Latest

ಅನಧಿಕೃತ ಕ್ಲಿನಿಕ್ ಗಳ ಮೇಲೆ ಮುಂದುವರೆದ ದಾಳಿ.

ಮುಂಡಗೋಡ:- ದಿನಾಂಕ 03-04-2025ರಂದು ಮುಂಡಗೋಡ ತಾಲೂಕಿನಲ್ಲಿ ಕೆ.ಪಿ.ಎಮ್.ಇ ಖಾಯಿದೆ ಅಡಿಯಲ್ಲಿ ಕೆ.ಪಿ.ಎಮ್.ಇ ಮುಂಡಗೋಡ ಪ್ರಾಧಿಕಾರದ ತಂಡವು ದಾಳಿ ನಡೆಸಿ ಅನಧೀಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್‌ಗಳನ್ನು ಬಂದು ಮಾಡಿಸಿ ನೋಟಿಸ್ ನೀಡಿದ್ದಾರೆ. ಮುಂಡಗೋಡ ತಾಲೂಕಿನ ಹಲವು ಭಾಗಗಳಲ್ಲಿ ಈ ಕೆಳಗಿನಂತೆ ದಾಳಿಯು ನಡೆದಿದೆ.

  1. ಶ್ರೀ ಚನ್ನಬಸವೇಶ್ವರ ಮೆಡಿಕಲ್ & ಜನರಲ್ ಸ್ಟೋರ್, ಮಳಗಿ ಇವರು ಮೆಡಿಕಲ್ ಸ್ಟೋರ್ ನಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ ಸದರಿಯವರ ಅಂಗಡಿಗೆ ಬೀಗ ಹಾಕಿ ಬಂದ ಮಾಡಿಸಲಾಯಿತು.
  2. ಶ್ರೀ ರೇಣುಕಾ ಮೆಡಿಕಲ್ ಮತ್ತು ಜನರಲ್ ಸ್ಟೋರ್, ಮಳಗಿ ಇವರು ಮೆಡಿಕಲ್ ಸ್ಟೋರ್ ನಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ ಸದರಿಯವರ ಅಂಗಡಿಗೆ ಬೀಗ ಹಾಕಿ ಬಂದ ಮಾಡಿಸಲಾಯಿತು.
  3. ಕೋಡಂಬಿಯಲ್ಲಿ ಅಹ್ಮದಸಾಬ ಎನ್ನುವವರು ತಮ್ಮ ಮನೆಯ ಪಕ್ಕದ ಶೆಡನಲ್ಲಿ ಅನಧಿಕೃತ ಕ್ಲಿನಿಕ್ ನಡೆಸುತ್ತಿದ್ದು, ಇವರ ಕ್ಲಿನಿಕ್‌ನ ಬಾಗಿಲಿಗೆ ನೋಟಿಸ್ ಲಗತ್ತಿಸಿ, ಕೀಲಿ ಹಾಕಲಾಯಿತು
  4. ಶ್ರೀ ಗುರು ಕ್ಲಿನಿಕ್, ಡಾ| ಅಮರ ಶಿಂಧೆ, ಇವರು ಕೋಡಂಬಿ ಮತ್ತು ಪಾಳಾ ಹಾಗೂ ತಮ್ಮ ಮನೆಯಲ್ಲಿ ಕೂಡ ಅನಧಿಕೃತವಾಗಿ ಕ್ಲಿನಿಕ್‌ಗಳನ್ನು ನಡೆಸುತ್ತಿದ್ದರಿಂದ ಸದರಿಯವರ 2 ಕ್ಲಿನಿಕ್‌ಗಳಿಗೆ ಕೀಲಿ ಹಾಕಿ ಬಂದ ಮಾಡಲಾಯಿತು ಮತ್ತು ಮನೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡದಂತೆ ಎಚ್ಚರಿಸಿ ನೋಟಿಸ್‌ ನೀಡಲಾಯಿತು.
  5. ಧನ್ವಂತರಿ ಕ್ಲಿನಿಕ್, ಕಾತೂರು ಆರ್.ಜಿ ಪೂಜಾರ್ ಎನ್ನುವವರು ಯಾವುದೇ ವಿದ್ಯಾರ್ಹತೆ ಹೊಂದದೇ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ ಸದರಿಯವರ ಕ್ಲಿನಿಕ್ ಬಂದ ಮಾಡಿಸಿ ನೋಟಿಸ್ ನೀಡಲಾಯಿತು.
  6. ಗೋಪಾಲ ಬೆನ್ನೂರು ಎಂಬುವವರು ಗಣೇಶಪುರದ ಬಾಡಿಗೆ ಮನೆಯಲ್ಲಿ ಯಾವುದೇ ಬೋರ್ಡ್ ಹಾಗೂ ಯಾವುದೇ ವಿದ್ಯಾರ್ಹತೆ ಹೊಂದದೇ ಆನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ, ಸದರಿಯವರ ಕ್ಲಿನಿಕ್‌ನ ಬಾಗಿಲಿಗೆ ನೋಟಿಸ್‌ ಲಗತ್ತಿಸಿ, ಕೀಲಿ ಹಾಕಲಾಯಿತು.
  7. ಧನ್ವಂತರಿ ಕ್ಲಿನಿಕ್, ಕಾವಲಕೊಪ್ಪದಲ್ಲಿ ಬಸವರಾಜ ಹಡಪದ ಎಂಬುವವರು ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ, ಸದರಿಯವರಿಗೆ ನೋಟಿಸ್ ನೀಡಿ, ಕ್ಲಿನಿಕ್‌ಗೆ ಕೀಲಿ ಹಾಕಲಾಯಿತು.

