
ಪಾಟ್ನಾ, ಜುಲೈ 2: ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಅಕ್ರಮ ಸಂಬಂಧ ಆರೋಪದಿಂದ ಮುಜುಗರ ಸೃಷ್ಠಿಯಾಗಿರುವ ಘಟನೆ ನಡೆದಿದೆ. ಗಂಡನೆ ಇಲ್ಲದ ಸಮಯದಲ್ಲಿ ಆಂಟಿಯೊಂದಿಗೆ ಅಕ್ರಮ ಸಂಬಂಧದಲ್ಲಿದ್ದ ಯುವಕನೊಬ್ಬನಿಗೆ ಗ್ರಾಮಸ್ಥರು ಚುಟುಕು ನ್ಯಾಯವಿಧಾನ ಮಾಡಿ, ಸ್ಥಳದಲ್ಲೇ ಆಂಟಿಯ ಜತೆ ಮದುವೆ ಮಾಡಿ ಬಿಟ್ಟ ಘಟನೆ ಭೀಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೀವ್‌ಚಾಪುರ ವಾರ್ಡ್ ಸಂಖ್ಯೆ 8ರಲ್ಲಿ ಬೆಳಕಿಗೆ ಬಂದಿದೆ.
24 ವರ್ಷದ ಮಿಥಿಲೇಶ್ ಕುಮಾರ್ ಮಖಿಯಾ ಎಂಬ ಯುವಕನನ್ನು ಜುಲೈ 2 ರಂದು ಕೆಲವರು ಅಪಹರಿಸಿ, ಅವನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ತನ್ನ ಚಿಕ್ಕಪ್ಪ ಶಿವಚಂದ್ರ ಮುಖಿಯಾ ಮನೆಗೆ ಕರೆದೊಯ್ದು, ಅಲ್ಲಿ ಕಠಿಣವಾಗಿ ಕೇಳುತ್ತಾ, ಆತ ತನ್ನ ಚಿಕ್ಕಪ್ಪನ ಪತ್ನಿ ರೀಟಾ ದೇವಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಹೀಗಾಗಿ ಗ್ರಾಮಸ್ಥರು ಮಿಥಿಲೇಶ್ ಮತ್ತು ರೀಟಾ ದೇವಿಗೆ ಸ್ಥಳದಲ್ಲೇ ಧಾರ್ಮಿಕ ವಿಧಿವಿಧಾನಗಳಿಲ್ಲದೇ ಮದುವೆ ಮಾಡಿ ಬಿಟ್ಟಿದ್ದಾರೆ. ಇದು ಗ್ರಾಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವಿಚಿತ್ರವೆಂದರೆ, ರೀಟಾ ದೇವಿಗೆ ಈಗಾಗಲೇ ನಾಲ್ಕು ವರ್ಷದ ಪುತ್ರನೊಬ್ಬನಿದ್ದಾನೆ. ಈ ಸಂಬಂಧವನ್ನ ವಿರೋಧಿಸಿದ ಮಿಥಿಲೇಶ್ ತಂದೆ ರಾಮಚಂದ್ರ ಮತ್ತು ರೀಟಾ ಅವರೂ ಹಲ್ಲೆಗೆ ಗುರಿಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸರು ಈ ಘಟನೆಯ ಕುರಿತು ತನಿಖೆ ಮುಂದುವರಿಸಿದ್ದು, ಗ್ರಾಮಸ್ಥರ ಕೈಕೊಟ್ಟ ನ್ಯಾಯವಿಧಾನ ಪ್ರಶ್ನೆಗೆ ಒಳಪಟ್ಟಿದೆ. ಇದೊಂದು ಸಾಮಾಜಿಕ ವ್ಯವಸ್ಥೆಯ ವಿರೋಧಿ ಘಟನೆ ಎಂಬಂತೆ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.