ಭೋಪಾಲ್ (ಮಧ್ಯಪ್ರದೇಶ), ಜುಲೈ 10: ಮಧ್ಯಪ್ರದೇಶದ ರಾಜಧಾನಿ ಭೋಪಾಲಿನ ಬರ್ಖೇಡಾ ಪಠಾಣಿ ಪ್ರದೇಶದಲ್ಲಿ ಒಂದು ಭೀಕರ ಘಟನೆ ನಡೆದಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪಾರ್ಕ್‌ನಲ್ಲಿ ಯುವತಿಯೊಬ್ಬಳೊಂದಿಗೆ ಕುಳಿತಿದ್ದ ಕಾರಣಕ್ಕೆ ನಡೆದ ವಾಗ್ವಾದವು ಕೊನೆಗೆ ಹತ್ಯೆಯ ರೂಪ ಪಡೆದುಕೊಂಡಿದೆ. ಈ ಸಂಘರ್ಷದಲ್ಲಿ ಶ್ಯಾಮ್ ಮೋರೆ (ವಯಸ್ಸು: 25) ಎಂಬ ಯುವಕ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಶ್ಯಾಮ್ ತನ್ನ ಸ್ನೇಹಿತರು ಇಬ್ಬರೊಂದಿಗೆ ಪಾರ್ಕ್‌ಗೆ ತೆರಳಿದ್ದ. ಅಲ್ಲಿಗೆ ಬಂದಾಗ ಫೈಜಾನ್ ಬೇಗ್ ಎಂಬಾತನು ಹಿಂದೂ ಯುವತಿಯೊಂದಿಗಿದ್ದು, ಆಕೆಯ ಭುಜದ ಮೇಲೆ ಕೈ ಇಟ್ಟಿರುವ ದೃಶ್ಯ ಶ್ಯಾಮ್ ಅವರ ಗಮನಕ್ಕೆ ಬಂದಿತು. ಈ ವಿಚಾರವನ್ನು ಪ್ರಶ್ನಿಸಿದ ಶ್ಯಾಮ್, “ಹಿಂದೂ ಯುವತಿಯೊಂದಿಗೆ ಏಕೆ ಕುಳಿತಿರುವೆ?” ಎಂಬ ಪ್ರಶ್ನೆ ಎಸೆದ ವೇಳೆ, ಫೈಜಾನ್ ಕೋಪಗೊಂಡು ಮಾತಿನ ಚಕಮಕಿ ಆರಂಭಿಸಿದ.
ವಿವಾದ ಉಲ್ಬಣಗೊಂಡಾಗ ಶ್ಯಾಮ್ ‘ಲವ್ ಜಿಹಾದ್’ ಆರೋಪ ಮಾಡಿದ್ದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ಈ ನಡುವೆ, ಫೈಜಾನ್ ಜೊತೆಗೆ ಇದ್ದ ಯುವತಿಯು ಶ್ಯಾಮ್ ಮುಖಕ್ಕೆ ಹೊಡೆದು, ಘರ್ಷಣೆಗೆ ಮತ್ತಷ್ಟು ತೆರೆ ನೀಡಿದಳು. ಬಳಿಕ, ಫೈಜಾನ್ ತನ್ನ ಜೊತೆಗೆ ಇತ್ತಿದ್ದ ಚಾಕುವಿನಿಂದ ಶ್ಯಾಮ್‌ನ ಮೇಲೆ ದಾಳಿ ಮಾಡಿದ್ದಾನೆ.
ಹಲ್ಲೆ ತಡೆಯಲು ಮುಂದೆ ಬಂದ ಶ್ಯಾಮ್‌ನ ಇಬ್ಬರು ಸ್ನೇಹಿತರೂ ಚಾಕು ಇರಿತಿಗೆ ಗುರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ಮೂರುಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶ್ಯಾಮ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಉಳಿದ ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸರು ಈ ಘಟನೆಯ ಸಂಬಂಧ ಫೈಜಾನ್ ಬೇಗ್‌ನನ್ನು ಬಂಧಿಸಿದ್ದು, ಪ್ರೇಮಿಕೆಯ ಪಾತ್ರವನ್ನೂ ತನಿಖೆಗೆ ಒಳಪಡಿಸಿದ್ದಾರೆ. ಶ್ಯಾಮ್‌ಗೆ ಮೊದಲು ದಾಳಿಮಾಡಿದ್ದು ಆ ಯುವತಿಯಾಗಿರುವ ಹಿನ್ನೆಲೆಯಲ್ಲಿ, ಅವಳ ಭೂಮಿಕೆಯನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಪೊಲೀಸರು ಎಲ್ಲ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಭದ್ರತೆಗಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…