Categories: CrimeLatest

ನಕಲಿ ಬಂಗಾರ ನೀಡಿ ಲಕ್ಷಾಂತರ ರೂಪಾಯಿಗಳನ್ನು ದೋಚಿದ್ದ ವ್ಯಕ್ತಿಗಳ ಬಂಧನ.

ಇತ್ತೀಚಿನ ದಿನಗಳಲ್ಲಿ ಬಂಗಾರದ ಬೆಲೆ ಗಗನಕ್ಕೆ ಏರುತ್ತಿದ್ದು ಬಡವರು,ಮಧ್ಯಮ ವರ್ಗದವರು ಕೊಂಡುಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ಬಂಗಾರದ ಬೆಲೆ ಬಂದು ನಿಂತಿದೆ.ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಕಿಡಿಗೇಡಿಗಳು ನಕಲಿ ಬಂಗಾರ ನೀಡಿ ದುಡ್ಡು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ.ನಕಲಿ ಬಂಗಾರ ನೀಡಿ ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ, ದಿನಾಂಕ 28-01-2026 ರಂದು ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾಸನಕೆರೆ ಗ್ರಾಮದ ಎನ್ ಎಚ್ -50 ರ ರಸ್ತೆಯಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಸೇರಿಕೊಂಡು ತಮ್ಮ ಮನೆಯ ಪಾಯ ತೆಗೆಯುವ ಸಂದರ್ಭದಲ್ಲಿ ಸುಮಾರು ಒಂದು ಕೆಜಿ ಆಭರಣಗಳು ಸಿಕ್ಕಿದ್ದು, ಅವುಗಳನ್ನು ಮಾರುಕಟ್ಟೆಯ ಬೆಲೆಗಿಂತ ಕಡಿಮೆ ದರದಲ್ಲಿ ನಿಮಗೆ ನೀಡುತ್ತೇವೆ ಎಂದು ಹೇಳಿ ಕಂಟ್ರಾಕ್ಟರ್ ಕೆಲಸ ಮಾಡುವ ಜಿ ಕುಮಾರ್(49 ವರ್ಷ)ಎಂಬ ವ್ಯಕ್ತಿಯನ್ನು ಕ್ಯಾಸನಕೆರೆ ಗ್ರಾಮದ ಅರಣ್ಯ ಪ್ರದೇಶದ ಬಳಿ ಕರೆಯಿಸಿಕೊಂಡು ಅವರ ಬಳಿ ಇದ್ದ ಸುಮಾರು ಮೂವತ್ತು ಲಕ್ಷ ರೂಪಾಯಿಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ.

ಹಣವನ್ನು ಕಳೆದುಕೊಂಡ ವ್ಯಕ್ತಿ ದಿನಾಂಕ 14-03-2026 ರಂದು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸುತ್ತಾರೆ.ಸದರಿ ಪ್ರಕರಣವನ್ನು ದಾಖಲಿಸಿದ ಹೊಸಹಳ್ಳಿ ಪೊಲೀಸ್ ಠಾಣೆಯವರು ಆರೋಪಿಗಳ ಪತ್ತೆಗಾಗಿ ಮಾನ್ಯ ಶ್ರೀ ಎಸ್ ಜಾಹ್ನವಿ ಐಪಿಎಸ್,ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ, ಮತ್ತು ಮಾನ್ಯ ಶ್ರೀ ಮಂಜುನಾಥ್,ಹೆಚ್ಚುವರಿ ಪೊಲೀಸ್ ಅಧೀಕ್ಷಕರು,ವಿಜಯನಗರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಮಲ್ಲೇಶ್ ದೊಡ್ಡಮನಿ ಡಿವೈಎಸ್ಪಿ ಕೂಡ್ಲಿಗಿ ಉಪ ವಿಭಾಗ ಇವರ ನೇತೃತ್ವದಲ್ಲಿ ಶ್ರೀ ಡಿ ದುರುಗಪ್ಪ ಸಿಪಿಐ ಕೊಟ್ಟೂರು,ಶ್ರೀ ಸಿದ್ರಾಮ ಬಿದಾರಾಣಿ ಪಿಸ್ಐ ಹಾಗೂ ಸಿಬ್ಬಂದಿಗಳಾದ ಶ್ರೀ ಅಂಜನಮೂರ್ತಿ,ಎನ್.ಎಂ.ಸ್ವಾಮಿ,ಕೊಟ್ರೇಶ್, ವಿಜಯಕುಮಾರ್,ಮಂಜುನಾಥ್ ಬಿ.ಎಸ್,ಸುರೇಶ್ ಯು,ಕೊಟ್ರೇಶ್ ಅಂಗಡಿ,ಸಿದ್ದಲಿಂಗಪ್ಪ ಕೆ,ಸಂದೀಪ್ ಎಂ,ಬಿಳಿಚೋಡು ಮಾಲತೇಶ, ಕೃಷ್ಣಾನಾಯ್ಕ,ಗೌಡ್ರು ರವಿಚಂದ್ರ,ಕುಮಾರ್ ನಾಯ್ಕ ಇವರನ್ನು ಒಳಗೊಂಡಂತೆ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದರು.ಈ ಪ್ರಕರಣದಲ್ಲಿ ಇಬ್ಬರು ಆರೋಪಿತರನ್ನು ಪತ್ತೆ ಮಾಡಿ ಆರೋಪಿಗಳಿಂದ 29,50,000 ರೂ ಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ನೀಡಿರುತ್ತಾರೆ.ಸದರಿ ತಂಡದ ಕಾರ್ಯಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು,ವಿಜಯನಗರ ಜಿಲ್ಲೆ ರವರು ಪ್ರಸಂಶಿರುತ್ತಾರೆ.

