ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಸುಬ್ರಮಣ್ಯನಗರ 9ನೇ ಅಡ್ಡರಸ್ತೆಯಲ್ಲಿ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆಡಿಯೋ ಕ್ಲಿಪ್‌ನ್ನು ವೈರಲ್ ಮಾಡಿದ ದ್ವೇಷಕ್ಕೆ, ಮೂವರು ಸ್ನೇಹಿತರು ಸೇರಿ ಸ್ಥಳೀಯ ವ್ಯಕ್ತಿಯನ್ನು ಮನೆಗೆ ನುಗ್ಗಿ ಹತ್ಯೆಗೈದ ಘಟನೆ ಆಗಸ್ಟ್ 12ರ ರಾತ್ರಿ 11:30ರ ಸುಮಾರಿಗೆ ನಡೆದಿದೆ.
ಹತ್ಯೆಯಾದವರು ಸ್ಥಳೀಯ ನಿವಾಸಿ ವಿನಯ್ ದೇವಾಡಿಗ (40). ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಅವರು, ಮಂಗಳವಾರ ವೈಯಕ್ತಿಕ ಕೆಲಸಕ್ಕಾಗಿ ಉಡುಪಿಗೆ ತೆರಳಿ, ಸಂಜೆ ಮನೆಗೆ ಮರಳಿ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಮಧ್ಯರಾತ್ರಿ, ಬ್ರಹ್ಮಾವರ ಕೊಕ್ಕರ್ಣೆಯ ಗಾಂಧಿನಗರ ನಿವಾಸಿಗಳು ಅಜಿತ್ (28), ಅಕ್ಷೇಂದ್ರ (34) ಹಾಗೂ ಕೊಕ್ಕರ್ಣೆ ಬೆನಗಲ್ ನಿವಾಸಿ ಪ್ರದೀಪ್ ಆಚಾರ್ಯ ಮನೆಗೆ ನುಗ್ಗಿ, ಎಲ್ಲೆಡೆ ಹುಡುಕಾಟ ನಡೆಸಿ ವಿನಯ್ ಇದ್ದ ಕೋಣೆಯವರೆಗೆ ಬಂದರು. ಶಬ್ದದಿಂದ ಎಚ್ಚರಗೊಂಡ ವಿನಯ್‌ನ್ನು ಅವರು ಹಿಡಿದು, ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದರು. ಅಜಿತ್ ವಿನಯ್‌ನ್ನು ಬಿಗಿಯಾಗಿ ಹಿಡಿದಿದ್ದರೆ, ಅಕ್ಷೇಂದ್ರ ಮತ್ತು ಪ್ರದೀಪ್ ಮಚ್ಚು ಹಾಗೂ ಚಾಕುವಿನಿಂದ ತಲೆಗೆ ಭೀಕರವಾಗಿ ಹಲ್ಲೆ ನಡೆಸಿದರು. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ವಿನಯ್ ಸಾವನ್ನಪ್ಪಿದರು.
ಘಟನೆಯ ನಂತರ ಆರೋಪಿಗಳು ಸ್ಕೂಟರ್‌ನಲ್ಲಿ ಸ್ಥಳದಿಂದ ಪರಾರಿಯಾದರೂ, ಬಳಿಕ ಉಡುಪಿ ನಗರ ಪೊಲೀಸ್ ಠಾಣೆಗೆ ಶರಣಾಗಿ ಬಂಧಿತರಾದರು.
ಪೊಲೀಸ್ ಮೂಲಗಳ ಪ್ರಕಾರ, ಅಕ್ಷೇಂದ್ರನಿಗೆ ಜೀವನ್ ಎಂಬಾತನು ಬೈದ ಆಡಿಯೋವನ್ನು ವಿನಯ್ ಇತರರಿಗೆ ಶೇರ್ ಮಾಡಿದ್ದು, ಅದು ವೈರಲ್ ಆದ ಕಾರಣದಿಂದಲೇ ಈ ಹತ್ಯೆ ನಡೆದಿದೆ. ಪ್ರಕರಣದ ತನಿಖೆ ಮುಂದುವರಿಯುತ್ತಿದೆ.
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…
ಚಿತ್ರದುರ್ಗ: ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮದ ಹತ್ತಿರ ನಡೆದ ವಿಶಿಷ್ಟ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಾಧುಗಳ ವೇಷ ತಾಳಿ ರೈತರ…
ಭೋಪಾಲ್ : ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ಹದಿಹರೆಯದ ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ನರಸಿಂಹಪುರದಲ್ಲಿ…