ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ ಹುಸ್ಕೂರು ಶಿರಮಳ್ಳಿ ರಸ್ತೆಯಲ್ಲಿ ನಡೆದಿದೆ. ಅಪಘಾತಲ್ಲಿ ಹುಸ್ಕೂರು ಗ್ರಾಮದ ನಿವಾಸಿ ದರ್ಶನ್ (15) ಎಂಬಾತನೆ ಮೃತಪಟ್ಟಿರುವ ದುರ್ದೈವಿ. ಬೈಕ್ ನಲ್ಲಿ ಬರುವಾಗ ಎದುರು ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ ತೀವ್ರ ಗಾಯಗೊಂಡ ಪುನೀತ್ ನನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲಿಸಿಕೊಂಡಿರುವ ಹುಲ್ಲಹಳ್ಳಿ ಪೊಲೀಸರು ಟಿಪ್ಪರ್ ಮತ್ತು ಬೈಕ್ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವ ಶೆಟ್ಟಿ ಪತ್ರಿಕೆಯೊಂದಿಗೆ ಮಾತನಾಡಿ ಗುಂಡ್ಲುಪೇಟೆ ತಾಲೂಕು ಹಿರಿ ಕಾಟಿಯಿಂದ ದೊಡ್ಡ ದೊಡ್ಡ ಟಿಪ್ಪರ್ ಗಳು ಎಂ ಸ್ಯಾಂಡ್ ತುಂಬಿಕೊಂಡು ಅಜಾಗರೂ ಕತೆಯಿಂದ ಸಂಚರಿಸುತ್ತಿವೆ. ಅಲ್ಲದೆ ಇದೇ ಮಾರ್ಗದಲ್ಲಿ ಶಿರಮಳ್ಳಿ ಬಳಿ ಕಬಿನಿ ಬಲದಂಡೆ ನಾಲೆಯ ಸೇತುವೆ ಸಹ ಶಿಥಿಲ ಗೊಂಡಿದ್ದು ಇದು ಕೂಡ ಅಪಘಾತಕ್ಕೆ ಕಾರಣವಾಗುತ್ತಿದೆ ಹಾಗಾಗಿ ಸಂಬಂಧಪಟ್ಟವರು ಹಾಗೂ ಪೊಲೀಸ್ ಇಲಾಖೆ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವರದಿ: ಮೋಹನ್

Related News

error: Content is protected !!