Latest

ದರ್ಶನ್‌ಗೆ ಮತ್ತೆ ಜೈಲು ಭೀತಿ: ಥಾಯ್ಲೆಂಡ್ ಪ್ರವಾಸದಿಂದ ವಾಪಸಾದ ಬೆನ್ನಲ್ಲೇ ಸುಪ್ರೀಂ ತೀರ್ಪಿನ ನಿರೀಕ್ಷೆ

ಬೆಂಗಳೂರು, ಜುಲೈ 26 – ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್ ಅವರು ವಿದೇಶ ಪ್ರವಾಸ ಮುಗಿಸಿ ತಡರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಥಾಯ್ಲೆಂಡ್‌ನಲ್ಲಿ ‘ದಿ ಡೆವಿಲ್’ ಚಿತ್ರದ ಹಾಡು ಶೂಟಿಂಗ್ ಮುಗಿಸಿ ಕುಟುಂಬ ಸಮೇತ ಪ್ರವಾಸದಿಂದ ಹಿಂದಿರುಗಿದ ದರ್ಶನ್, ಇದೀಗ ಸುಪ್ರೀಂ ಕೋರ್ಟ್‌ನ ತೀರ್ಪಿನ ನಿರೀಕ್ಷೆಯಲ್ಲಿ ಆತಂಕದ ನೆರಳಲ್ಲಿ ಕಾಲಿಡುತ್ತಿದ್ದಾರೆ.

ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದುಪಡಿಸಲು ಅರ್ಜಿ ಸಲ್ಲಿಸಿದೆ. ಕಳೆದ ಕೆಲ ದಿನಗಳ ಹಿಂದೆ ನಡೆದ ವಿಚಾರಣೆಯು ಈಗ ಪೂರ್ಣಗೊಂಡಿದ್ದು, ಅಂತಿಮ ತೀರ್ಪು ಮುಂದಿನ ವಾರ ಪ್ರಕಟವಾಗಲಿದೆ. ಇದರಿಂದಾಗಿ “ಜೈಲಿಗೆ ಮರಳಲಿವೆನಾ?” ಎಂಬ ಪ್ರಶ್ನೆಯು ಈಗಾಗಲೇ ಸಿನಿಮಾಪ್ರಿಯರು ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ದರ್ಶನ್ 10 ದಿನಗಳ ಹಿಂದೆ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೇಶ್ ಜೊತೆಗೆ ಥಾಯ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದರು. ನ್ಯಾಯಾಲಯದ ನಿರ್ಧಾರಕ್ಕೆ ಅನುಗುಣವಾಗಿ ವಿದೇಶೀ ಪ್ರವಾಸಕ್ಕೆ ಅನುಮತಿ ಪಡೆದುಕೊಂಡಿದ್ದ ಅವರು, ಅಲ್ಲಿರುವ ಶೂಟಿಂಗ್ ಲೊಕೇಷನ್‌ಗಳಲ್ಲಿ ಭಾಗವಹಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಅದಕ್ಕೂ ಮಿಕ್ಕಿ, ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣ ತಲುಪಿದ ದರ್ಶನ್‌ಗೆ ಭದ್ರತಾ ಸಿಬ್ಬಂದಿಗಳು ಸೆಲ್ಯೂಟ್ ಹೊಡೆದು ಬರಮಾಡಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಟೀಕೆಗಳಿಗೆ ಕಾರಣವಾಗಿವೆ. “ಕೊಲೆ ಆರೋಪಿಯೊಬ್ಬರಿಗೆ ಇಂತಹ ರಾಜಮರ್ಯಾದೆ ಬೇಕಿತ್ತಾ?” ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಉದ್ಭವವಾಗಿದ್ದು, ಈ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ – “ದರ್ಶನ್‌ಗೆ ಭದ್ರತೆ ನೀಡಿರುವ ವಿಷಯದಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ. ಯಾರು, ಏನಿಗಾಗಿ ಭದ್ರತೆ ಕೊಟ್ಟಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ಮಾಡಿಸುತ್ತೇನೆ” ಎಂದು ತಿಳಿಸಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ದರ್ಶನ್ A2 ಆರೋಪಿಯಾಗಿದ್ದರೆ, ಪವಿತ್ರಾ ಗೌಡ (A1), ಪ್ರದೂಷ್ (A14), ಲಕ್ಷ್ಮಣ್ (A12), ನಾಗರಾಜ್ (A11), ಅನುಕುಮಾರ್ (A7), ಜಗದೀಶ್ (A6) ಕೂಡ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಈ ಎಲ್ಲರ ಜಾಮೀನನ್ನು ಸುಪ್ರೀಂ ಕೋರ್ಟ್ ಮುಂದಿನ ವಾರ ಕೈಗೊಂಡ ತೀರ್ಪು ನಿರ್ಧರಿಸಲಿದೆ.

ಜಾಮೀನಿಗೆ ‘ಬೆನ್ನು ನೋವು’ ಎನ್ನುವ ಕಾರಣವನ್ನಾಗಿ ಉಲ್ಲೇಖಿಸಿ ಹೊರಬಂದ ದರ್ಶನ್ ಈಗ ಮತ್ತೊಮ್ಮೆ ಬಂಧನದ ಅಂಚಿನಲ್ಲಿ ನಿಂತಿದ್ದಾರೆ. “ಕಿಲ್ಲಿಂಗ್ ಸ್ಟಾರ್‌”ಗೆ ನ್ಯಾಯಾಲಯ ಯಾವ ಪಾಠ ಕಲಿಸುತ್ತದೆ ಎಂಬ ಕುತೂಹಲ ಸದ್ಯ ಎಲ್ಲರಲ್ಲೂ ಹಬ್ಬಿದ್ದು, ಇಡೀ ಪ್ರಕರಣದ ಮುಂದಿನ ಹಂತದತ್ತ ಎಲ್ಲರ ದೃಷ್ಟಿಯೂ ಸಿದ್ದವಾಗಿದೆ.

nazeer ahamad

Recent Posts

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

1 month ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

1 month ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

3 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

3 months ago

ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ.!!

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…

3 months ago

ಪ್ರೇಯಸಿ ಫೋನ್‌ ಎತ್ತಿಲ್ಲ: ಕೋಪದಲ್ಲಿ ಯುವಕ ಇಡೀ ಹಳ್ಳಿಯ ಕರೆಂಟ್ ಕಟ್!

ಪ್ರೇಯಸಿ ಫೋನ್‌ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…

3 months ago