ರಾಜ್ಯದಲ್ಲಿ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. “ಸರ್ಕಾರಿ ಕೆಲಸ ದೇವರ ಕೆಲಸ” ಎಂಬ ನಂಬಿಕೆಗೆ ಧಕ್ಕೆ ತರುವಂತೆ, ಜನಸೇವೆಗೆ ಬಂದ ಕೆಲ ಅಧಿಕಾರಿಗಳು ಜನಸಾಮಾನ್ಯರ ಬಳಿ ಲಂಚದ ಬೇಡಿಕೆ ಇಡುವ ಘಟನೆಗಳು ಮುಂದುವರಿಯುತ್ತಿವೆ. ಈಗಾಗಲೇ ಅನೇಕ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರೂ, ಕೆಲವರು ಪಾಠ ಕಲಿಯದೇ ಅದೇ ದಾರಿಯಲ್ಲಿ ಮುಂದುವರಿಯುತ್ತಿರುವುದು ದುಃಖಕರ.
ಇದೇ ಹಿನ್ನೆಲೆದಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುವಾಗ ಇಬ್ಬರು ಪೊಲೀಸ್ ಪೇದೆಗಳು ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾರುತಿ ಬ್ಯಾಳಿ ಮತ್ತು ಚಂದಾಲಿಂಗ್ ಮೇಳೆ ಎಂಬ ಪೇದೆಗಳು, ಅಟ್ರಾಸಿಟಿ ಪ್ರಕರಣವೊಂದರಲ್ಲಿ ಜಾಮೀನು ಕೊಡಿಸುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಮೆಹಬೂಬ್ ಪಾಶಾ ಎಂಬ ವ್ಯಕ್ತಿಯಿಂದ ಫೋನ್‌ಪೇ ಮೂಲಕ ₹15,000 ಹಣವನ್ನು ಪಡೆದಿದ್ದ ಆರೋಪವೂ ಇವರ ಮೇಲೆ ಇದೆ. ಬಳಿಕ ₹3,000 ಹಣವನ್ನು ಸ್ವೀಕರಿಸುವ ವೇಳೆ, ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತದ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯುತ್ತಿದ್ದು, ಇಂತಹ ಘಟನೆಗಳು ಇತರ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಬೇಕಾಗಿದೆ.
ಭಟ್ಕಳ: ತಾಲೂಕಿನ ತಲಗೇರಿ ಸಮೀಪದ ಜಾಲಿ–ವಿವೇಕಾನಂದ ನಗರ ಪ್ರದೇಶದಲ್ಲಿ ಶನಿವಾರ ತಡರಾತ್ರಿ ನಡೆದ ಗೋವು ಕಳ್ಳತನ ಯತ್ನ ಗ್ರಾಮಸ್ಥರ ಎಚ್ಚರಿಕೆಯಿಂದ…
ಹುಬ್ಬಳ್ಳಿ ನಗರವನ್ನು ಬೆಚ್ಚಿಬೀಳಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ಟ್ರೈನರ್ ಸಮೀರ್‌ನ ಕರಾಳ ಕೃತ್ಯಗಳು ಹಂತ ಹಂತವಾಗಿ ಬಹಿರಂಗವಾಗುತ್ತಿವೆ.…
ಉತ್ತರ ಕರ್ನಾಟಕ ಅಂದಾಗ ನೆನಪಾಗುವುದು ಅದರ ವಿಶೇಷ ಆಹಾರ, ಬಯಲು ಸೀಮೆಯ ಸುಂದರ ಪ್ರಕೃತಿ ಮತ್ತು ಮುಖ್ಯವಾಗಿ ಜೀವಂತವಾಗಿರುವ ನಾಟಕ…
ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಾಚೆರ್ಲಾ ಪಟ್ಟಣದಲ್ಲಿ ಸಮಾಜವೇ ತಲೆತಗ್ಗಿಸುವಂತಹ ಕ್ರೂರ ಘಟನೆ ಬೆಳಕಿಗೆ ಬಂದಿದೆ. ಏಪ್ರಿಲ್ 2ರಂದು ಸಂಜೆ, ಸರ್ಕಾರಿ…
ಬೆಂಗಳೂರು: ಆನ್‌ಲೈನ್ ಬೈಕ್ ಟ್ಯಾಕ್ಸಿ ಸೇವೆಯಾದ ರಾಪಿಡೋ ಮೂಲಕ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೈಕ್…
ಹುಬ್ಬಳ್ಳಿಯಲ್ಲಿ ಮುಸ್ಲಿಂ ಜಿಮ್ ಟ್ರೈನರ್ ವಿರುದ್ಧ ಹಿಂದೂ ಯುವತಿಯರೊಂದಿಗೆ ‘ಲವ್ ಜಿಹಾದ್’ ನಡೆಸಿದ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಎರಡು…