Crime

ರೌಡಿಗಳ ರೀಲ್ಸ್‌ ಗೆ ಬ್ರೇಕ್ ಹಾಕಲು ಮುಂದಾದ ಸಿಸಿಬಿ.

ರೌಡಿ ಎಡಿಟ್ಸ್ ಎಂದು ಹೇಳಿ ರೌಡಿಗಳನ್ನು ಹೀರೋ ಮಾಡುವ ರೀತಿಯಲ್ಲಿ ರೀಲ್ಸ್‌ಗಳು ಪ್ರತಿ ದಿನವೂ ಬಿಡುಗಡೆಯಾಗುತ್ತಿತ್ತು. ಪೊಲೀಸರಿಗೂ ಸಿಗದ ಈ ರೌಡಿಗಳ ಪೋಟೊಗಳು, ವಿಡಿಯೊ ರೀಲ್ಸ್‌ ಮಾಡುವವರಿಗೆ ಸಿಗುತ್ತಿತ್ತು. ಇದರಿಂದ ಸಹಜವಾಗಿಯೇ ಪೊಲೀಸರಿಗೂ ಅನುಮಾನ ಬಂದಿತ್ತು. ರೌಡಿಗಳಾದ ಸೈಲೆಂಟ್ ಸುನೀಲ, ವಿಲ್ಸನ್ ಗಾರ್ಡನ್ ನಾಗ, ಕಾಡುಬೀಸನಹಳ್ಳಿ ರೋಹಿತ್, ‌ಕುಣಿಗಲ್ ಗಿರಿ ಇಂತಹ ನಟೋರಿಯಸ್ ರೌಡಿಗಳ ರೀಲ್ಸ್‌ಗಳೇ ಹೆಚ್ಚಾಗಿವೆ. ಅಷ್ಟಲ್ಲದೆ ಆಯಾ ಏರಿಯಾದ ಪುಡಿ ರೌಡಿಗಳೂ ಕೂಡ ತಮ್ಮ ಹವಾ ಮೇಂಟೇನ್ ಮಾಡುವ ಸಲುವಾಗಿ ರೀಲ್ಸ್ ಮೊರೆ ಹೋಗುತ್ತಿದ್ದರು.
ಕೆಲ ರೌಡಿಗಳ ಶಿಷ್ಯಂದಿರು ಬಾಸ್‌ ಎಂದು ರೀಲ್ಸ್‌ ಮಾಡಿದರೆ, ಉಳಿದವರು ಕೆಲಸವಿಲ್ಲದ ಕೆಲ ಹುಡುಗರಿಗೆ 500 ರೂ. ಕೊಟ್ಟು ರೀಲ್ಸ್ ಮಾಡಿ ಅಪ್ಲೋಡ್ ಮಾಡುವ ಕೆಲಸಗಳನ್ನು ನೀಡುತ್ತಿದ್ದರು. ಇನ್ನು ಏರಿಯಾದಲ್ಲಿ ತಮ್ಮ ಅಸ್ತಿತ್ವದ ಬಗ್ಗೆ ಇರುವಿಕೆಯನ್ನು ತೋರಿಸಿಕೊಳ್ಳಲು ಹಾಗೂ ಫ್ಯಾನ್ ಫಾಲೋವರ್ಸ್‌ಗಳನ್ನು ಹೆಚ್ಚಿಸಲು ಈ ರೀತಿಯ ಕೆಲಸಗಳನ್ನು ರೌಡಿಗಳ ಶಿಷ್ಯಂದಿರು ಮಾಡುತ್ತಿದ್ದರು. ಎಲ್ಲೋ ಕೂತ ಮುಖ್ಯ ರೌಡಿಯೇ ಈ ರೀತಿಯ ಕೃತ್ಯವನ್ನು ಎಸಗಲು ಪ್ರೇರೆಪಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಬ್ಯಾನರ್‌ಗಳನ್ನು ಕಟ್ಟಿ ಏರಿಯಾದಲ್ಲಿ ಹವಾ ತೋರಿಸುತ್ತಿದ್ದರು. ಸದ್ಯ ಸೋಷಿಯಲ್ ಮೀಡಿಯಾ ಮೂಲಕ ತಮ್ಮದೇ ಆದ ಕುಖ್ಯಾತಿಯನ್ನು ಗಳಿಸುತ್ತಿದ್ದಾರೆ. ಈ ಸಂಬಂಧ ಅಪ್ರಾಪ್ತರ ಮನೆಯವರನ್ನು ಕರೆಸಿ ವಾರ್ನಿಂಗ್ ಮಾಡಲಾಗಿದೆ. ಸುಮಾರು 60ಕ್ಕೂ ಹೆಚ್ಚು ರೌಡಿಗಳ ಪೇಜ್‌ ಅಕೌಂಟ್‌ಗಳನ್ನು ಬಂದ್ ಮಾಡಲಾಗಿದೆ. ಸಿಸಿಬಿಯ ಆರ್ಗನೈಝ್ ಕ್ರೈಂ ವಿಂಗ್‌ನ ಕಾರ್ಯಾಚರಣೆ ಇದು.

ಭ್ರಷ್ಟರ ಬೇಟೆ

Recent Posts

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

1 month ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

1 month ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

3 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

3 months ago

ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ.!!

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…

3 months ago

ಪ್ರೇಯಸಿ ಫೋನ್‌ ಎತ್ತಿಲ್ಲ: ಕೋಪದಲ್ಲಿ ಯುವಕ ಇಡೀ ಹಳ್ಳಿಯ ಕರೆಂಟ್ ಕಟ್!

ಪ್ರೇಯಸಿ ಫೋನ್‌ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…

3 months ago