ಮಂಗಳೂರು (ಜು.11): ಮಂಗಳೂರಿನ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ, ವಾಹನ ಬಿಟ್ಟುಕೊಡುವ ಹೆಸರಲ್ಲಿ ಲಂಚ ಪಡೆಯುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲೋಕಾಯುಕ್ತ ಪೊಲೀಸರು ಈ ವ್ಯಕ್ತಿಯನ್ನು 5 ಸಾವಿರ ರುಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ರೆಡ್‌ ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

ಅಪಘಾತದಿಂದ ಆರಂಭವಾದ ಪ್ರಕರಣ

ಇತ್ತೀಚೆಗೆ ಮಂಗಳೂರಿನ ನಂತೂರು ಸರ್ಕಲ್‌ನಲ್ಲಿ ದೂರುದಾರರ ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ಈ ಸಂಬಂಧ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ಭಾಗವಾಗಿ ದೂರುದಾರರ ಕಾರು ಠಾಣೆಯ ವಶದಲ್ಲಿತ್ತು.

50 ಸಾವಿರ ರು. ಲಂಚದ ಬೇಡಿಕೆ

ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ತಸ್ಲಿಂ ಎಂಬವರು ಕಾರು ಬಿಡುಗಡೆಗೊಳಿಸಲು 50 ಸಾವಿರ ರುಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ. ವಕೀಲರ ಮೂಲಕ ದೂರುದಾರರು ಅನುಮತಿ ಪಡೆದು ಸಹಿ ಹಾಕಿದ್ದರೂ ಕಾರು ಬಿಟ್ಟುಕೊಡಲಾಗಿಲ್ಲ. ಬಳಿಕ, ದೂರುದಾರರ ಮೊಬೈಲ್‌ ಫೋನ್‌ ಬಲವಂತವಾಗಿ ವಶಪಡಿಸಿಕೊಳ್ಳಲಾಗಿದೆ.

ಮೊಬೈಲ್‌ಗೆ ಬದಲಾಗಿ ಲೈಸನ್ಸ್‌

ಮೊಬೈಲ್ ಹಿಂದಿರುಗಿಸಲು ಅವರು ಮೊದಲಿಗೆ 50 ಸಾವಿರ, ನಂತರ ಮೂಲ ಲೈಸನ್ಸ್‌ ನೀಡುವಂತೆ ಸೂಚಿಸಿದ್ದಾರೆ. ದೂರುದಾರರು ಒರಿಜಿನಲ್ ಲೈಸನ್ಸ್ ನೀಡಿ ಮೊಬೈಲ್‌ ಹಿಂತಿರುಗಿಸಿಕೊಂಡರೂ, ನಂತರ ಮತ್ತೆ 30 ಸಾವಿರ ರುಪಾಯಿಗೆ ಒತ್ತಡ ಹಾಕಲಾಗಿದೆ.

5 ಸಾವಿರ ಇಲ್ಲದಿದ್ರೆ ಠಾಣೆಗೂ ಕಡೆಗೆ ಬರಬೇಡ!”

ಜುಲೈ 9 ರಂದು ದೂರುದಾರರು ಠಾಣೆಗೆ ತೆರಳಿದಾಗ, ತಸ್ಲಿಂ ಅವರು 10 ಸಾವಿರ ರು. ಕೊಡಬೇಕೆಂದು ಹೇಳಿದರು. ದೂರುದಾರರು ತಮ್ಮಲ್ಲಿ ಕೇವಲ 500 ರು. ಇದೆ ಎಂದಾಗ, “5 ಸಾವಿರ ಇಲ್ಲದಿದ್ರೆ ಠಾಣೆ ಕಕಡೆಗೆ ಬರಬೇಡ ” ಎಂದು ಗದರಿಸಿದ್ದಾರೆ.

ಲೋಕಾಯುಕ್ತ ಬಲೆಗೆ ಬಿದ್ದ ತಸ್ಲಿಂ

ಈ ಎಲ್ಲಾ ಬಡಾವಣೆಗಳ ಕುರಿತು ದೂರು ನೀಡಿದ ದೂರುದಾರರ ಮಾಹಿತಿ ಮೇರೆಗೆ ಲೋಕಾಯುಕ್ತ ಪೊಲೀಸರು ಜಾಲ ಬೀಸಿದರು. ಗುರುವಾರ, ದೂರುದಾರರಿಂದ 5 ಸಾವಿರ ಲಂಚದ ಹಣವನ್ನು ಪಡೆಯುತ್ತಿದ್ದ ವೇಳೆ ತಸ್ಲಿಂ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಮತ್ತೊಬ್ಬ ಠಾಣಾ ಸಿಬ್ಬಂದಿ ವಿನೋದ್ ಅವರ ಪಾತ್ರವನ್ನೂ ಪರಿಶೀಲಿಸಲಾಗುತ್ತಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ತಂಡ

ಈ ಕಾರ್ಯಾಚರಣೆಯನ್ನು ಮಂಗಳೂರು ಲೋಕಾಯುಕ್ತ ಪೊಲೀಸ್‌ ಅಧೀಕ್ಷಕರ (ಪ್ರಭಾರ) ಕುಮಾರಚಂದ್ರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ಇನ್ಸ್‌ಪೆಕ್ಟರ್‌ ಭಾರತಿ ಜಿ., ಚಂದ್ರಶೇಖರ್ ಕೆ.ಎನ್. ಮತ್ತು ಇನ್ನಿತರ ಸಿಬ್ಬಂದಿ ಯಶಸ್ವಿಯಾಗಿ ನಡೆಸಿದರು.

ಈ ಘಟನೆ ಮತ್ತೊಮ್ಮೆ ಪೊಲೀಸ್ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಮುಖವಾಡವನ್ನು ಬೆಳೆಸಿದ್ದು, ತನಿಖೆ ಮುಂದುವರೆದಿದೆ.

error: Content is protected !!