೆ ಸೇರಿದಂತೆ ಹಲವು ಮೂಳೆಗಳು ಪತ್ತೆಯಾಗಿದ್ದು, ಈ ಅಸ್ಥಿಗಳನ್ನು ತಕ್ಷಣ ಎಫ್‌ಎಸ್‌ಎಲ್ (FSL)ಗೆ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಈ ಮೂಳೆಗಳು ಕನಿಷ್ಠ 15 ವರ್ಷಕ್ಕೂ ಹಳೆಯದಾಗಿರಬಹುದೆಂಬ ಅಂದಾಜು ಲಭಿಸಿದೆ.
ಇಡೀ ತನಿಖೆಯು ದಿನದಿಂದ ದಿನಕ್ಕೆ ಗಂಭೀರ ತಿರುವು ಪಡೆಯುತ್ತಿದ್ದು, ಶವ ಹೂತು ಪ್ರಕರಣ ಸತ್ಯಕ್ಕೂ ಕೇವಲ ಕಾಲದ ಪ್ರಶ್ನೆಯಾಗಿರಬಹುದು ಎಂಬ ನಿರೀಕ್ಷೆಯಿದೆ.
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…
ಚಿತ್ರದುರ್ಗ: ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮದ ಹತ್ತಿರ ನಡೆದ ವಿಶಿಷ್ಟ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಾಧುಗಳ ವೇಷ ತಾಳಿ ರೈತರ…
ಭೋಪಾಲ್ : ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ಹದಿಹರೆಯದ ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ನರಸಿಂಹಪುರದಲ್ಲಿ…