Latest

ಮಾದಕ ವಸ್ತುಗಳ ಮಾರಾಟದ ವಿರುದ್ಧ ಸಿ.ಸಿ.ಬಿ. ಪೊಲೀಸರ ಭರ್ಜರಿ ಕಾರ್ಯಾಚರಣೆ

ಮೈಸೂರು ನಗರದ ಸಿ.ಸಿ.ಬಿ. ಪೊಲೀಸರು ಇತ್ತೀಚೆಗೆ ಹಲವಾರು ಗಾಂಜಾ ಹಾಗೂ ಎಂ.ಡಿ.ಎA.ಎ. ಡ್ರಗ್ಸ್ ಮಾರಾಟದ ಜಾಲಗಳ ಮೇಲೆ ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸಿದ್ದು, ಅದೇ ರೀತಿ ಸದರಿ ಕಾರ್ಯವನ್ನು ಮುಂದುವರೆಸಿ ದಿನಾಂಕ: ೨೨/೧೦/೨೦೨೨ ರಂದು ಖಚಿತ ಮಾಹಿತಿ ಮೇರೆಗೆ ಬನ್ನಿಮಂಟಪದ ಹನುಮಂತನಗರ ರಸ್ತೆಯಲ್ಲಿ ದಾಳಿ ಮಾಡಿ ಅಲ್ಲಿ ಅಕ್ರಮವಾಗಿ ಕಾರಿನೊಳಗಡೆ ಗಾಂಜಾ ಇಟ್ಟುಕೊಂಡು ಗಿರಾಕಿಗಳನ್ನು ಅಲ್ಲಿಗೆ ಕರೆಯಿಸಿಕೊಂಡು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ ಅವರ ವಶದಲ್ಲಿದ್ದ ೫ ಕೆ.ಜಿ. ೬೯೧ ಗ್ರಾಂ ತೂಕದ ಗಾಂಜಾ, ಒಂದು ಮಾರುತಿ ೮೦೦ ಕಾರು, ೧೦,೦೦೦/-ರೂ ನಗರದು ಹಾಗೂ ೩ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ. ನಂತರ ಈ ಸಂಬAಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅದೇ ರೀತಿ ದಿನಾಂಕ: ೨೩/೧೦/೨೦೨೨ ರಂದು ಸಿ.ಸಿ.ಬಿ. ಪೊಲೀಸರು ಖಚಿತ ಮಾಹಿತಿ ಮೇರೆಗೆ ನರಸಿಂಹರಾಜ ಪೊಲೀಸ್ ಠಾಣೆ ಸರಹದ್ದು ಮಂಡಿ ಮೊಹಲ್ಲಾದ ೨ನೇ ಈದ್ಗಾದ ಸಿ.ವಿ. ರಸ್ತೆಯ ೭ನೇ ಕ್ರಾಸ್‌ನಲ್ಲಿರುವ ಮನೆ ನಂ: ೩೩೧೦ ರ ಮೇಲೆ ದಾಳಿ ಮಾಡಿ ಅಲ್ಲಿ ಗಾಂಜಾವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊAಡು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸಿ ಆತನ ವಶದಲ್ಲಿದ್ದ ೪೧ ಕೆ.ಜಿ. ತೂಕದ ಗಾಂಜಾವನ್ನು ವಶಪಡಿಸಿಕೊಂಡಿರುತ್ತಾರೆ. ಈ ಸಂಬAಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಆರೋಪಿಗಳು ಸದರಿ ಗಾಂಜಾವನ್ನು ಎಲ್ಲಿಂದ ಮತ್ತು ಯಾರಿಂದ ಖರೀದಿ ಮಾಡಿಕೊಂಡು ತರುತ್ತಿದ್ದರು ಎಂಬ ಬಗ್ಗೆ ಹಾಗೂ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ಈ ದಾಳಿ ಕಾರ್ಯಗಳನ್ನು ಮೈಸೂರು ನಗರದ ಡಿ.ಸಿ.ಪಿ. ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ರವರಾದ ಶ್ರೀಮತಿ. ಗೀತ.ಎಂ.ಎಸ್., ಐ.ಪಿ.ಎಸ್. ಮತ್ತು ಸಿ.ಸಿ.ಬಿ.ಯ ಎ.ಸಿ.ಪಿ. ಅಶ್ವಥನಾರಾಯಣ.ಸಿ.ಕೆ.ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಇನ್ಸ್ಪೆಕ್ಟರ್ ಮಲ್ಲೇಶ.ಎ., ಎ.ಎಸ್.ಐ. ರಾಜು, ಸಿಬ್ಬಂದಿಗಳಾದ ಅನಿಲ್, ಸುಬಾನಲ್ಲಾ ಬಾಲ್‌ದಾರ್, ಡಿ.ಶ್ರೀನಿವಾಸಪ್ರಸಾದ್, ಜೋಸೆಫ್ ನೊರೋನ್ಹ, ರವಿಕುಮಾರ್, ರಾಧೇಶ್, ಜನಾರ್ಧನರಾವ್, ಶ್ರೀನಿವಾಸ.ಕೆ.ಜಿ., ಅರುಣ್‌ಕುಮಾರ್, ರಘು, ಮಮತ ರವರುಗಳು ಮಾಡಿರುತ್ತಾರೆ.
ಸದರಿ ಕಾರ್ಯಾಚರಣೆಯನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ. ಚಂದ್ರಗುಪ್ತ, ಐ.ಪಿ.ಎಸ್.ರವರು ಪ್ರಶಂಸಿರುತ್ತಾರೆ.

ಭ್ರಷ್ಟರ ಬೇಟೆ

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

2 weeks ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago