Latest

ಅಕ್ರಮ ಸಂಬಂಧದ ಆರೋಪ: ಆಂಟಿ ಜೊತೆ ಯುವಕನಿಗೆ ಬಲವಂತ ಮದುವೆ ಮಾಡಿಸಿದ ಗ್ರಾಮಸ್ಥರು.!

ಪಾಟ್ನಾ, ಜುಲೈ 2: ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಅಕ್ರಮ ಸಂಬಂಧ ಆರೋಪದಿಂದ ಮುಜುಗರ ಸೃಷ್ಠಿಯಾಗಿರುವ ಘಟನೆ ನಡೆದಿದೆ. ಗಂಡನೆ ಇಲ್ಲದ ಸಮಯದಲ್ಲಿ ಆಂಟಿಯೊಂದಿಗೆ ಅಕ್ರಮ ಸಂಬಂಧದಲ್ಲಿದ್ದ ಯುವಕನೊಬ್ಬನಿಗೆ ಗ್ರಾಮಸ್ಥರು ಚುಟುಕು ನ್ಯಾಯವಿಧಾನ ಮಾಡಿ, ಸ್ಥಳದಲ್ಲೇ ಆಂಟಿಯ ಜತೆ ಮದುವೆ ಮಾಡಿ ಬಿಟ್ಟ ಘಟನೆ ಭೀಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೀವ್‌ಚಾಪುರ ವಾರ್ಡ್ ಸಂಖ್ಯೆ 8ರಲ್ಲಿ ಬೆಳಕಿಗೆ ಬಂದಿದೆ.

24 ವರ್ಷದ ಮಿಥಿಲೇಶ್ ಕುಮಾರ್ ಮಖಿಯಾ ಎಂಬ ಯುವಕನನ್ನು ಜುಲೈ 2 ರಂದು ಕೆಲವರು ಅಪಹರಿಸಿ, ಅವನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ತನ್ನ ಚಿಕ್ಕಪ್ಪ ಶಿವಚಂದ್ರ ಮುಖಿಯಾ ಮನೆಗೆ ಕರೆದೊಯ್ದು, ಅಲ್ಲಿ ಕಠಿಣವಾಗಿ ಕೇಳುತ್ತಾ, ಆತ ತನ್ನ ಚಿಕ್ಕಪ್ಪನ ಪತ್ನಿ ರೀಟಾ ದೇವಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಹೀಗಾಗಿ ಗ್ರಾಮಸ್ಥರು ಮಿಥಿಲೇಶ್ ಮತ್ತು ರೀಟಾ ದೇವಿಗೆ ಸ್ಥಳದಲ್ಲೇ ಧಾರ್ಮಿಕ ವಿಧಿವಿಧಾನಗಳಿಲ್ಲದೇ ಮದುವೆ ಮಾಡಿ ಬಿಟ್ಟಿದ್ದಾರೆ. ಇದು ಗ್ರಾಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಚಿತ್ರವೆಂದರೆ, ರೀಟಾ ದೇವಿಗೆ ಈಗಾಗಲೇ ನಾಲ್ಕು ವರ್ಷದ ಪುತ್ರನೊಬ್ಬನಿದ್ದಾನೆ. ಈ ಸಂಬಂಧವನ್ನ ವಿರೋಧಿಸಿದ ಮಿಥಿಲೇಶ್ ತಂದೆ ರಾಮಚಂದ್ರ ಮತ್ತು ರೀಟಾ ಅವರೂ ಹಲ್ಲೆಗೆ ಗುರಿಯಾಗಿದ್ದಾರೆ ಎನ್ನಲಾಗಿದೆ.

ಪೊಲೀಸರು ಈ ಘಟನೆಯ ಕುರಿತು ತನಿಖೆ ಮುಂದುವರಿಸಿದ್ದು, ಗ್ರಾಮಸ್ಥರ ಕೈಕೊಟ್ಟ ನ್ಯಾಯವಿಧಾನ ಪ್ರಶ್ನೆಗೆ ಒಳಪಟ್ಟಿದೆ. ಇದೊಂದು ಸಾಮಾಜಿಕ ವ್ಯವಸ್ಥೆಯ ವಿರೋಧಿ ಘಟನೆ ಎಂಬಂತೆ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

nazeer ahamad

Recent Posts

ಬಾಗಲಕೋಟೆ ನಗರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಬಾಗಲಕೋಟೆ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ವಸಂತ ವಾಲಪ್ಪ ನಾಯಕ ಅವರ ಬೆಂಗಳೂರು ಸೇರಿದಂತೆ ಬಾಗಲಕೋಟೆಯಲ್ಲಿರುವ ಮನೆಯ…

5 days ago

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

2 weeks ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

3 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

4 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

1 month ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

2 months ago