ಲಂಡನ್: ಲಂಡನ್‌ನ ಲುಟನ್ ವಿಮಾನ ನಿಲ್ದಾಣದಿಂದ ಗ್ಲ್ಯಾಸ್ಗೋಗೆ ಹೊರಟಿದ್ದ ಈಜಿಜೆಟ್ ವಿಮಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಪ್ರಯಾಣಿಕನೊಬ್ಬ ‘ವಿಮಾನದಲ್ಲಿ ಬಾಂಬ್ ಇದೆ’ ಎಂದು ಘೋಷಣೆ ಕೂಗಿ ದೌರ್ಜನ್ಯ ಮೆರೆದಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

41 ವರ್ಷದ ಈ ವ್ಯಕ್ತಿ ವಿಮಾನದಲ್ಲಿ ಕುಳಿತುಕೊಂಡು “ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್” ಎಂದು ಘೋಷಿಸಿ ನಂತರ “ನಾನು ವಿಮಾನಕ್ಕೆ ಬಾಂಬ್ ಹಾಕಿದ್ದೇನೆ, ಅಮೆರಿಕಕ್ಕೆ ಸಾವು, ಟ್ರಂಪ್‌ಗೆ ಸಾವು” ಎಂದು ಕೂಗಿ ಪ್ಯಾಸೆಂಜರ್‌ಗಳ ನಡುವೆ ಭೀತಿಯನ್ನು ಮೂಡಿಸಿದ್ದಾನೆ. ಈ ಬೆದರಿಕೆ ಬೆಳಕಿಗೆ ಬಂದ ತಕ್ಷಣ ಸಿಬ್ಬಂದಿ ತಕ್ಷಣವೇ ಭದ್ರತಾ ಕ್ರಮಗಳನ್ನು ಕೈಗೊಂಡರು.

ವಿಮಾನ ಗ್ಲ್ಯಾಸ್ಗೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ನಂತರ, ಸನ್ನದ್ದಾದ ಪೊಲೀಸ್ ಪಡೆ ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದರು. ಆತನ ವಿರುದ್ಧ ಕಠಿಣ ತನಿಖೆ ಪ್ರಾರಂಭಿಸಲಾಗಿದ್ದು, ಈ ಬೆದರಿಕೆಗೆ ನಿಖರ ಕಾರಣವೇನು ಎಂಬುದನ್ನು ತಿಳಿದುಕೊಳ್ಳುವ ಕೆಲಸ ನಡೆದಿದೆ.

ವಿಮಾನದಲ್ಲಿದ್ದ ಇತರ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಈ ವ್ಯಕ್ತಿಯ ಕಿರುಚಾಟ ಮತ್ತು ಅಶಾಂತಿ ಸ್ಪಷ್ಟವಾಗಿ ಕಾಣಸಿಗುತ್ತಿದೆ.

ಸ್ಥಳೀಯ ಪೊಲೀಸರು ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ್ದು, “41 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇತನ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಸಾರ್ವಜನಿಕರು ಆತಂಕಪಡಬೇಕಾಗಿಲ್ಲ. ಸುರಕ್ಷತೆಗೆ ಯಾವುದೇ ತೊಂದರೆಯಿಲ್ಲ,” ಎಂದು ತಿಳಿಸಿದ್ದಾರೆ.

error: Content is protected !!