ಕಲಬುರಗಿ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಬಿಲ್‌ ಬಿಡುಗಡೆಗೊಳ್ಳಲು ಲಂಚ ಕೇಳಿದ ಆರೋಪದ ಮೇರೆಗೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿರುವ ಘಟನೆ ನಡೆದಿದೆ.

15ನೇ ಹಣಕಾಸು ಯೋಜನೆಯಡಿ ನಡೆದ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ, ಜೆಇ (ಜೂನಿಯರ್ ಇಂಜಿನಿಯರ್) ಶ್ರೀಪಾದ ಕುಲಕರ್ಣಿ ಅವರು ಬಿಲ್‌ ಪಾವತಿಗೆ 5% ಲಂಚ ಕೇಳಿದ ದೃಶ್ಯವಿರುವ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ ಅವರು ಪಿಡಿಓ (ಗ್ರಾಮ ಪಂಕ್ಮಾಯಿತಿ ಅಭಿವೃದ್ಧಿ ಅಧಿಕಾರಿ) ಮಂಜುಶ್ರೀ ಅವರು 3% ಲಂಚ ಕೇಳುತ್ತಿದ್ದಾರೆಂಬ ಉಲ್ಲೇಖವೂ ಕೂಡಾ ಕಾಣಿಸುತ್ತಿದೆ.

ವಿಡಿಯೋ ಭಾರಿ ವ್ಯಾಪ್ತಿಯಲ್ಲಿ ವೈರಲ್ ಆದ ಬಳಿಕ, ಈ ವಿಷಯಕ್ಕೆ ಗಂಭೀರತೆ ನೀಡಿದ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಅವರ ಆದೇಶದ ಮೇರೆಗೆ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯನಿರ್ವಹಣಾಧಿಕಾರಿ ಭವರಸಿಂಗ್ ಮೀನಾ ಅವರು ಇಬ್ಬರನ್ನೂ ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಈ ಘಟನೆ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಪಾವತಿಗೆ ಸಂಬಂಧಿಸಿದ ಭ್ರಷ್ಟಾಚಾರದ ತೀವ್ರತೆಯತ್ತ ಬೆಳಕು ಚೆಲ್ಲಿದೆ.

error: Content is protected !!