ಮೈಸೂರು ನಗರ, ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗಂಭೀರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೈಸೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಬಂಧಿಸಲು ಪೊಲೀಸರಿಗೆ ಯಶಸ್ಸು ಲಭಿಸಿದೆ.
ಪ್ರಕರಣದ ಸಂಕ್ಷಿಪ್ತ ವಿವರ:
ಪಿರ್ಯಾದಿದಾರರಾದ ಎಂ.ಎನ್. ಗಿರೀಶ್ ಬಿನ್ ನಾಗಶೆಟ್ಟಿ (44 ವರ್ಷ), ಎಲೆಕ್ಟ್ರಿಕಲ್ ಕೆಲಸಗಾರರು, ಎಸ್.ವಿ.ಪಿ. ನಗರ, ಮೈಸೂರು, ದಿನಾಂಕ: 13/03/2025 ರಂದು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, “ರಾತ್ರಿ ಸುಮಾರು 9-00 ಗಂಟೆಗೆ ನಾಲ್ಕು ಮಂದಿ ದರೋಡೆಕೋರರು, ಎರಡು ಬೈಕ್‌ಗಳಲ್ಲಿ ಬಂದು, ಲಾಂಗ್, ಮಚ್ಚು, ಡ್ರಾಗನ್, ರಾಡುಗಳನ್ನು ತೋರಿಸಿ, ನನ್ನ ಹೆಂಡತಿ ಮತ್ತು ಮಕ್ಕಳಿಗೆ ಬೆದರಿಕೆ ಮಾಡಿ, ಮಚ್ಚುಗಳಿಂದ ಗಾಯಗೊಳಿಸಿ, ನನ್ನ 23 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ. ಈ ದೂರಿನ ಮೇಲೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊ.ನಂ: 23/2025, ಕಲಂ: 309(6), 329(4), 310(2) ಬಿ.ಎನ್.ಎಸ್ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಯಿತು.
ಪೊಲೀಸರಿಂದ ಕೈಗೊಳ್ಳಲಾದ ಕಾರ್ಯಾಚರಣೆ:
ಮಾನ್ಯ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಐ.ಪಿ.ಎಸ್. ರವರ ನಿರ್ದೇಶನದಲ್ಲಿ, ಉಪ ಪೊಲೀಸ್ ಆಯುಕ್ತರು (ಕೇಂದ್ರಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗ) ಶ್ರೀಮತಿ ಜಾಹ್ನವಿ.ಎಸ್., ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ದೇವರಾಜ ವಿಭಾಗದ ಎ.ಸಿ.ಪಿ. ಶ್ರೀ ರಾಜೇಂದ್ರ ನೇತೃತ್ವದಲ್ಲಿ, ಆಲನಹಳ್ಳಿ ಠಾಣೆಯ ಪಿ.ಐ. ಶ್ರೀಮತಿ ಸ್ವರ್ಣ.ಜಿ.ಎಸ್., ಎಸ್.ಐ. ಗಂಗಾಧರ್ ಹಾಗೂ ಸಿಬ್ಬಂದಿಗಳಾದ ಚೇತನ, ಕಿರಣ್ ರಾಥೋಡ್, ಲಿಂಗರಾಜಪ್ಪ, ಮಂಜುನಾಥ್ ಗದಗೈಗೋಳ, ಮಲ್ಲಿಕಾರ್ಜುನ, ಸಂತೋಷ್ ಕುಮಾರ್, ಶಾಜಿಯಾ ಬಾನು, ಅಭಿಷೇಕ್ ಮತ್ತು ಆಟೋಮಿಷನ್ ಸೆಂಟರ್‌ನ ಎಸ್.ಐ. ಚಂದ್ರಶೇಖರ್ ರಾವ್, ಸಿಬ್ಬಂದಿಗಳಾದ ಪ್ರದೀಪ್, ಶಿವಕುಮಾರ್ ಹಾಗೂ ಸಿ.ಡಿ.ಆರ್ ವಿಭಾಗದ ಕುಮಾರ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ಬಂಧಿತ ಆರೋಪಿಗಳು:
1. ಯೋಗಾನಂದ @ ಯೋಗ @ ಆನಂದ @ ದಡಿಯಾ @ ಉಪೇಂದ್ರ ಬಿನ್ ಕೃಷ್ಣಗೌಡ (34 ವರ್ಷ), ಆಟೋ ಚಾಲಕ, ಮಾರಸಿಂಗನಹಳ್ಳಿ, ಮದ್ದೂರು, ಮಂಡ್ಯ ಜಿಲ್ಲೆ.
