Latest

ಬಂಗಾರಪೇಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ; 2 ಕೆಜಿ 735 ಗ್ರಾಂ ಗಾಂಜಾ – ಪೆಡ್ಲರ್ ವಶ.

ಬಂಗಾರಪೇಟೆ: ದಿನಾಂಕ 05.04.2025 ರಂದು ಮಧ್ಯ ರಾತ್ರಿ 12.30 ಗಂಟೆ ಸಮಯದಲ್ಲಿ ಹುದುಕುಳ ಗೇಟ್ ಬಳಿ ಗಲಾಟೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ಮಾಹಿತಿಯ ಮೇರೆಗೆ ಇ. ಆರ್. ಎಸ್. ಸಿಬ್ಬಂದಿ 3 ಜನರನ್ನು ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸಿ ಠಾಣಾ ಪಿ.ಐ ಶದಯಾನಂದ್.ಆರ್ ರವರು ಕೂಲಂಕೂಷ ವಿಚಾರಣೆ ನಡೆಸಿ ಈ ವ್ಯಕ್ತಿಗಳು ಗಾಂಜಾ ಮಾರಾಟಕ್ಕೆ ಬಂದಿರುವುದಾಗಿ ಹುದುಕುಳ ಸಮೀಪ ಆಟೋ ರಿಕ್ಷಾದಲ್ಲಿ ಗಾಂಜಾ ಇಟ್ಟಿರುವುದನ್ನು ತಿಳಿಸಿದಾಗ ಈ ವಿಷಯವನ್ನು ಮೇಲಾಧಿಕಾರಿಗಳಾದ ಎಸ್.ಪಿ. ಶಾಂತರಾಜು ಕೆ.ಎಂ ಐ.ಪಿ.ಎಸ್ ಮತ್ತು ಡಿವೈ.ಎಸ್.ಪಿ. ಪಾಂಡುರಂಗ ಕೆ.ಎಸ್.ಪಿ.ಎಸ್ ಕೆಜಿಎಫ್ ರವರ ಗಮನಕ್ಕೆ ತಂದಾಗ ಮೇಲಾಧಿಕಾರಗಳ ಆದೇಶದ ಮೇರೆಗೆ ಪತ್ರಾಂಕಿತ ಅಧಿಕಾರಿ ಯುವರಾಜ್ ಮತ್ತು ಸರ್ಕಾರಿ ಸಾಕ್ಷಿದಾರರೊಂದಿಗೆ ದಾಳಿ ನಡೆಸಿದಾಗ ಆಟೋ ಸಂಖ್ಯೆ ಕೆಎ.03.ಎಎಂ.6052 ರಲ್ಲಿ 2 ಕೆಜಿ 735 ಗ್ರಾಂ ಗಾಂಜಾ ಮಾರಾಟಕ್ಕಾಗಿ ಇಟ್ಟುಕೊಂಡಿರುವುದು ಧೃಡಪಟ್ಟಿದ್ದು ಪಿ.ಐ ದಯಾನಂದ್.ಆರ್ ರವರು ಅಮಾನತ್ತು ಪಡಿಸಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಆರೋಪಿತರು ಬೆಂಗಳೂರು ವಾಸಿಗಳೆಂದು ಮತ್ತೊಬ್ಬ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿರುವುದಾಗಿ ಪೊಲೀಸರು ಆತನ ಪತ್ತೆ ಕಾರ್ಯವನ್ನು ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಬಂಗಾರಪೇಟೆ ಪಿ.ಐ ದಯಾನಂದ್.ಆರ್, ರಾಜಣ್ಣ ಪಿ.ಎಸ್.ಐ, ಪ್ರಕಾಶ್ ನರಸಿಂಗ್ ಪಿ.ಎಸ್.ಐ, ರಮೇಶ್ ಎ.ಎಸ್.ಐ ಮತ್ತು ಸಿಬ್ಬಂದಿ ಯವರಾದ ನಾಗೇಶ್, ಚಲಪತಿ, ವೆಂಕಟೇಶ್, ಮಧುಕುಮಾರ್ ಮುನೇಂದ್ರ, ಶಿವರಾಜು ರವರ ಕಾರ್ಯವನ್ನು ಮೆಚ್ಚಿ ಶಾಂತರಾಜು ಕೆ.ಎಂ ಪೊಲೀಸ್ ಅಧೀಕ್ಷಕರು ಕೆ.ಜಿ.ಎಪ್ ರವರು ಪ್ರಶಂಸಿಸಿದ್ದಾರೆ. ವರದಿ: ರೋಶನ್ ಜಮೀರ್

nazeer ahamad

Recent Posts

ಮನೆ ಬಳಕೆಗೆ ಸಿಗದ ಗೃಹಬಳಕೆಯ ಸಿಲಿಂಡರ್‌ಗಳು ಹೋಟೆಲ್‌ಗಳಲ್ಲಿ , ಅಧಿಕಾರಿಗಳ ನಿರ್ಲಕ್ಷ್ಯ

ಮುಂಡಗೋಡ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಅಮೇರಿಕಾ ಉದ್ವಿಗ್ನತೆ (ಯುದ್ಧ) ಪರಿಣಾಮವಾಗಿ ಇಂಧನ ಕ್ಷೇತ್ರದಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯ…

12 minutes ago

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳು: ಆಸಕ್ತರಿಗೆ ಉದ್ಯೋಗದ ಸುವರ್ಣಾವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…

6 hours ago

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

6 hours ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

6 hours ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

6 hours ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

7 hours ago