ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಾಳಸಂದ್ರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಆರನೇ ತರಗತಿಯ ವಿದ್ಯಾರ್ಥಿಯೊಬ್ಬ ವಾರ್ಡನ್‌ನ ಕ್ರೌರ್ಯಕ್ಕೆ ಒಳಗಾದ ಘಟನೆ ಬೆಳಕಿಗೆ ಬಂದಿದೆ.

ಅನಂತಪುರ ಗ್ರಾಮಕ್ಕೆ ಸೇರಿದ ಈ ಬಾಲಕನು ತಾನಿದ್ದ ವಸತಿ ನಿಲಯದಲ್ಲಿ ಸಹಪಾಠಿಗಳ ಜೊತೆ ತಮಾಷೆ ಮಾಡುತ್ತಿದ್ದ. ಅತಿಥಿ ವಿದ್ಯಾರ್ಥಿಗಳನ್ನು “ವಸತಿ ನಿಲಯದಲ್ಲಿ ದೆವ್ವ ಇದೆ” ಎಂದು ಹೆದರಿಸಿದ್ದ ಎನ್ನಲಾಗಿದ್ದು, ಈ ವಿಷಯವನ್ನು ಇತರ ವಿದ್ಯಾರ್ಥಿಗಳು ವಾರ್ಡನ್‌ಗೆ ತಿಳಿಸಿದ್ದಾರೆ.

ವಿಷಯ ತಿಳಿದ ವಾರ್ಡನ್‌ ಆತನ ಮೇಲೆ ಕೋಪಗೊಂಡು ಮಾನವೀಯತೆ ಮರೆತು ಬೆಲ್ಟ್ ಹಾಗೂ ಕೋಲಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆ ಪರಿಣಾಮ ವಿದ್ಯಾರ್ಥಿಯ ದೇಹದಾದ್ಯಂತ ಗಾಯಗಳಾಗಿದ್ದು, ಶರೀರದಲ್ಲಿ ಬಾಸುಂಡೆಗಳು ಉಂಟಾಗಿದ್ದು, ಕೆಲವು ಸ್ಥಳಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ.

ಈ ಘಟನೆಗೆ ಸಂಬಂಧಿಸಿದ ಮಾಹಿತಿ ಮೇಲಧಿಕಾರಿಗಳಿಗೆ ತಲುಪಿದ್ದು, ತಕ್ಷಣ ವಾರ್ಡನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಜರುಗಲಿದೆ. ವಿದ್ಯಾರ್ಥಿಯ ಸ್ಥಿತಿಯನ್ನು ವೈದ್ಯಕೀಯ ವರದಿ ಆಧರಿಸಿ ಹೆಚ್ಚಿನ ತನಿಖೆ ನಡೆಸಲು ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

 

Related News

error: Content is protected !!