ಬೆಳಗಾವಿ, ಜುಲೈ 8: ಬೆಸ್ಕಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನೊಬ್ಬ ವಿದ್ಯುತ್ ಆಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದ ಘೋರ ದುರಂತ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಇಂದು ನಡೆದಿದೆ.

ಮೃತ ವ್ಯಕ್ತಿಯನ್ನು ಮಾರುತಿ ಹವಲಿ (25) ಎಂದು ಗುರುತಿಸಲಾಗಿದ್ದು, ಅವರು ದುರಸ್ತಿ ಕಾರ್ಯಕ್ಕಾಗಿ ವಿದ್ಯುತ್ ಕಂಬ ಹತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಕೆಲಸದ ವೇಳೆಯಲ್ಲಿ ವಿದ್ಯುತ್ ಪ್ರವಹಿಸದೆ ಇರುವುದನ್ನು ಖಚಿತಪಡಿಸಬೇಕಾದ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ವಿದ್ಯುತ್ ತಗುಲುತ್ತಿದ್ದಂತೆ ಮಾರುತಿ ಸ್ಥಳದಲ್ಲೇ ಪ್ರಾಣ ಬಿಡಿದರು. ಹೆಚ್ಚು ಆಘಾತಕಾರಿ ಸಂಗತಿಯೆಂದರೆ ಮೃತದೇಹ ಸುಮಾರು ಮೂರು ಗಂಟೆಗಳ ಕಾಲ ಕಂಬದಲ್ಲೇ ನೇತಾಡಿಕೊಂಡಿತ್ತು. ಸ್ಥಳೀಯರು ಅಧಿಕಾರಿಗಳಿಗೆ ಅನೇಕ ಬಾರಿ ಮಾಹಿತಿ ನೀಡಿದರೂ, ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದ ಕಾರಣ ಜನತೆಯಲ್ಲಿ ಆಕ್ರೋಶ ಉಂಟಾಗಿದೆ.

ಸಮಯಕ್ಕೆ ಸ್ಪಂದಿಸದೆ, ಯುವ ಉದ್ಯೋಗಿಯ ಸಾವಿಗೆ ಕಾರಣವಾದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ತೀವ್ರ ಬೇಸರ ವ್ಯಕ್ತವಾಗಿದೆ. ದುರ್ಘಟನೆಯ ಬಳಿಕ ಸ್ಥಳೀಯರು ಘಟನಾ ಸ್ಥಳಕ್ಕೆ ಭೇಟಿ ನೀಡಿ ನ್ಯಾಯಕ್ಕೆ ಒತ್ತಾಯಿಸಿದರು.

ಈ ಘಟನೆ ವಿದ್ಯುತ್ ಇಲಾಖೆಯ ಸುರಕ್ಷತಾ ನಿಯಮಗಳ ಪಾಲನೆಯ ಅವಶ್ಯಕತೆ ಮತ್ತು ಸಿಬ್ಬಂದಿಯ ಜೀವದ ಹಕ್ಕಿನ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿದೆ.

error: Content is protected !!