Latest

ಬಾಗಪ್ಪ ಹರಿಜನ್ ಹತ್ಯೆ: ಸೇಡು, ಅನುಮಾನ ಮತ್ತು ನಿಗೂಢ ತಿರುವು!

ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದೀತೀರ ಮತ್ತೊಮ್ಮೆ ರಕ್ತಸಿಕ್ತವಾಗಿದ್ದು, ಹಂತಕ ಬಾಗಪ್ಪ ಹರಿಜನ್ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು ಬಂದಿದೆ. ಈ ಹತ್ಯೆ ಸಂಬಂಧ ಬಾಗಪ್ಪನ ಪುತ್ರಿ ಗಂಗೂಬಾಯಿ, ಪಿಂಟು ಅಲಿಯಾಸ್ ಪ್ರಕಾಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.

ಪಿಂಟು ವಾಟ್ಸಪ್ ಸ್ಟೇಟಸ್: ಕೊಲೆಗೆ ಕನ್ನಡಿ?

ಬಾಗಪ್ಪ ಹತ್ಯೆಯಾದ ಕೆಲವೇ ಸಮಯದ ನಂತರ, ಪಿಂಟು ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ “ಅಣ್ಣ, ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆಯುತ್ತಿದ್ದ. ಈ ಸ್ಟೇಟಸ್ ಅನುಮಾನಕ್ಕೆ ಎಡೆಮಾಡಿಕೊಡಿದ್ದು, ಇದರಿಂದಲೇ ಪಿಂಟುವಿನ ವಿರುದ್ಧ ಗಂಭೀರ ಆರೋಪಗಳು ಹೊರಡಲು ಕಾರಣವಾಯಿತು.

ಬಾಗಪ್ಪ – ವಕೀಲ ರವಿ – ಪಿಂಟು: ಸೇಡು ತೀರಿಸುವ ಕುತಂತ್ರ?

ಪಿಂಟು ಅಗರಖೇಡ ಬೇರೆ ಯಾರೂ ಅಲ್ಲ, ಕಳೆದ ವರ್ಷ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ವಕೀಲ ರವಿ ಅಗರಖೇಡ್‌ನ ಸಹೋದರ.

ರವಿ ಅಗರಖೇಡ್ ಮತ್ತು ಬಾಗಪ್ಪ ಹರಿಜನ್ ದೂರದ ಸಂಬಂಧಿಕರು ಎಂದು ಹೇಳಲಾಗಿದ್ದು, ಕಳೆದ ವರ್ಷ ವಿಜಯಪುರದಲ್ಲಿ ನಡೆದ ರವಿ ಅವರ ಭೀಕರ ಅಪಘಾತದ ಬಳಿಕ ಪಿಂಟು, ಬಾಗಪ್ಪನ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಕೀಲ ರವಿ ಅಪಘಾತ:

ವಿಜಯಪುರ ಕೋರ್ಟ್‌ನಿಂದ ವಾಪಸ್ಸಾಗುವ ವೇಳೆ ರವಿ ಸ್ಕೂಟಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದು, ಅವರನ್ನು ಸುಮಾರು 2 ಕಿ.ಮೀ.ವರೆಗೆ ಎಳೆದುಕೊಂಡು ಹೋದ ಭೀಕರ ಘಟನೆ ನಡೆದಿತ್ತು.

ಈ ಘಟನೆ ಪಿಂಟುವಿಗೆ ಶಾಕ್ ನೀಡಿತ್ತು, ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಹೋದರನ ಹತ್ಯೆಗೆ ನ್ಯಾಯ ಬೇಕು ಎಂದು ಪಿಂಟು ಆಗಾಗ್ ಹೇಳುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಹತ್ಯೆ ಪ್ರಕರಣ ತೀವ್ರ ತನಿಖೆ:

ಬಾಗಪ್ಪನ ಮಗಳು ಗಂಗೂಬಾಯಿ, ಪಿಂಟು ಮೇಲೆ ನೇರವಾಗಿ ಹತ್ಯೆ ಆರೋಪ ಮಾಡಿ ದೂರು ದಾಖಲಿಸಿದ್ದಾಳೆ. ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಾಟ್ಸಪ್ ಸ್ಟೇಟಸ್ ಮತ್ತು ಹತ್ಯೆಗೆ ಸಂಬಂಧಿಸಿದ ಪತ್ತೆದಾರಿ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ಹತ್ಯೆ ಪ್ರಕರಣದ ಸತ್ಯ ಹೊರಬರುವ ತನಕ ಭೀಮಾ ತೀರದ ಜನತೆ ಆತಂಕದಲ್ಲಿ ಮುಳುಗಿದ್ದಾರೆ. ಪಿಂಟು ನಿಜವಾಗಲೂ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದನೇ? ಅಥವಾ ಇದು ಕೇವಲ ಅನುಮಾನವೇ? ಈ ವಿಷಯದಲ್ಲಿ ಮತ್ತಷ್ಟು ಬೆಳವಣಿಗೆಗಳಿಗಾಗಿ ಕಾದು ನೋಡಬೇಕಾಗಿದೆ.

nazeer ahamad

Recent Posts

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

13 minutes ago

ಗೌರಿಬಿದನೂರಿನಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಅಕ್ರಮ ಬಳಕೆ ವಿರುದ್ಧ ದಾಳಿ – 36 ಸಿಲಿಂಡರ್‌ಗಳು ಜಪ್ತಿ

ಗೌರಿಬಿದನೂರು: ನಗರದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ, ತಹಸೀಲ್ದಾರ್ ಅರವಿಂದ್…

33 minutes ago

ರೀಲ್ಸ್ ಹುಚ್ಚಾಟದ ದುರಂತ: ಹುಬ್ಬಳ್ಳಿಯಲ್ಲಿ ಬಾಲಕ ಸಾವು – ಇಬ್ಬರ ಬಂಧನ

ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡುವ ಹುಚ್ಚಾಟದಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ 15 ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು…

5 hours ago

ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಮತ್ತೊಂದು ಆರೋಪ: 2018 ರಿಂದ 2023 ರವರೆಗೆ ಮುಖ್ಯ ಶಿಕ್ಷಕಿಯ ಮೇಲೆ ಲೈಂಗಿಕ ದೌರ್ಜನ್ಯ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್…

18 hours ago

ರಾಜ್ಯದಲ್ಲಿ ಪಾರ್ಲೆ-ಜಿ ಉತ್ಪಾದನೆ ಸ್ಥಗಿತ, ಬಿಸ್ಕೆಟ್ ಅಭಾವದ ಆತಂಕ

Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್‌ಗಳ…

19 hours ago

ನವಲಗುಂದದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಮುಖ್ಯಶಿಕ್ಷಕ ಬಂಧನ

ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…

1 day ago