ಭಟ್ಕಳ: ರಸ್ತೆಯಲ್ಲಿ ದರೋಡೆಮಾಡುವ ‘ಗರುಡಾ ಗ್ಯಾಂಗ್’ಗೆ ಭಟ್ಕಳ ಪೊಲೀಸರು ತೀವ್ರ ಪಾಠ ಕಲಿಸಿದ್ದಾರೆ. ಬೆಳಗಿನ ಜಾವ ನಡೆಸಿದ ತಾಂತ್ರಿಕ ಕಾರ್ಯಾಚರಣೆಯಲ್ಲಿ ಗ್ಯಾಂಗ್‌ನ ಕ್ಯಾಪ್ಟನ್ ಸೇರಿ ಮೂವರನ್ನು ಬಂಧಿಸಲಾಗಿದೆ, ಇನ್ನಿಬ್ಬರು ಪರಾರಿಯಾಗಿದ್ದಾರೆ.
ಮೇ 28ರ ನಸುಕಿನ 3 ಗಂಟೆ. ಭಟ್ಕಳದ ಸಾಗರ ರಸ್ತೆಯ ಬಿಲಾಲ್‌ಖಂಡ ಬಳಿ ಐವರು ಯುವಕರು ಮಂಕಿ ಟೋಪಿ ಹಾಕಿಕೊಂಡು ಕಾರಿನಲ್ಲಿ ಕಾವಲು ಹಿಡಿದಿದ್ದರು. ದರೋಡೆ ಸಂಚು ಸ್ಪಷ್ಟ. ಅವರ ಬಳಿ ಚಾಕು, ಕಾರಪುಡಿ, ಬೆಲ್ಟ್, ಮೊಬೈಲ್, ಹಣ ಎಲ್ಲವೂ ಸಿದ್ದ.
ಸಂದೇಹಕ್ಕೆ ಸ್ಥಳಕ್ಕೆ ಬಂದ ಪಿಎಸ್‌ಐ ರನ್ನಗೌಡ ಪಾಟೀಲ್ ಅವರನ್ನು ಕಂಡ ತಕ್ಷಣ ಗ್ಯಾಂಗ್ ಓಡಲು ಯತ್ನಿಸಿತು. ಇನೋವಾ ಕಾರು ಹಿಮ್ಮುಖವಾಗಿ ಓಡಿಸಲು ಯತ್ನಿಸಿದಾಗ ಗಟಾರಕ್ಕೆ ಬಿದ್ದಿತು. ಈ ದರ್ಬಾರದಲ್ಲಿ ಇಬ್ಬರು ಆರೋಪಿಗಳು – ಭಟ್ಕಳದ ಜಿಶಾನ್ ಮತ್ತು ನಬೀಲ್ ಪರಾರಿಯಾಗಿದರು.
ಮೂವರನ್ನು ಹಿಡಿಯಲು ಪಿಎಸ್‌ಐ ರನ್ನಗೌಡ ಪಾಟೀಲ್ ನೇತೃತ್ವದ ತಂಡ ನಿರಂತರ ಹೋರಾಟ ನಡೆಸಿತು. ಕೊನೆಗೆ ಮೂರು ಬೇಟೆ! ಬಂಧಿತರು: ಮಂಗಳೂರಿನ ಜಲೀಲ್ ಹುಸೈನ್ (11 ಅಪರಾಧ ಪ್ರಕರಣಗಳ ಆರೋಪಿ), ಭಟ್ಕಳದ ನಾಶೀರ್ ಹಕಿಂ (2 ಪ್ರಕರಣ), ಮತ್ತು ಒಬ್ಬ ಅಪ್ರಾಪ್ತ.
ಪೊಲೀಸರು ಕಾರು, 1500 ರೂ. ನಗದು, ಮೊಬೈಲ್, ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಪರಾರಿಯಾದವರಿಗಾಗಿ ವಿಶೇಷ ತಂಡ ರಚನೆಯಾಗಿದೆ. ಈ ಕಾರ್ಯಾಚರಣೆಗೆ ಎಸ್ಪಿ ಎಂ. ನಾರಾಯಣ, ಎಡ್ಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಮಹೇಶ್ ಎಂ.ಕೆ ಬೆನ್ನೆಲುಬಾಗಿ ನಿಂತಿದ್ದರು.
ವರದಿ: ಕುಮಾರ್ ನಾಯಕ್
ಮುಂಡಗೋಡ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಅಮೇರಿಕಾ ಉದ್ವಿಗ್ನತೆ (ಯುದ್ಧ) ಪರಿಣಾಮವಾಗಿ ಇಂಧನ ಕ್ಷೇತ್ರದಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯ…
ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…
ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…
ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…
ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…
ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…