ಉತ್ತರ ಕನ್ನಡ/ಹಳಿಯಾಳ: ಸ್ವತ್ತಿನ ಅವರಾಧ ಪ್ರಕರಣಗಳು ಹಾಗೂ ಅಕ್ರಮ ಬಡ್ಡಿ ವ್ಯವಹಾರ. ಗ್ಯಾನ್ಸಿಂಗ್ ಇತ್ಯಾದಿ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಹಾಗೂ ದೂರುಗಳು ಬಂದಿದ್ದು, ಅದರಂತೆ ದಿನಾಂಕ: 05-02-2025 ರಂದು ಪೋಲೀಸ್ ಉಪಾಧಿಕ್ಷಕರು. ದಾಂಡೇಲಿ ರವರ ನೇತೃತ್ವದಲ್ಲಿ ಪೊಲೀಸ್ ತಂಡವನ್ನು ರಚನೆ ಮಾಡಿ, ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.
ಅದರಂತೆ ಹಳಿಯಾಳ ಪೊಲೀಸ್ ವ್ಯಾಪ್ತಿಯ, ಸುಮಾರು 7 ಕಡೆ ಬಡ್ಡಿ ವ್ಯವಹಾರ ಮಾಡಿ ಬಂದ ಹಣದಿಂದ ಜೂಜಾಟ ಆಡುತ್ತಿರುವ ಬಗ್ಗೆ ಖಚಿತವಾದ ಮಾಹಿತಿಯ ಮೇರೆಗೆ ಮನೆಯನ್ನು ಸರ್ಚ ಮಾಡಲು ಸರ್ಚ ವಾರೆಂಟ್ ಅನುಮತಿ ಆದೇಶವನ್ನು ಪಡೆದು. ಬಡ್ಡಿ ವ್ಯವಹಾರ ಮಾಡಿ ಬಂದ ಹಣದಿಂದ ಜೂಜಾಡುತ್ತಿದ್ದ 1) ಶ್ರೀ ಚಂದ್ರಕಾಂತ ನಾರಾಯಣ ಗೊಂದಆ ಸಾ।। ಕಿಲ್ಲಾ, ಹಳಿಯಾಳ. 2) ಶ್ರೀ ಪ್ರಕಾಶ ಶಿವಾಜಿ ಗಾಂಜಾಳಿ ಸಾ॥ ಗುತ್ತಿಗೇರಿ ಗಲ್ಲ, ಹಳಿಯಾಳ, 3) ಶ್ರೀ ವಿಜಯ ನೀಲಕಂಠ ಬೊಬಾಟಿ ಸಾ॥ ಕಿಲ್ಲಾ, ಹಳಿಯಾಳ, 4) ಶ್ರೀ ರಾಕೇಶ ದಿನಕರ ವಾಲೇಕರ ಸಾ।। ಚೌಹಾಣ ಪ್ಲಾಟ್, ಹಳಿಯಾಳ, 5) ಶ್ರೀ ಪವನ ಜೀವನ ಹಳ್ಳೂರ ಸಾ। ಕಾರ್ಮೆಲ್ ಕ್ರಾಸ್, ಹಳಿಯಾಳ, 6) ಶ್ರೀ ಸಂತೋಷ ಸಿದ್ದಪ್ಪ ನಾಯ್ಕ ಸಾ|| ಚಲುವಾದಿ ಗಲ್ಲಿ, ಹಳಿಯಾಳ, 7) ಶ್ರೀ ಶುಭಂ ತಂದೆ ರಾಮನಾಥ ನಾಯ್ಕ ಸಾ|| ಚೌಹಾಣ ಪ್ಲಾಟ್, ಹಳಿಯಾಳ ರವರ ವಾಸದ ಸ್ಥಳಗಳಲ್ಲಿ ದಾಳಿ ನಡೆಸಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಭದ್ರತಾ ಕಾಯ್ದೆಯಡಿಯಲ್ಲಿ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ.
ದಿನಾಂಕ: 05-02-2025 ರಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಬಡ್ಡಿ ವ್ಯವಹಾರವನ್ನು ಹತ್ತಿಕ್ಕಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ವರದಿ: ಮಂಜುನಾಥ್ ಎಫ್ ಹೆಚ್
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…