Latest

ಕಣ್ಣೀರು ಹಾಕಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ!

ತಮ್ಮ ಹಳೆ ಸ್ನೇಹಿತರು ಸಂಬಂಧಿಕರನ್ನು ನೋಡಿ ಭಾವುಕಾರದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಹುಟ್ಟೂರಿನಲ್ಲಿ ಕಣ್ಣೀರು ಹಾಕಿದರು. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿರುವ ತಮ್ಮ ತಂದೆ ತಾಯಿ ಜನಿಸಿದ ಬಾಳಿ ಬದುಕಿದ ಕಮಡೊಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದು ಆ ಸಂದರ್ಭ ತಮ್ಮ ಬಾಲ್ಯದ ನೆನಪು ಮೆಲುಕು ಹಾಕಿ ಕಣ್ಣೀರಿಟ್ಟರು.
ಇದೇ ಸಂದರ್ಭ ಅವರು ಸಿಎಂ ಹುದ್ದೆಗೆ ಏರಲು ಸ್ನೇಹಿತರ ಸಹಾಯವನ್ನು ಸಿಎಂ ಬೊಮ್ಮಾಯಿ ನೆನೆದರು. ಇದೇ ಸಂದರ್ಭ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ ನೀಡಿದ್ದು ‘ನಮ್ಮ ಪೂರ್ವಜರು ಬದುಕಿ ಬಾಳಿದಂತಹ ಮನೆ. ನಮ್ಮ ತಂದೆ ಇದ್ದಂತಹ ಮನೆ, ಎಲ್ಲ ಹಿರಿಯರು, ಸ್ನೇಹಿತರು ನೆನಪಾಗ್ತಾರೆ. ಚಿಕ್ಕಂದಿನಲ್ಲಿ ಸ್ನೇಹಿತರು ಜತೆಗೆ ಕಳೆದ ಆಟಗಳು ಕ್ಷಣಗಳ ಎಲ್ಲವೂ ನೆನಪು ಆಗುತ್ತೆ.
ಬಹಳ ಸುಂದರ ಗ್ರಾಮ ನನ್ನದು ಒಳ್ಳೆಯ ಕೆರೆ,ದೇವಸ್ಥಾನಗಳಿವೆ. 52 ದಶಕಗಳ ಹಿಂದೆಯೇ ಒಳ್ಳೆಯದು ಲೈಬ್ರರಿ ಇರೋ ಗ್ರಾಮ ನಮ್ಮದು. ನಮ್ಮ ಗ್ರಾಮದಲ್ಲಿ ಫಲವತ್ತಾದ ಜಮೀನು‌ ಇದೆ. ಕಷ್ಟಪಟ್ಟು ದುಡಿಯುವ ಜನ ಬಹಳ ಸಜ್ಜನರು. ಗ್ರಾಮದಲ್ಲಿ ಯಾವಾಗಲೂ ನೀರಿನ ಕೊರತೆ ಇತ್ತು . ನಮ್ಮ ತಂದೆಯವರ ಕಾಲದಲ್ಲಿ ಬೋರವೆಲ್ ಮೂಲಕ ನೀರು ಕೊಡಲಾಗಿತ್ತು. ಗ್ರಾಮದಲ್ಲಿ ಸವಳು ನೀರು ಇರೋದ್ರಿಂದ ಪಕ್ಕದ ಶಿರೂರ ಗ್ರಾಮದಿಂದ ನಾನು ನೀರು ತಂದಿರೋದು ನೆನಪು ಇದೆ. ಆದರೀಗ ನರೇಂದ್ರ ಆಶೀರ್ವಾದಿಂದ ಜಲಜೀವನ ಮಿಷನ್ ನಿಂದ ಪ್ರತಿಯೊಂದು ಮನೆಗೆ ನೀರಿನ ವ್ಯವಸ್ಥೆ ಮಾಡಿದ್ದೇವೆ. ಬಹಳ ವರ್ಷದ ನೀರಿನ ಸಮಸ್ಯೆ ಬಗೆ ಹರಿದಿರೋದು ಸಂತಸ ತಂದಿದೆ. ಊರಿನ ಮಗ ರಾಜ್ಯದ ಮುಖ್ಯಸ್ಥರಾದಾಗ ಗ್ರಾಮದ ಜನರು ಬಹಳ ಪ್ರೀತಿ ವಿಶ್ವಾಸ ತೋರಿಸಿ ಹರಸಿದ್ದಾರೆ. ಬಹಳ ದಿನಗಳ ನಂತರ ನಮ್ಮ ಗ್ರಾಮಕ್ಕೆ ಬಂದಿದ್ದೇನೆ ಎಂದ ಸಿಎಂ
ಇದಕ್ಕೂ ಮುಂಚೆ ಕಮಡೊಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟ ಮುಖ್ಯಮಂತ್ರಿಗೆ ಅದ್ಧೂರಿ ‌ಸ್ವಾಗತ ನೀಡಲಾಗಿದ್ದು ಅವರು ತಮ್ಮ ಮನೆಯಲ್ಲಿ ಮಂಡಕ್ಕಿ ಮಿರ್ಚಿ ಸವಿದರು. ನಂತರ ಗ್ರಾಮ ದೇವತೆಯ ದರ್ಶನ ಪಡೆದ ಸಿಎಂಗೆ ಬಿಜೆಪಿ ಟಿಕೇಟ್ ಆಕಾಂಕ್ಷಿಗಳಾದ ಎಸ್ ಐ ಚಿಕ್ಕನಗೌಡರ, ಎಂ.ಆರ್ ಪಾಟೀಲ್ ಸಾಥ್ ತೆರಳಿದರು.

