ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ಸಹಿ ನಕಲಿ ಮಾಡಿ ಹಣ ವಿತ್‌ಡ್ರಾ ಮಾಡಿದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಐವರಲ್ಲಿ ಪಾಲಿಕೆ ಆಯುಕ್ತರ ವೆಕ್ತಿಗತ ಸಹಾಯಕ (ಪಿಎ) ಮೊಹಮ್ಮದ್ ನಯಿಮೋದ್ದಿನ್ ಸೇರಿದಂತೆ ವಾಜೀದ್ ಇಮ್ರಾನ್, ಮಿರ್ಜಾ ಬೇಗ್, ನಸೀರ್ ಅಹ್ಮದ್, ಮತ್ತು ಮೊಹಮ್ಮದ್ ರೆಹಮಾನ್ ಸೇರಿದ್ದಾರೆ. ಬಂಧಿತರಿಂದ ₹30 ಲಕ್ಷ ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಪ್ರಾರಂಭದಲ್ಲಿ ಆಯುಕ್ತರ ನಕಲಿ ಸಹಿಯನ್ನು ಬಳಸಿಕೊಂಡು, ಚೆಕ್‌ಬುಕ್ ಮೂಲಕ ₹1.32 ಕೋಟಿ ವಿತ್‌ಡ್ರಾ ಮಾಡಲು ಮೂರು ಚೆಕ್‌ಗಳನ್ನು ಬ್ಯಾಂಕ್‌ಗೆ ಕಳುಹಿಸಲಾಗಿತ್ತು. ಮೊದಲ ಚೆಕ್ ಮೂಲಕ ₹35,56,640 ವಿತ್‌ಡ್ರಾ ಮಾಡಲಾಗಿತ್ತು. ನಂತರ ಇನ್ನೆರಡು ಚೆಕ್‌ಗಳನ್ನು ಭಾರಿ ಮೊತ್ತದ ಹಣಕ್ಕಾಗಿ ಬಳಸಲು ಪ್ರಯತ್ನಿಸಿದ್ದನ್ನು ಬ್ಯಾಂಕ್ ಸಿಬ್ಬಂದಿ ಗಮನಿಸಿದರು. ಅನುವಾದು ಹೊಂದಿ, ಬ್ಯಾಂಕ್ ಸಿಬ್ಬಂದಿ ಆಯುಕ್ತರ ಕಚೇರಿಗೆ ಈ ಕುರಿತು ಮಾಹಿತಿ ನೀಡಿದರು. ಇದರಿಂದಾಗಿ ತಕ್ಷಣ ಕ್ರಮ ಕೈಗೊಂಡು ದೂರು ದಾಖಲಿಸಲಾಯಿತು. ಹೀಗಾಗಿ ಇದೀಗ, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.
ತಾಯಿ-ತಂದೆಯಿಲ್ಲದ ವೇದಳನ್ನು ಕಳೆದುಕೊಂಡ ಅಜ್ಜಿ-ತಾತನ ಆಕ್ರಂದನ ಗೌರಿಬಿದನೂರು: ನಗರದಲ್ಲಿ ಅಪಘಾತಗಳ ಸರಣಿ ಮುಂದುವರಿದಿರುವ ನಡುವೆಯೇ ಮತ್ತೊಂದು ಮನಕಲಕುವ ರಸ್ತೆ ದುರಂತ…
ಕಳೆದ ವರ್ಷದ 265 ರೂ. ಬೆಲೆಯ ಶೂಗಳು ಇನ್ನೂ ಬಾಳಿಕೆ; ಪ್ರಸಕ್ತ ಸಾಲಿನಲ್ಲಿ ವಿತರಿಸಿದ ಶೂಗಳ ಗುಣಮಟ್ಟದ ಬಗ್ಗೆ ಅಸಮಾಧಾನ…
ಧಾರವಾಡ: ಕೋಟ್ಯಂತರ ರೂಪಾಯಿ ಮೌಲ್ಯದ ಖರಾಬು ಜಮೀನಿನ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಡುವುದಾಗಿ ಹೇಳಿ 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ…
ಕಿತ್ತೂರು: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ–ತಮ್ಮಂದಿರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ತಂದೆ–ಮಗಳನ್ನು ಕೊಚ್ಚಿ…
ಪಾವಗಡ: ಕರ್ನಾಟಕ ಮತ್ತು ಆಂಧ್ರಪ್ರದೇಶದ ವಿವಿಧ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದು, ಅವರಿಂದ 21…
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ 2026–27ನೇ ಸಾಲಿನಲ್ಲಿ ಸರ್ಕಾರದಿಂದ ವಿತರಿಸಲಾಗಿರುವ ಶೂ ಮತ್ತು ಸ್ಯಾಂಡಲ್‌ಗಳ…