ಬೆಂಗಳೂರು ನಗರದಲ್ಲಿ ಮತ್ತೊಂದು ಪತ್ನಿ ಹತ್ಯೆಯ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಶಾಪಿಂಗ್‌ಗೆ ಹೋಗಿದ್ದಂತೆಯೇ ಗಲಾಟೆಗೆ ಕಾರಣವಾಯಿತು ಎನ್ನಲಾದ ಪತಿ, ತನ್ನ ಪತ್ನಿಯನ್ನು ಕ್ರೂರವಾಗಿ ಹತ್ಯೆ ಮಾಡಿದ ದಾರುಣ ಪ್ರಕರಣ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹತ್ಯೆಯ ಮಹಿಳೆಯನ್ನು ಪದ್ಮಜಾ (29) ಎಂದು ಗುರುತಿಸಲಾಗಿದ್ದು, ಪತಿ ಹರೀಶ್ ಅವರೇ ಈ ಕೃತ್ಯ ಎಸಗಿದ್ದಾರೆ. ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ದಂಪತಿಗಳು, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ದಂಪತಿಗಳು ಇಬ್ಬರೂ ಇಂಜಿನಿಯರಿಂಗ್ ಪದವಿ ಪಡೆದಿದ್ದರೆನ್ನಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹರೀಶ್ ಕೆಲಸದಿಂದ ಬಿಡುವು ಪಡೆದು ಮನೆಯಲ್ಲಿಯೇ ಇದ್ದು, ಪತ್ನಿ ಪದ್ಮಜಾ ಮಾತ್ರ ಉದ್ಯೋಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ದಿನೇದಿನೆ ದಂಪತಿಗಳ ನಡುವೆ ಗಲಾಟೆಗಳು ನಡೆದುಕೊಂಡು ಬರುತ್ತಿದ್ದವು.

ಘಟನೆ ನಡೆಯದ ಹಿಂದೆ ಶಾಪಿಂಗ್ ಕಾರಣ ಎನ್ನಲಾಗಿದೆ. ಪದ್ಮಜಾ ಶಾಪಿಂಗ್‌ಗೆ ಹೋಗಿ ಬಂದ ಬಳಿಕ ಹರೀಶ್ ಅವರು ತೀವ್ರವಾಗಿ ವಾಗ್ವಾದಕ್ಕೆ ಇಳಿದಿದ್ದು, ಆಕ್ರೋಶದಿಂದ ಪತ್ನಿಯ ಕುತ್ತಿಗೆ ಹಿಸುಕಿ, ಬಳಿಕ ಕಾಲಿನಿಂದ ತುಳಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬೊಮ್ಮನಹಳ್ಳಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಹರೀಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ಬದುಕಿನಲ್ಲಿ ನಂಬಲಾಗದ ಸಾವು ಬರೆದಿದೆ.

Related News

error: Content is protected !!