ಮುಂಡಗೋಡ: ತಾಲೂಕಿನಲ್ಲಿ ಇತ್ತಿಚೆಗೆ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು ಸಾರ್ವಜನಿಕರ, ಪ್ರಯಾಣಿಕರ ನಿದ್ದೆಗೆಡಿಸಿದೆ ಆದರೆ ಉತ್ತರ ಕನ್ನಡ ಜಿಲ್ಲೆಯ ಪೋಲಿಸ್ ಇಲಾಖೆಯ ಉತ್ತಮ ಕಾರ್ಯಾಚರಣೆಯಿಂದ ಹಲವಾರು ಅಕ್ರಮ ಚಟುವಟಿಕೆಗಳು ಹತೋಟಿಗೆ ಬರುತ್ತಿವೆ.
ದಿನಾಂಕ 07/02/2025 ರ ಶುಕ್ರವಾರ ಬೆಳಗಿನ ಜಾವ 6 ಗಂಟೆಯ ಸುಮಾರಿಗೆ ಮುಂಡಗೋಡ ತಾಲೂಕಿನ ಬಡ್ಡಿಗೇರಿ ಗ್ರಾಮದ ಕ್ರಾಸ್ ಕ್ಕಿಂತ ಸುಮಾರು 01 ಕಿಮೀ ದೂರದಲ್ಲಿ ಡಾಂಬರ ರಸ್ತೆಯಲ್ಲಿ ದರೋಡೆ ಮಾಡುವ ಉದ್ದೇಶದಿಂದ ಕಾರು ನಿಲ್ಲಿಸಿಕೊಂಡು ನಿಂತಿದ್ದ ಮಲ್ಲಿಕಜಾನ್ ಶಬ್ಬರ ಶೇಖ್ ಸಾ//ಕಿಲ್ಲೆ ಓಣಿ ಮುಂಡಗೋಡ, ಮಹಮ್ಮದ ಇಬ್ರಾಹಿಂ ರಫಿಕ್ ಮಕ್ಬೂಲ್‌ಸಾಬ ಜಮಖಂಡಿ ಸ//ಚೌಡಳ್ಳಿ ಮುಂಡಗೋಡ, ಶಾಹಿಲ್ ಬಾಬಾಬುಡನ್ ನಂದಿಗಟ್ಟಿ ಸಾ//ಮಾರಿಕಾಂಬಾ ನಗರ ಮುಂಡಗೋಡ, ಹರುಣ ಹಮ್ಮಮ್ ಶೇಖ್ ಕಿಲ್ಲೆ ಓಣಿ ಮುಂಡಗೋಡ, ಮಹಮ್ಮದ ಯೂಸುಪ್ ರಿಯಾಜ್ ಅಹ್ಮದ್ ಗಡವಾಲೆ ಸಾ//ಕಿಲ್ಲೆ ಓಣಿ ಮುಂಡಗೋಡ, ಮಹಮ್ಮದ ಇಸ್ಮಾಯಿಲ್ ತಂದೆ ಸೈಸುದ್ದಿನ್ ಪಾನವಾಲೆ ಸಾ//ದೇಶಪಾಂಡೆನಗರ ಮುಂಡಗೋಡ, ತನ್ನೀರ ಅಬ್ದುಲ್ ಹಮೀದ್ ಅಕ್ಕಿಆಲೂರ ಸಾ//ಇಂದಿರಾನಗರ ಮುಂಡಗೋಡ, ದಾದಾಕಲಂದರ್ ಅಬ್ದುಲ್‌ಖಾದರ್ ಸಾ//ನೂರಾನಿಗಲ್ಲಿ ಮುಂಡಗೋಡ ಇವರನ್ನು ಮುಂಡಗೋಡ ಪೋಲಿಸರು ಬಂಧಿಸಿದ್ದಾರೆ.ಇವರು ದರೋಡೆಗೆ ಬಳಸಲು ತಂದಿದ್ದ ಕಾರು,ಎರಡು ಕಟ್ಟಿಗೆಯ ಬಡಿಗೆಗಳು, ಮೂರು ಕಬ್ಬಿಣದ ರಾಡಗಳು, ಚಾಕು, ಗಮ್ ಟೇಪ್ ಹಾಗೂ ಖಾರದ ಪುಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ .
ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಲು ಎಮ್. ನಾರಾಯಣ ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ, ಜಗದೀಶ ನಾಯ್ಕ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ, ಶ್ರೀ ಗಣೇಶ ಕೆ.ಎಲ್ ಡಿ.ಎಸ್.ವಿ ಶಿರಸಿ ರವರ ಮಾರ್ಗದರ್ಶನದಲ್ಲಿ ಶ್ರೀ ರಂಗನಾಥ ನೀಲಮ್ಮನವರ ಪೊಲೀಸ್ ನಿರೀಕ್ಷಕರು ಮುಂಡಗೋಡ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಪರಸುರಾಮ ಮಿರ್ಜಗಿ, ಹನುಮಂತ ಕುಡಗುಂಟಿ ಹಾಗೂ ಸಿಬ್ಬಂದಿಯವರಾದ ಪಕೋಟೇಶ್ವರ ನಾಗರವಳ್ಳಿ ಅಣ್ಣಪ್ಪ ಬುಡಿಗೇರಿ ಇವರು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇರುತ್ತದೆ. ಸದರಿ ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಮಾನ್ಯ ಪೋಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಶ್ಲಾಘಿಸಿದ್ದು ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ. ವರದಿ: ಮಂಜುನಾಥ್ ಎಫ್ ಹೆಚ್
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…