Latest

ಬಾಲಕನ ನಾಪತ್ತೆ: ಸತ್ಯದ ಹುಡುಕಾಟಕ್ಕೆ ಮನೆ ಬಿಟ್ಟು ಹೋದ 17 ವರ್ಷದ ಮೋಹಿತ್ ಋಷಿ

ಬೆಂಗಳೂರು ನಗರದ ವಿದ್ಯಾರಣ್ಯಪುರದಲ್ಲಿ ಅಸಾಮಾನ್ಯ ಘಟನೆ ಸಂಭವಿಸಿದೆ. ಮೋಹಿತ್ ಋಷಿ (17), ವಿದ್ಯಾರಣ್ಯಪುರ ನಿವಾಸಿ ಹಾಗೂ ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಶಿಕ್ಷಣ ಪಡೆಯುತ್ತಿದ್ದ ಬಾಲಕ, ಜ. 16ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ತನ್ನ ಮನೆ ಬಿಟ್ಟು ಹೋಗಿದ್ದಾನೆ. ಮನೆ ಬಿಟ್ಟು ಹೋಗುವ ಮೊದಲು, ಒಂದು ಪತ್ರ ಬರೆದಿಟ್ಟು ಹೋಗಿದ್ದು, ಆಲ್ಲಿ ಅವನು ತನ್ನ ಮನೋಭಾವ ಮತ್ತು ನಿರ್ಧಾರವನ್ನು ವಿವರಿಸಿದ್ದಾನೆ.

ಪತ್ರದ ಒಳತ
“ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಸತ್ಯದ ಪ್ರಪಂಚದ ಕಡೆ ಹೋಗುತ್ತಿದ್ದೇನೆ. ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಲು ಪ್ರಯತ್ನಿಸಬೇಡಿ. ಜಗತ್ತಿನ ಜನರ ಕಲ್ಯಾಣಕ್ಕಾಗಿ ದೇವರು ನನ್ನನ್ನ ಆರಿಸಿಕೊಂಡಿದ್ದಾರೆ. ಈ ರಾಜಜೀವನವನ್ನ ತೊರೆದು ಸತ್ಯದ ಪ್ರಪಂಚದ ಕಡೆ ಹೋಗುತ್ತಿದ್ದೇನೆ,” ಎಂದು ಪತ್ರದಲ್ಲಿ ಬರೆದಿಟ್ಟು, ತನ್ನ ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾನೆ.

ಪೋಷಕರ ಕಳವಳ
ಮೋಹಿತ್ ಋಷಿಯ ತಂದೆ ಅರ್ಜುನ್ ಕುಮಾರ್, ಪುತ್ರನ ನಾಪತ್ತೆ ಕುರಿತು ಕೂಡಲೇ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗನ ಸ್ಥಿತಿ ಬಗ್ಗೆ ಗಂಭೀರ ಚಿಂತೆ ವ್ಯಕ್ತಪಡಿಸಿರುವ ಪೋಷಕರು, ಸಾಮಾಜಿಕ ಜಾಲತಾಣಗಳ ಮೂಲಕ ಮೋಹಿತ್‌ನ ಭಾವಚಿತ್ರವನ್ನು ಹಂಚಿಕೊಂಡು, ಮಾಹಿತಿ ನೀಡುವಂತೆ ಜನಸಾಮಾನ್ಯರಿಗೆ ಮನವಿ ಮಾಡಿದ್ದಾರೆ.

ಪೊಲೀಸರು ಕ್ರಮ ಕೈಗೊಂಡಿದ್ದಾರೆ
ಕೊಡಿಗೇಹಳ್ಳಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಹುಡುಕಾಟ ಪ್ರಾರಂಭಿಸಿದ್ದಾರೆ. ಈ ಮಧ್ಯೆ, ಮೋಹಿತ್‌ ಪತ್ರದಲ್ಲಿ ಬರೆದಿರುವ ವಿಷಯವು ಗೂಢವಾದ ಧಾರ್ಮಿಕ ಮತ್ತು ತಾತ್ವಿಕ ಅರ್ಥ ಹೊಂದಿದ್ದು, ಅವನ ಆತ್ಮಸ್ಥಿತಿ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜನಸಾಮಾನ್ಯರು ಅಥವಾ ಮಾಧ್ಯಮಗಳು ಮೋಹಿತ್ ಬಗ್ಗೆ ಯಾವುದೇ ಮಾಹಿತಿಯನ್ನು ಪತ್ತೆಹಚ್ಚಿದಲ್ಲಿ ತಕ್ಷಣವೇ ಪೊಲೀಸರಿಗೆ ಅಥವಾ ಪೋಷಕರಿಗೆ ಸಂಪರ್ಕಿಸಲು ಕೇಳಿಕೊಳ್ಳಲಾಗಿದೆ

nazeer ahamad

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago