
ಬೆಂಗಳೂರು: ಕನ್ನಡ ಸಿನಿ ಪ್ರೇಕ್ಷಕರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೆ ಗ್ಲಾಮರ್, ಸ್ಟೈಲ್ ಮತ್ತು ನಾಟಕೀಯತೆಯ ಮತ್ತೊಂದು ರೂಪ. ಅದೆಷ್ಟೋ ವರ್ಷಗಳಿಂದ ತಮ್ಮ ವಿಭಿನ್ನ ಚಲನಚಿತ್ರಗಳ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ರವಿಚಂದ್ರನ್ ಇದೀಗ ತಮ್ಮ ವೈಯಕ್ತಿಕ ಜೀವನದ ಒಂದು ಚಿಕ್ಕ ರಹಸ್ಯವನ್ನು ಬಹಿರಂಗವಾಗಿದೆ
ಹೌದು, ಈಗಾಗಲೇ ಹಲವು ವರ್ಷಗಳಿಂದ ರವಿಚಂದ್ರನ್ ಸಾರ್ವಜನಿಕವಾಗಿ ಯಾವ ಸಮಾರಂಭಕ್ಕೂ ಟೋಪಿ ಧರಿಸಿ ಬರುವ ಪರಂಪರೆಯನ್ನು ಮುಂದುವರಿಸುತ್ತಿದ್ದರು. ಇದು ಕೇವಲ ಫ್ಯಾಷನ್ ಸ್ಟೈಟ್‌ಮೆಂಟ್ ಅಲ್ಲ, ಅದರ ಹಿಂದೆ ಒಂದು ವಿಶೇಷ ಕಾರಣವಿತ್ತು ಎನ್ನುವುದು ಈಗ ಎಲ್ಲರಿಗೂ ಗೊತ್ತಾಗುತ್ತಿದೆ.
ಕಾಲಕ್ರಮೇಣ ಕೂದಲು ಕಳೆದುಕೊಂಡ ರವಿಚಂದ್ರನ್, ತಮ್ಮ ತಲೆ ಬೋಳು ಆಗಿರುವುದು ಬಹಿರಂಗಗೊಳ್ಳದಂತೆ ಸದಾ ಟೋಪಿ ಧರಿಸಿ ಎಲ್ಲೆಡೆ ತೆರಳುತ್ತಿದ್ದರು. ಈವರೆಗೂ ಯಾವುದೇ ಕಾರ್ಯಕ್ರಮದಲ್ಲಿ ತಮ್ಮ ಟೋಪಿಯನ್ನು ತೆಗೆದು ತಲೆಯನ್ನ ತೋರಿಸಿರಲಿಲ್ಲ.
ಆದರೆ ಈ ಸರಣಿಗೆ ಮುರಿದಂತಾಗಿದೆ. ಹಂಸಲೇಖ ನಿರ್ದೇಶನದ ಹೊಸ ಚಿತ್ರ “ಓಕೆ”ದ ಮುಹೂರ್ತ ಕಾರ್ಯಕ್ರಮದ ವೇಳೆ, ವೇದಿಕೆಯಲ್ಲಿ ಮಾತನಾಡುವಾಗ ರವಿಚಂದ್ರನ್ ಹಠಾತ್ ಟೋಪಿ ಸರಿಪಡಿಸುವ ಪ್ರಯತ್ನದಲ್ಲಿ ಅವರ ಬೋಳು ತಲೆ ಪ್ರತ್ಯಕ್ಷವಾಗಿದೆ. ಕೆಲ ಕ್ಷಣಗಳ ಜತೆಗೆ ಕ್ಯಾಮೆರಾಗಳ ಕಣ್ಣಿಗೂ ಇದು ಸಿಕ್ಕಿಹಾಕಿಕೊಂಡಿದೆ. ಈ ದೃಶ್ಯ ಇದೀಗ ವೈರಲ್ ಆಗಿದ್ದು, ಅಭಿಮಾನಿಗಳು ಇದನ್ನು ಸ್ವಾಗತಿಸುತ್ತಿದ್ದಾರೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟನ ವೈಯಕ್ತಿಕ ಆಯ್ಕೆಗಳನ್ನು ಗೌರವಿಸುತ್ತಿದ್ದರೂ, ಇಷ್ಟು ದಿನಗಳ ಹಿಂದೆ ಮರೆಮಾಚಿದ್ದ ಸತ್ಯ ಬಹಿರಂಗವಾಗಿದ್ದಕ್ಕೆ ಆಶ್ಚರ್ಯವೂ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು “ನಟನಿಗೆ ಬೋಳು ತಲೆ ಬಂದರೆ ಏನು? ಅದು ಅವರ ಪ್ರತಿಭೆಗೆ ಏನು ಕಡಿಮೆ ಆಗಲ್ಲ!” ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.