ವರದಿ:- ಮಣಿಕಂಠ. ಬಿ

ಭ್ರಷ್ಟರ ಬೇಟೆ

Recent Posts

ಅಪ್ರಾಪ್ತ ಬಾಲಕನಿಂದ ಡಬಲ್ ಮರ್ಡರ್: ಅಕ್ರಮ ಸಂಬಂಧ ವಿವಾದಕ್ಕೆ ಇಬ್ಬರ ಬಲಿ

ರಾಜಧಾನಿ ಬೆಂಗಳೂರಿನ ಪೀಣ್ಯಾ ಎಚ್‌ಎಂಟಿ ಲೇಔಟ್‌ನಲ್ಲಿ ಅಪ್ರಾಪ್ತ ಬಾಲಕನಿಂದ ನಡೆದ ಡಬಲ್ ಮರ್ಡರ್ ಪ್ರಕರಣ ಜನರನ್ನು ಬೆಚ್ಚಿಬೀಳಿಸಿದೆ. ಅಕ್ರಮ ಸಂಬಂಧದ…

2 hours ago

ಗಾಂಜಾ ಹಣದ ಜಗಳಕ್ಕೆ ಸ್ನೇಹಿತರಿಂದಲೇ ಕೊಲೆ.!!

ಗಾಂಜಾ ವ್ಯಸನ ಮತ್ತು ಹಣದ ವಿಚಾರಕ್ಕೆ ಸಂಬಂಧಿಸಿದ ಭೀಕರ ಕೊಲೆ ಪ್ರಕರಣವೊಂದು ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಡೆಲಿವರಿ ಬಾಯ್…

6 hours ago

ಅಕ್ರಮ ಸಂಬಂಧದ ಅನುಮಾನ: ಬಾಮೈದನನ್ನೇ ಕೊಂದು ಶವದೊಂದಿಗೆ ಠಾಣೆಗೆ ಶರಣಾದ ಭಾವ

ಆನೇಕಲ್ ತಾಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಬಂಧಗಳ ನಡುವಿನ ಗಲಾಟೆ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ತನ್ನ ತಂಗಿಯೊಂದಿಗೆ ಅಕ್ರಮ…

6 hours ago

ತರಗತಿಯಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್: ಅಸಿಸ್ಟೆಂಟ್ ಪ್ರೊಫೆಸರ್ ಬಂಧನ.!

ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು ತರಗತಿಯಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ…

6 hours ago

1ನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯವಲ್ಲ; 60 ದಿನಗಳ ವಯೋಮಿತಿ ಸಡಿಲಿಕೆ.

ಪೋಷಕರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, 2026-27ನೇ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿ ಪ್ರವೇಶದ ಕನಿಷ್ಠ 6 ವರ್ಷದ ವಯೋಮಿತಿಯಲ್ಲಿ…

19 hours ago

ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿ: ಉನ್ನತ ಶಿಕ್ಷಣಕ್ಕೆ ಹೊಸ ಚೈತನ್ಯ

ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಖಾಲಿ ಇರುವ ಸುಮಾರು 4000 ಬೋಧಕ…

1 day ago