ಭ್ರಷ್ಟರ ಬೇಟೆ

Recent Posts

ಯುವತಿ ಅತ್ಯಾಚಾರ, ಕೊಲೆ ಪ್ರಕರಣ: ಕರ್ತವ್ಯಲೋಪ ಆರೋಪದಲ್ಲಿ 4 ಪೊಲೀಸ್ ಪೇದೆಗಳು ಅಮಾನತು

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ 21 ವರ್ಷದ ಯುವತಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ…

20 hours ago

KSRTC ಬಸ್‌ನಲ್ಲಿ ಯುವತಿಗೆ ಕಿರುಕುಳ ಆರೋಪ: ಚಪ್ಪಲಿಯಿಂದ ಯುವಕನಿಗೆ ಧರ್ಮದೇಟು, ಕ್ಷಮೆಯಾಚನೆ

ಹಾಸನ: ಹಾಸನದಿಂದ ಬೆಂಗಳೂರಿನತ್ತ ತೆರಳುತ್ತಿದ್ದ KSRTC ಬಸ್‌ನಲ್ಲಿ ಯುವತಿಯೊಬ್ಬರಿಗೆ ಸಹ ಪ್ರಯಾಣಿಕನೊಬ್ಬ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಇದರಿಂದ ಬಸ್‌ನಲ್ಲಿ…

20 hours ago

MBBS ಓದಲು ರಷ್ಯಾಗೆ ಹೋದ ಯುವಕನಿಗೆ ಪ್ರೊಫೆಸರ್ ಜೊತೆ ಪ್ರೀತಿ; ಮದುವೆ ಬಳಿಕ ಕ್ಲಿನಿಕ್ ಆರಂಭಿಸಿ ಲಕ್ಷಾಂತರ ಸಂಪಾದನೆ!

ಉನ್ನತ ವ್ಯಾಸಂಗದ ಕನಸು ಹೊತ್ತು ವಿದೇಶಕ್ಕೆ ತೆರಳಿದ್ದ ಉತ್ತರ ಪ್ರದೇಶದ ಯುವಕನ ಜೀವನ ಇದೀಗ ಸಂಪೂರ್ಣ ಬದಲಾಗಿದೆ. ಎಂಬಿಬಿಎಸ್ ಓದಲು…

20 hours ago

ಶಾಲಾ ಬಾಲಕಿಯರನ್ನು ಪ್ರೇಮದ ಬಲೆಗೆ ಬೀಳಿಸಿ ಹಣ ಸಂಪಾದನೆ ಆರೋಪ: ದೆಹಲಿಯಲ್ಲಿ 24 ವರ್ಷದ ಯುವಕ ಬಂಧನ

ದೆಹಲಿಯ ಉತ್ತಮ್ ನಗರದಲ್ಲಿ 24 ವರ್ಷದ ಯುವಕನೊಬ್ಬನನ್ನು ಸ್ಥಳೀಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬಳಿಕ, ಆತನ ಮೊಬೈಲ್‌ನಲ್ಲಿ ಪತ್ತೆಯಾದ…

20 hours ago

ಕಿತ್ತೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಆಭರಣ ಕಳ್ಳತನ ಪ್ರಕರಣ ಭೇದಿಸಿ 5 ಅಂತರರಾಜ್ಯ ಕಳ್ಳರ ಬಂಧನ

ಕಿತ್ತೂರು: ಚನ್ನಮ್ಮನ ಕಿತ್ತೂರಿನಲ್ಲಿ ನಡೆದ ಆಭರಣ ಅಂಗಡಿ ಕಳ್ಳತನ ಪ್ರಕರಣವನ್ನು ಕಿತ್ತೂರು ಪೊಲೀಸರು ಭೇದಿಸಿದ್ದು, ರಾಜಸ್ಥಾನ ಮೂಲದ ನಾಲ್ವರು ಹಾಗೂ…

20 hours ago

ಬೆಳಗಾವಿಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಅನುಷ್ಠಾನದ ಮೌಲ್ಯಮಾಪನ: ಸಂತ್ರಸ್ತರೊಂದಿಗೆ ಗುಂಪು ಚರ್ಚೆ

ಬೆಳಗಾವಿ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅನುಷ್ಠಾನದ ಕುರಿತು ನೈರುತ್ಯ ಆರ್ಟ ಮೀಡಿಯಾ ಸಂಸ್ಥೆ (ಬೆಂಗಳೂರು)…

20 hours ago