ಕೆ.ಪಿ.ಎಮ್.ಇ ಪ್ರಾಧಿಕಾರದ ತಂಡವು ಈ ದಾಳಿಯನ್ನು ನಡೆಸಿದ್ದು, ತಂಡದಲ್ಲಿ ಐ.ಎಮ್.ಎ ಮುಂಡಗೋಡದ ಅಧ್ಯಕ್ಷರಾದ ಡಾ| ರವಿ ಹೆಗಡೆ, ಡಾ| ನರೇಂದ್ರ ಪವಾರ, ತಾಲೂಕಾ ಆರೋಗ್ಯಾಧಿಕಾರಿಗಳು, ಡಾ| ಸಂಜೀವ ಗಲಗಲಿ, ವೈದ್ಯಾಧಿಕಾರಿಗಳು, ಆಯುರ್ವೇದ ಆಸ್ಪತ್ರೆ, ಡಾ| ಭರತ ಡಿ.ಟಿ ಆಡಳಿತ ವೈದ್ಯಾಧಿಕಾರಿಗಳು, ಪ್ರಾ.ಅ.ಕೇಂದ್ರ ಹುನಗುಂದ, ಪೋಲೀಸ್ ಇಲಾಖೆಯಿಂದ ಶ್ರೀ ಲೋಕೇಶ್ವರ ಮೆಸ್ತ, ಎ.ಎಸ್.ಐ ಮತ್ತು ಶ್ರೀ ನಾಗರಾಜರವರು ದಾಳಿಯಲ್ಲಿ ಭಾಗವಹಿಸಿದ್ದರು.

ಭ್ರಷ್ಟರ ಬೇಟೆ

Recent Posts

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

1 month ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

1 month ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

3 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

3 months ago

ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ.!!

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…

3 months ago

ಪ್ರೇಯಸಿ ಫೋನ್‌ ಎತ್ತಿಲ್ಲ: ಕೋಪದಲ್ಲಿ ಯುವಕ ಇಡೀ ಹಳ್ಳಿಯ ಕರೆಂಟ್ ಕಟ್!

ಪ್ರೇಯಸಿ ಫೋನ್‌ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…

3 months ago