2. ಅಭಿಷೇಕ್ @ ಬ್ಯಾಡ್ರಾಯನಪುರ ಅಭಿ, ಆಟೋ ಚಾಲಕ, ಬ್ಯಾಟರಾಯನಪುರ, ಮೈಸೂರು ರಸ್ತೆ, ಬೆಂಗಳೂರು.
3. ಮನು ಕುಮಾರ್ ಬಿನ್ ವೀರಯ್ಯ (27 ವರ್ಷ), ಬಿತ್ತರಿ ನೀರಿನ ಕ್ಯಾನ್ ಡಿಲಿವರಿ ಕೆಲಸ, ಕಣ್ಣೂರು, ಕೊಳ್ಳೆಗಾಲ ತಾಲ್ಲೂಕು, ಚಾಮರಾಜನಗರ.
4. ಆಕಾಶ್ ಬಿನ್ ನಾಗರಾಜು (26 ವರ್ಷ), ಟ್ಯಾಟೂ ಕಲಾವಿದ, ಕಣ್ಣೂರು, ಕೊಳ್ಳೆಗಾಲ, ಚಾಮರಾಜನಗರ.
5. ವೆಂಕಟೇಶ್.ಎಸ್ @ ಗಜ ಬಿನ್ ಶಿವಣ್ಣ (26 ವರ್ಷ), ಕಾರು ಚಾಲಕ, ಗುಂಡಶೆಟ್ಟಿಹಳ್ಳಿ, ಚನ್ನರಾಯಪಟ್ಟಣ, ಹಾಸನ.
ವಶಪಡಿಸಿದ ಮಾಲುಗಳು:
23 ಗ್ರಾಂ ತೂಕದ ಚಿನ್ನದ ಸರ
2 ಮಚ್ಚುಗಳು
2 ಡ್ರಾಗನ್‌ಗಳು
2 ರಾಡುಗಳು
ಮಾಸ್ಕ್, ಕೈಕವಚಗಳು, ಹೆಲ್ಮೆಟ್‌ಗಳು
ಬಜಾಜ್ ಪಲ್ಸರ್ 125 ಮತ್ತು ಬಜಾಜ್ ಪಲ್ಸರ್ 150 ಬೈಕ್‌ಗಳು
ಒಟ್ಟು ಮೌಲ್ಯ: ₹4,00,000
ಆರೋಪಿಗಳು ಬಳಸಿದ ವಾಹನಗಳ ವಿವರ:
ಈ ದರೋಡೆಕೋರರು ಬಳಸಿದ ಬೈಕ್‌ಗಳು ಮೈಸೂರಿನ ಘಟನೆಗೆ ಮೊದಲೇ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೋಷಿತ ಪ್ರಕರಣಗಳಾಗಿ ದಾಖಲಾಗಿವೆ:
1. ಗಿರಿನಗರ ಪೊಲೀಸ್ ಠಾಣೆ FIR ಸಂಖ್ಯೆ: 23/2025, ಕಲಂ 303(2) ಬಿ.ಎನ್.ಎಸ್.
2. ಗಿರಿನಗರ ಪೊಲೀಸ್ ಠಾಣೆ FIR ಸಂಖ್ಯೆ: 57/2025, ಕಲಂ 303(2) ಬಿ.ಎನ್.ಎಸ್.
ಆಲನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯ ಶ್ರಮದ ಫಲವಾಗಿ ಪ್ರಕರಣ ಬೆರಿಸಿದ್ದು. ಮಾನ್ಯ ಪೊಲೀಸ್ ಆಯುಕ್ತರು ಈ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ವರದಿ: ಬಸವಣ್ಣ
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…