
ಮುಂಡಗೋಡ:- ದಿನಾಂಕ 03-04-2025ರಂದು ಮುಂಡಗೋಡ ತಾಲೂಕಿನಲ್ಲಿ ಕೆ.ಪಿ.ಎಮ್.ಇ ಖಾಯಿದೆ ಅಡಿಯಲ್ಲಿ ಕೆ.ಪಿ.ಎಮ್.ಇ ಮುಂಡಗೋಡ ಪ್ರಾಧಿಕಾರದ ತಂಡವು ದಾಳಿ ನಡೆಸಿ ಅನಧೀಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್‌ಗಳನ್ನು ಬಂದು ಮಾಡಿಸಿ ನೋಟಿಸ್ ನೀಡಿದ್ದಾರೆ. ಮುಂಡಗೋಡ ತಾಲೂಕಿನ ಹಲವು ಭಾಗಗಳಲ್ಲಿ ಈ ಕೆಳಗಿನಂತೆ ದಾಳಿಯು ನಡೆದಿದೆ.
- ಶ್ರೀ ಚನ್ನಬಸವೇಶ್ವರ ಮೆಡಿಕಲ್ & ಜನರಲ್ ಸ್ಟೋರ್, ಮಳಗಿ ಇವರು ಮೆಡಿಕಲ್ ಸ್ಟೋರ್ ನಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ ಸದರಿಯವರ ಅಂಗಡಿಗೆ ಬೀಗ ಹಾಕಿ ಬಂದ ಮಾಡಿಸಲಾಯಿತು.
- ಶ್ರೀ ರೇಣುಕಾ ಮೆಡಿಕಲ್ ಮತ್ತು ಜನರಲ್ ಸ್ಟೋರ್, ಮಳಗಿ ಇವರು ಮೆಡಿಕಲ್ ಸ್ಟೋರ್ ನಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ ಸದರಿಯವರ ಅಂಗಡಿಗೆ ಬೀಗ ಹಾಕಿ ಬಂದ ಮಾಡಿಸಲಾಯಿತು.
- ಕೋಡಂಬಿಯಲ್ಲಿ ಅಹ್ಮದಸಾಬ ಎನ್ನುವವರು ತಮ್ಮ ಮನೆಯ ಪಕ್ಕದ ಶೆಡನಲ್ಲಿ ಅನಧಿಕೃತ ಕ್ಲಿನಿಕ್ ನಡೆಸುತ್ತಿದ್ದು, ಇವರ ಕ್ಲಿನಿಕ್‌ನ ಬಾಗಿಲಿಗೆ ನೋಟಿಸ್ ಲಗತ್ತಿಸಿ, ಕೀಲಿ ಹಾಕಲಾಯಿತು
- ಶ್ರೀ ಗುರು ಕ್ಲಿನಿಕ್, ಡಾ| ಅಮರ ಶಿಂಧೆ, ಇವರು ಕೋಡಂಬಿ ಮತ್ತು ಪಾಳಾ ಹಾಗೂ ತಮ್ಮ ಮನೆಯಲ್ಲಿ ಕೂಡ ಅನಧಿಕೃತವಾಗಿ ಕ್ಲಿನಿಕ್‌ಗಳನ್ನು ನಡೆಸುತ್ತಿದ್ದರಿಂದ ಸದರಿಯವರ 2 ಕ್ಲಿನಿಕ್‌ಗಳಿಗೆ ಕೀಲಿ ಹಾಕಿ ಬಂದ ಮಾಡಲಾಯಿತು ಮತ್ತು ಮನೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡದಂತೆ ಎಚ್ಚರಿಸಿ ನೋಟಿಸ್ ನೀಡಲಾಯಿತು.
- ಧನ್ವಂತರಿ ಕ್ಲಿನಿಕ್, ಕಾತೂರು ಆರ್.ಜಿ ಪೂಜಾರ್ ಎನ್ನುವವರು ಯಾವುದೇ ವಿದ್ಯಾರ್ಹತೆ ಹೊಂದದೇ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ ಸದರಿಯವರ ಕ್ಲಿನಿಕ್ ಬಂದ ಮಾಡಿಸಿ ನೋಟಿಸ್ ನೀಡಲಾಯಿತು.
- ಗೋಪಾಲ ಬೆನ್ನೂರು ಎಂಬುವವರು ಗಣೇಶಪುರದ ಬಾಡಿಗೆ ಮನೆಯಲ್ಲಿ ಯಾವುದೇ ಬೋರ್ಡ್ ಹಾಗೂ ಯಾವುದೇ ವಿದ್ಯಾರ್ಹತೆ ಹೊಂದದೇ ಆನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ, ಸದರಿಯವರ ಕ್ಲಿನಿಕ್‌ನ ಬಾಗಿಲಿಗೆ ನೋಟಿಸ್ ಲಗತ್ತಿಸಿ, ಕೀಲಿ ಹಾಕಲಾಯಿತು.
- ಧನ್ವಂತರಿ ಕ್ಲಿನಿಕ್, ಕಾವಲಕೊಪ್ಪದಲ್ಲಿ ಬಸವರಾಜ ಹಡಪದ ಎಂಬುವವರು ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ, ಸದರಿಯವರಿಗೆ ನೋಟಿಸ್ ನೀಡಿ, ಕ್ಲಿನಿಕ್‌ಗೆ ಕೀಲಿ ಹಾಕಲಾಯಿತು.
ಕೆ.ಪಿ.ಎಮ್.ಇ ಪ್ರಾಧಿಕಾರದ ತಂಡವು ಈ ದಾಳಿಯನ್ನು ನಡೆಸಿದ್ದು, ತಂಡದಲ್ಲಿ ಐ.ಎಮ್.ಎ ಮುಂಡಗೋಡದ ಅಧ್ಯಕ್ಷರಾದ ಡಾ| ರವಿ ಹೆಗಡೆ, ಡಾ| ನರೇಂದ್ರ ಪವಾರ, ತಾಲೂಕಾ ಆರೋಗ್ಯಾಧಿಕಾರಿಗಳು, ಡಾ| ಸಂಜೀವ ಗಲಗಲಿ, ವೈದ್ಯಾಧಿಕಾರಿಗಳು, ಆಯುರ್ವೇದ ಆಸ್ಪತ್ರೆ, ಡಾ| ಭರತ ಡಿ.ಟಿ ಆಡಳಿತ ವೈದ್ಯಾಧಿಕಾರಿಗಳು, ಪ್ರಾ.ಅ.ಕೇಂದ್ರ ಹುನಗುಂದ, ಪೋಲೀಸ್ ಇಲಾಖೆಯಿಂದ ಶ್ರೀ ಲೋಕೇಶ್ವರ ಮೆಸ್ತ, ಎ.ಎಸ್.ಐ ಮತ್ತು ಶ್ರೀ ನಾಗರಾಜರವರು ದಾಳಿಯಲ್ಲಿ ಭಾಗವಹಿಸಿದ್ದರು.