ಬೆಂಗಳೂರು ನಗರದ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿರುವ ಕುರಿತು ಆತಂಕಕಾರಿಯಾದ ಮಾಹಿತಿ ಬೆಳಕಿಗೆ ಬಂದಿದೆ. ರಾಜ್ಯcದಾದ್ಯಾಂತ ಪ್ರಮುಖ 40ಕ್ಕೂ ಹೆಚ್ಚು ಖಾಸಗಿ ಶಾಲೆಗಳ ಇಮೇಲ್ ವಿಳಾಸಗಳಿಗೆ ಶಂಕಾಸ್ಪದ ಸಂದೇಶಗಳು ಬರಲೆಂದು ವರದಿಯಾಗಿದೆ.

ಆರ್.ಆರ್ ನಗರ, ಕೆಂಗೇರಿ, ಬನಶಂಕರಿ, ಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿನ ಶಾಲೆಗಳಿಗೆ ಈ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಕೂಡಲೇ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿದ್ದಾರೆ. ಶಂಕಿತ ವಸ್ತುಗಳಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿ ಶಾಲಾ ಆಡಳಿತ ಮಂಡಳಿಗಳು ತಕ್ಷಣವೇ ಮಕ್ಕಳನ್ನು ಮನೆಗಳಿಗೆ ಕಳುಹಿಸುವ ಕ್ರಮ ಕೈಗೊಂಡಿವೆ. ಕೆಲವೆಡೆ ಪೋಷಕರಿಗೆ ಮಾಹಿತಿ ನೀಡಿ ತುರ್ತು ನಿರ್ವಹಣಾ ಕ್ರಮಗಳನ್ನೂ ಜಾರಿಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಇದೇ ರೀತಿಯ ಬಾಂಬ್ ಬೆದರಿಕೆ ಪ್ರಕರಣಗಳು ಹಿಂದೆಯೂ ನಡೆದಿದೆ. ಕಳೆದ ವರ್ಷವೂ ಇಂತಹ ಬೆದರಿಕೆಗಳಿಂದ ಕೆಲ ಶಾಲೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಬೆಳವಣಿಗೆಯು ತೀವ್ರ ಗಂಭೀರತೆ ಹೊಂದಿರುವುದರಿಂದ, ಸೈಬರ್ ಕ್ರೈಂ ವಿಭಾಗದ ಸಹಕಾರದಿಂದ ಈಮೇಲ್‌ಗಳ ಮೂಲವನ್ನು ಪತ್ತೆಹಚ್ಚುವ ಪ್ರಯತ್ನಗಳು ಜೋರಾಗಿವೆ.

ನಗರದ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಆತಂಕಪಡದಂತೆ ಮನವಿ ಮಾಡಿದ್ದಾರೆ. “ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಇದು ಕಿಡಿಗೇಡಿಗಳ ಕೃತ್ಯವಾಗಿರುವ ಸಾಧ್ಯತೆ ಇದೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಬಹಿರಂಗಗೊಳಿಸಲಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ.

ಹೀಗಾಗಿ, ಈ ಬೆದರಿಕೆಗಳು ವಾಸ್ತವವೋ ಅಥವಾ ಕೇವಲ ಭಯ ಹುಟ್ಟಿಸುವ ನಕಲಿ ತಂತ್ರವೋ ಎಂಬುದನ್ನು ತಿಳಿದುಕೊಳ್ಳಲು ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.

Related News

error: Content is protected !!