Categories: CrimeLatest

ಭಟ್ಕಳದಲ್ಲಿ ಗೋವು ಕಳ್ಳತನ ಯತ್ನ: ಕಾರು, ಸ್ಕೂಟರ್ ಬಿಟ್ಟು ಕಳ್ಳರು ಪರಾರಿ – ಪೊಲೀಸರ ಮೇಲೂ ದಾಳಿ

ಭಟ್ಕಳ: ತಾಲೂಕಿನ ತಲಗೇರಿ ಸಮೀಪದ ಜಾಲಿ–ವಿವೇಕಾನಂದ ನಗರ ಪ್ರದೇಶದಲ್ಲಿ ಶನಿವಾರ ತಡರಾತ್ರಿ ನಡೆದ ಗೋವು ಕಳ್ಳತನ ಯತ್ನ ಗ್ರಾಮಸ್ಥರ ಎಚ್ಚರಿಕೆಯಿಂದ ವಿಫಲಗೊಂಡಿದೆ. ಆದರೆ ಆರೋಪಿಗಳು ವಾಹನಗಳು ಹಾಗೂ ಮೊಬೈಲ್‌ಗಳನ್ನು ಬಿಟ್ಟು ಕತ್ತಲಲ್ಲಿ ಪರಾರಿಯಾಗಿರುವುದು ಘಟನೆಗೆ ನಾಟಕೀಯ ತಿರುವು ನೀಡಿದೆ.

ಮಧ್ಯರಾತ್ರಿ ಸುಮಾರು 3.45ರ ವೇಳೆಗೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಕಳ್ಳರು ಗೋವನ್ನು ಕದ್ದೊಯ್ಯಲು ಯತ್ನಿಸುತ್ತಿದ್ದರು. ಈ ವೇಳೆ ಗೋವುಗಳ ಕೂಗು ಕೇಳಿ ಅನುಮಾನಗೊಂಡ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ವಾಹನವನ್ನು ಸುತ್ತುವರೆದರು. ಸಿಕ್ಕಿಬೀಳುವ ಭೀತಿಯಿಂದ ಆರೋಪಿಗಳು ಕಾರು ಹಾಗೂ ಮೊಬೈಲ್ ಫೋನ್‌ಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಪರಾರಿಯಾದ ಕಳ್ಳರು ಸಮೀಪದ ಅರಣ್ಯ ಪ್ರದೇಶದಲ್ಲಿ ಅಡಗಿ, ಮತ್ತೊಂದು ಮೊಬೈಲ್ ಮೂಲಕ ತಮ್ಮ ಸಹಚರರನ್ನು ಕರೆಸಿಕೊಂಡಿರುವ ಸಾಧ್ಯತೆ ವ್ಯಕ್ತವಾಗಿದೆ. ವಿಷಯ ತಿಳಿದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಗ್ರಾಮಸ್ಥರು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ, ಆರೋಪಿಗಳು ತಂದಿದ್ದ ಸುಜುಕಿ ಆಕ್ಸೆಸ್ ಸ್ಕೂಟರ್‌ನ್ನೂ ಬಿಟ್ಟು ಮತ್ತೆ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿ ತಿಳಿದುಬಂದಿದೆ.

ಪೊಲೀಸರು ಸ್ಥಳದಿಂದ ಸ್ವಿಫ್ಟ್ ಕಾರು, ಸುಜುಕಿ ಆಕ್ಸೆಸ್ ಸ್ಕೂಟರ್, ಮೊಬೈಲ್ ಫೋನ್‌ಗಳು ಹಾಗೂ ಕದ್ದೊಯ್ಯಲು ಯತ್ನಿಸಿದ್ದ ಗೋವು ಮತ್ತು ಕರುವನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಯಲ್ಲಿ ಕಳ್ಳರು ನಕಲಿ ನಂಬರ್ ಪ್ಲೇಟ್ ಬಳಸಿ ತಮ್ಮ ಗುರುತನ್ನು ಮರೆಮಾಚಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಗೋವು ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವರದಿ: ಕುಮಾರ್ ನಾಯ್ಕ್

ಭ್ರಷ್ಟರ ಬೇಟೆ

Recent Posts

ಜಾಮೀನು ಕೊಡಿಸುವ ಹೆಸರಿನಲ್ಲಿ ಲಂಚ: ಕೊಪ್ಪಳದಲ್ಲಿ ಇಬ್ಬರು ಪೊಲೀಸ್ ಪೇದೆಗಳು ಲೋಕಾಯುಕ್ತ ಬಲೆಗೆ

ರಾಜ್ಯದಲ್ಲಿ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. “ಸರ್ಕಾರಿ ಕೆಲಸ ದೇವರ ಕೆಲಸ” ಎಂಬ ನಂಬಿಕೆಗೆ ಧಕ್ಕೆ ತರುವಂತೆ,…

14 hours ago

ಹುಬ್ಬಳ್ಳಿ ಜಿಮ್ ಟ್ರೈನರ್ ಸಮೀರ್ ಕೇಸ್: ದೌರ್ಜನ್ಯ ಬಳಿಕ ಗರ್ಭಪಾತ ಮಾತ್ರೆಗೆ ಬಲವಂತ, ಶಾಕಿಂಗ್ ವಿಡಿಯೋ ಬಹಿರಂಗ

ಹುಬ್ಬಳ್ಳಿ ನಗರವನ್ನು ಬೆಚ್ಚಿಬೀಳಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ಟ್ರೈನರ್ ಸಮೀರ್‌ನ ಕರಾಳ ಕೃತ್ಯಗಳು ಹಂತ ಹಂತವಾಗಿ ಬಹಿರಂಗವಾಗುತ್ತಿವೆ.…

1 day ago

ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ಭರತ್ ತಾಳಿಕೋಟಿ ನಾಟಕಕ್ಕೆ ಭರ್ಜರಿ ಜಯ: 30 ದಿನದಲ್ಲಿ 1 ಕೋಟಿ ಸಂಗ್ರಹ

ಉತ್ತರ ಕರ್ನಾಟಕ ಅಂದಾಗ ನೆನಪಾಗುವುದು ಅದರ ವಿಶೇಷ ಆಹಾರ, ಬಯಲು ಸೀಮೆಯ ಸುಂದರ ಪ್ರಕೃತಿ ಮತ್ತು ಮುಖ್ಯವಾಗಿ ಜೀವಂತವಾಗಿರುವ ನಾಟಕ…

1 day ago

ನೀರು ಕೇಳಿ ಮನೆಗೆ ನುಗ್ಗಿದ ಕಿರಾತಕ: ಮಹಿಳೆಯ ಮೇಲೆ ಅತ್ಯಾಚಾರ..!

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಾಚೆರ್ಲಾ ಪಟ್ಟಣದಲ್ಲಿ ಸಮಾಜವೇ ತಲೆತಗ್ಗಿಸುವಂತಹ ಕ್ರೂರ ಘಟನೆ ಬೆಳಕಿಗೆ ಬಂದಿದೆ. ಏಪ್ರಿಲ್ 2ರಂದು ಸಂಜೆ, ಸರ್ಕಾರಿ…

2 days ago

ಪ್ರಯಾಣದ ವೇಳೆ ಯುವತಿಗೆ ಲೈಂಗಿಕ ಕಿರುಕುಳ: ರಾಪಿಡೊ ಚಾಲಕ ಅಂದರ್..!

ಬೆಂಗಳೂರು: ಆನ್‌ಲೈನ್ ಬೈಕ್ ಟ್ಯಾಕ್ಸಿ ಸೇವೆಯಾದ ರಾಪಿಡೋ ಮೂಲಕ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೈಕ್…

2 days ago

ಹುಬ್ಬಳ್ಳಿ ಮುಸ್ಲಿಂ ಜಿಮ್ ಟ್ರೈನರ್ ನಿಂದ ಹಿಂದೂ ಯುವತಿಯರೇ ಟಾರ್ಗೆಟ್..!

ಹುಬ್ಬಳ್ಳಿಯಲ್ಲಿ ಮುಸ್ಲಿಂ ಜಿಮ್ ಟ್ರೈನರ್ ವಿರುದ್ಧ ಹಿಂದೂ ಯುವತಿಯರೊಂದಿಗೆ ‘ಲವ್ ಜಿಹಾದ್’ ನಡೆಸಿದ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಎರಡು…

2 days ago