ಭಟ್ಕಳ: ಗೋ ಕಳ್ಳತನವೂ ಸೇರಿ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಭಟ್ಕಳದ ಫಾರುಕ್ ಭೋಗಿಬಾಷಾ ಎಂಬಾತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಿರಾಳಕೊಪ್ಪದ ಹಳ್ಳೂರುಕೇರಿಯ ಪಾರುಕ್ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ ಕಳ್ಳತನ ನಡೆಸುತ್ತಿದ್ದ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಜಾನುವಾರು ಕಳ್ಳತನ ಪ್ರಕರಣವನ್ನು ಆತ ಎದುರಿಸುತ್ತಿದ್ದ. ಇದರೊಂದಿಗೆ ಸಿದ್ದಾಪುರದಲ್ಲಿ ದೇವಾಲಯ ದರೋಡೆ ಸೇರಿ ಶಿವಮೊಗ್ಗ-ಸೊರಬ ಪೊಲೀಸ್ ಠಾಣೆಗಳಲ್ಲಿಯೂ ಆತನ ವಿರುದ್ಧ ದೂರುಗಳು ದಾಖಲಾಗಿದ್ದವು.ಈ ಫಾರುಕ್ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯದಿಂದ ವಾರೆಂಟ್ ಸಹ ಆಗಿತ್ತು. ಆದರೂ, ಆತ ಸಿಕ್ಕಿರಲಿಲ್ಲ. 15ಕ್ಕೂ ಅಧಿಕ ಪ್ರಕರಣಗಳು ಆತನ ಮೇಲಿರುವುದರಿಂದ ಪೊಲೀಸರು ತಂಡ ರಚಿಸಿಕೊಂಡು ಹುಡುಕಾಟ ನಡೆಸಿದ್ದರು. ಹೀಗಾಗಿ ಆತ ಇದೀಗ ಸಿಕ್ಕಿ ಬಿದ್ದಿದ್ದು, ನ್ಯಾಯಾಲಯ ಆತನ ಪ್ರಕರಣಗಳ ವಿಚಾರಣೆ ನಡೆಸಿದೆ.
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…
ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…